ಕಿನ್ನಿಗೋಳಿ:ಇವನೊಬ್ಬ ವಿಚಿತ್ರ ವ್ಯಕ್ತಿ. ಆತನ ವರ್ತನೆಯೂ ವಿಚಿತ್ರ. ಎಲ್ಲರೂ ಹೊಟ್ಟೆಪಾಡಿಗಾಗಿ ದುಡಿದರೆ ಈತ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ದುಡಿಯುತ್ತಿದ್ದ. ಹಿಂದುಗಳ ಮನೆಯಲ್ಲಿ ಕೆಲಸ ಮಾಡಿದರೆ ತನಗೆ ಬಂದ ಹಣವನ್ನು ದೇವಸ್ಥಾನಕ್ಕೆ ಹೋಗಿ ಹುಂಡಿಗೆ ಹಾಕಿಬರುತ್ತಿದ್ದ! ಕ್ರೈಸ್ತರ ಮನೆಯಲ್ಲಿ ಕೆಲಸ ಮಾಡಿದರೆ ಅದರಿಂದ ಬಂದ ಹಣವನ್ನು ಚರ್ಚ್‌ಗೆ ನೀಡಿ ಎಂದು ಹೇಳುತ್ತಿದ್ದ!
ಅಂತಹ ವ್ಯಕ್ತಿ ದಿಢೀರನೆ ಒಂದು ಕೊಲೆ ಮಾಡಿಬಿಟ್ಟಿದ್ದಾನೆ. ಆತನ ಹೆಸರು ಅಲ್ಫೊನ್ಸೋ ಸಲ್ಡಾನ (51). ಏಳಿಂಜೆ ಮುತ್ತಯ್ಯ ಕೆರೆ ಸಮೀಪ ಆತನ ಮನೆ. ತನ್ನ ನೆರೆಮನೆ ನಿವಾಸಿಗಳಾದ ವಿನ್ಸೆಂಟ್ ಡಿಸೋಜ (48), ಪತ್ನಿ ಹೆಲೆನ್ ಡಿಸೋಜ (43) ಎಂಬ ದಂಪತಿಯನ್ನು ಹಾಡಹಗಲೇ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಸುಳ್ಳು ಹೇಳಿ ಬಾಯ್​ಫ್ರೆಂಡ್​ ನೋಡಲು ಹೋದ ಕೇರಳ ಬ್ಯೂಟಿಷಿಯನ್ ದುರಂತ ಅಂತ್ಯವಾಗಿದ್ದು ಹೇಗೆ?​
ವಿನ್ಸೆಂಟ್ ಡಿಸೋಜ ಸೇನೆಯಲ್ಲಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಹೊಂದಿದ್ದು, ಕೆಲ ವರ್ಷಗಳಿಂದ ಏಳಿಂಜೆ ಮುತ್ತಯ್ಯ ಕೆರೆ ಸಮೀಪ ವಾಸವಾಗಿದ್ದರು. ಜಾಗಕ್ಕೆ ಸಂಬಂಧಿಸಿ ಅಲ್ಫೊನ್ಸೋ ಜತೆ ವೈಮನಸ್ಸು ಇತ್ತು. ಕೆಲ ಸಮಯದಿಂದ ಸಣ್ಣ ಪುಟ್ಟ ಗಲಾಟೆ ನಡೆಯುತ್ತಿತ್ತು. ಬುಧವಾರ ಮಧ್ಯಾಹ್ನ ಸುಮಾರು 11.30ರ ಹೊತ್ತಿಗೆ ಆರೋಪಿ ಅಲ್ಫೊನ್ಸೋ, ವಿನ್ಸೆಂಟ್ ಡಿಸೋಜ ದಂಪತಿಗೆ ಅವಾಚ್ಯವಾಗಿ ನಿಂದಿಸಿದ್ದ. ಇದನ್ನು ಪ್ರಶ್ನಿಸಲು ವಿನ್ಸೆಂಟ್ ಅವರು ಅಲ್ಫೊನ್ಸೋ ಮನೆಗೆ ಬಂದಿದ್ದರು. ಆಗ ಕೂಡಲೇ ಅಲ್ಫೊನ್ಸೋ ಚಾಕು ತಂದು ವಿನ್ಸೆಂಟ್‌ಗೆ ಇರಿದಿದ್ದಾನೆ. ತಡೆಯಲು ಬಂದ ಹೆಲೆನ್ ಅವರಿಗೂ ಇರಿದಿದ್ದಾನೆ. ವಿನ್ಸೆಂಟ್ ಸ್ಥಳದಲ್ಲೇ ಮೃತಪಟ್ಟರೆ, ಹೆಲೆನ್ ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ಅಸು ನೀಗಿದ್ದಾರೆ.
ಈ ನಡುವೆ ಅಲ್ಫೊನ್ಸೋ ತಾನೇ ಎಸಿಪಿಗೆ ಕರೆ ಮಾಡಿ ತನ್ನ ಮೇಲೆ ಹಲ್ಲೆ ನಡೆಯುತ್ತಿದೆ ಎಂದು ಹೇಳಿದ್ದಾನೆ. ಪೊಲೀಸರ ಬರುವ ಹೊತ್ತಿಗೆ ದುರ್ಘಟನೆ ನಡೆದುಹೋಗಿತ್ತು. ಆಲ್ಫೋನ್ಸೊನನ್ನು ಪೊಲೀಸರು ಬಂಧಿಸಿದ್ದಾರೆ.
ನಿಖಿಲ್ ಮದುವೆಗೆ ನೀಡಿದ ಪಾಸ್ ಕುರಿತು ಇನ್ನೂ ಏಕೆ ವರದಿ ಸಲ್ಲಿಸಿಲ್ಲ: ಸರ್ಕಾರಕ್ಕೆ ಹೈಕೋರ್ಟ್ ತರಾಟೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × five =
Remember me
