ಅಂಕೋಲಾ:ಅತಿ ನಾಚಿಕೆ ಸ್ವಭಾವ ಹೊಂದಿರುವ ಹಾರ್ನ್​ಬಿಲ್ (ಮಂಗಟ್ಟೆ)ಪಕ್ಷಿ ಅಂಕೋಲಾದ ಕುಟುಂಬವೊಂದರ ಮಾನವರ ಸಾಂಗತ್ಯ ಸಾಧಿಸಿ ಅಚ್ಚರಿ ಮೂಡಿಸಿದೆ.
ಹೊನ್ನಿಕೇರಿ ಗ್ರಾಮದ ಕೃಷ್ಣಾನಂದ ಶೆಟ್ಟಿ ಅವರ ಮನೆಗೆ ಕಳೆದ 6 ತಿಂಗಳಿಂದ ಹಾರ್ನ್​ಬಿಲ್ ಪ್ರತಿ ದಿನ ಬೆಳಗ್ಗೆ, ಮಧ್ಯಾಹ್ನ ಹಾಗೂ ಸಾಯಂಕಾಲ ಸೇರಿ ಮೂರು ಬಾರಿ ಬರುತ್ತದೆ. ಅವರು ಕೊಟ್ಟ ಆಹಾರ ತಿನ್ನುತ್ತದೆ. ಮನೆಯವರೊಟ್ಟಿಗೆ ಆಟವಾಡುತ್ತದೆ. ಶೆಟ್ಟಿ ಅವರ ಚಿಕ್ಕ ಮಗ ಅಕ್ಷಯ ಎಂದರೆ ಎಲ್ಲಿಲ್ಲದ ಪ್ರೀತಿ ಆತನೊಟ್ಟಿಗೆ ಕಣ್ಣಾಮುಚ್ಚಾಲೆ ಆಡುತ್ತದೆ. ಇದನ್ನು ನೋಡಲು ಈಗ ಹಲವರು ಅವರ ಮನೆಗೆ ಭೇಟಿ ನೀಡುತ್ತಿದ್ದಾರೆ.
ಕನ್ನಡದಲ್ಲಿ ಮಂಗಟ್ಟೆ ಎಂದು ಕರೆಸಿಕೊಳ್ಳುವ ದೊಡ್ಡ ದೇಹ, ಅದಕ್ಕಿಂದ ದೊಡ್ಡ ಕೊಕ್ಕು ಅದರ ಮೇಲೊಂದು ಆಕರ್ಷಕ ಕಿರೀಟ ಹೊಂದಿರುವ ಅಪರೂಪದ ಪಕ್ಷಿ ಹಾರ್ನ್​ಬಿಲ್. ಉತ್ತರ ಕನ್ನಡದಲ್ಲಿ ನಾಲ್ಕು ಪ್ರಭೇದದ ಹಾರ್ನ್​ಬಿಲ್​ಗಳಿವೆ. ಅದರಲ್ಲಿ ಇದು ಗ್ರೇಟ್ ಇಂಡಿಯನ್ ಅಥವಾ ಗ್ರೇಟ್ ಪೈಡ್ ಹಾರ್ನ್ ಬಿಲ್ ಎಂದು ಕರೆಯಲ್ಪಡುತ್ತದೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:13 + 20 =
Remember me
