ಉಡುಪಿ:ರೂಪ, ಬಣ್ಣ ಬದಲಿಸಿಕೊಳ್ಳುವ ಪ್ರಾಣಿಗಳ ಬಗ್ಗೆ ಕೇಳಿರುತ್ತೇವೆ. ಆದರೆ ಎಲ್ಲಾದರೂ ಆಕಾರ ಬದಲಿಕೊಂಡಿರುವ ಮಾವಿನ ಹಣ್ಣಿನ ಬಗ್ಗೆ ಕೇಳಿದ್ದೀರಾ? ಬೇವಿನ ಮರದ ಮೇಲೆ ಮಾವಿನ ಹಣ್ಣು ಹೇಗೆ ಬೆಳೆಯುವುದಿಲ್ಲವೋ, ಹಾಗೆಯೇ ಇದೂ ಅಸಾಧ್ಯ.
ಆದೆರೆ ಉಡುಪಿ ಜಿಲ್ಲೆಯ ಕೋಟದಲ್ಲಿ ಮಾತ್ರ ಈ ಮಾವಿನ ಹಣ್ಣುಗಳು ಪ್ರಕೃತಿ ವೈಚಿತ್ರ್ಯವನ್ನು ತೋರಿಸಿ ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದೆ. ಈ ಮಾವಿನ ಹಣ್ಣುಗಳು ಸೀಮೆ ಬದನೆಕಾಯಿ ರೂಪದಲ್ಲಿದ್ದು ಉದ್ಯಮಿ ಕೋಟ ಸುಬ್ರಾಯ ಆಚಾರ್ಯ ಅವರ ಮನೆಯಲ್ಲಿ ಬೆಳೆದಿವೆ.
ಸಾಮಾನ್ಯವಾಗಿ ಎಲ್ಲಾ ಮಾವಿನ ಹಣ್ಣುಗಳು ಒಂದೇ ರೂಪದಲ್ಲಿರುತ್ತವೆ. ಕೆಲವು ದೊಡ್ಡವು, ಕೆಲವು ಚಿಕ್ಕವು. ಆದರೆ ಈ ಹಣ್ಣುಗಳನ್ನು ಮಾವು ಎಂದು ಗುರುತಿಸುವುದೆ ಕಷ್ಟ. ಆ ಆಕೃತಿಯಲ್ಲಿ ಬೆಳೆದಿವೆ ಇವು. ಇವುಗಳನ್ನು ಕೇವಲ ವಾಸನೆ ಆದಾರದ ಮೇಲೆ ಗುರುತಿಲು ಸಾಧ್ಯ.
ಸದ್ಯ ಕೃಷಿ ತಜ್ಞರಿಗೆ ಈ ಅಪರೂಪದ ಮಾವಿನ ಹಣ್ಣುಗಳು ಸವಾಲಾಗಿವೆ. ಈ ಬಗ್ಗೆ ಮಾಲಕ ಸುಬ್ರಾಯ ಆಚಾರ್ಯ ಪ್ರತಿಕ್ರಿಯೆ ನೀಡಿದ್ದು “ನಮ್ಮ ಮನೆಯಲ್ಲಿ ಸುಮಾರು 35 ವರ್ಷದಿಂದ ಮಾವಿನ ಹಣ್ಣು ಬಿಡುತ್ತಿದೆ. ಇದೇ ಮೊದಲ ಬಾರಿಗೆ ಸಾಮಾನ್ಯ ಮಾವಿನ ಹಣ್ಣುಗಳ ಜೊತೆ ಐದಾರು ಮಾವಿನ ಕಾಯಿ‌ ಈ ರೂಪ ತಾಳಿವೆ.
ಸೀಮೆಬದನೆ ರೂಪದ ಮಾವಿನ ಹಣ್ಣು! ಉಡುಪಿಯಲ್ಲಿ ಪ್ರಕೃತಿ ವೈಚಿತ್ರ್ಯ ಪತ್ತೆ…#mango#unusual#agriculture#udupi#unnatural#fruitninja#fruitking#kannadanews#vijayavanihttps://t.co/svhdAkxLjLpic.twitter.com/7fbRWehO1D— Vijayavani Digital (@Vijayavani_Digi)May 18, 2023
ಸೀಮೆಬದನೆ ರೂಪದ ಮಾವಿನ ಹಣ್ಣು! ಉಡುಪಿಯಲ್ಲಿ ಪ್ರಕೃತಿ ವೈಚಿತ್ರ್ಯ ಪತ್ತೆ…#mango#unusual#agriculture#udupi#unnatural#fruitninja#fruitking#kannadanews#vijayavanihttps://t.co/svhdAkxLjLpic.twitter.com/7fbRWehO1D
ಇದರ ಪರಿಮಳ ಹಾಗೂ ಒಳಭಾಗದ ಬಣ್ಣ ಎಲ್ಲವೂ ಮಾವಿನ ಕಾಯಿಯಂತಿದೆ. ಮೊದಲ ಬಾರಿ ಸೀತಾಫಲದ ರೂಪದಲ್ಲಿ ಮಾವಿನ ಕಾಯಿ ಕಂಡಿದೆ. ಇದಕ್ಕೆ ಹಿನ್ನಲೆ ಏನು ಅನ್ನೋದನ್ನ ‌ಕೃಷಿ ತಜ್ಞರ ಮೂಲಕವೇ ತಿಳಿಯಬೇಕಿದೆ” ಎಂದಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + 3 =
Remember me
