ಮಹದೇವಪುರ: ಬೆಂಗಳೂರು ಪೂರ್ವ ತಾಲೂಕಿನ ಮಹದೇವಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಂಜುಳಾ ಅರವಿಂದ ಲಿಂಬಾವಳಿ ಶುಕ್ರವಾರ ಸಾವಿರಾರು ಕಾರ್ಯಕರ್ತ ರೊಂದಿಗೆ ಬೃಹತ್ ರೋಡ್ ಶೋ ನಡೆಸುವ ಮೂಲಕ ಅಬ್ಬರದ ಪ್ರಚಾರ ನಡೆಸಿದರು.
ಪತಿ ಅರವಿಂದ ಲಿಂಬಾವಳಿ ಅವರ ಪಕ್ಷ ಸಂಘಟನೆ, ಅಭಿವೃದ್ಧಿ ಕಾರ್ಯ ಮೆಚ್ಚಿ ಕಾಂಗ್ರೆಸ್​ನ ಹಿರಿಯ ಮುಖಂಡರಾದ ಜಿ.ಎಂ. ನಾರಾಯಣ್, ಎಚ್.ಕೆ. ನಾರಾಯಣಸ್ವಾಮಿ, ರಘು ಸೇರಿ ನೂರಾರು ಕಾಂಗ್ರೆಸ್ ಮುಖಂಡರಿಗೆ ಪಕ್ಷದ ಶಾಲು ಹಾಕುವ ಮೂಲಕ ಬಿಜೆಪಿಗೆ ಬರಮಾಡಿಕೊಂಡರು.
ಇದನ್ನೂ ಓದಿ:ಮಾತಿನ ಮಹತ್ವ ಅರಿಯಲಿ: ಸ್ವಯಂಪ್ರೇರಿತ ದೂರು ದಾಖಲಿಸಲು ಸುಪ್ರೀಂಕೋರ್ಟ್ ಸೂಚನೆ
ಕ್ಷೇತ್ರದ ಚಿಕ್ಕ ಬೈರತಿ ಗ್ರಾಮದಿಂದ ಪ್ರಾರಂಭವಾದ ಚುನಾವಣಾ ಪ್ರಚಾರ ಬೈರತಿ, ಬಂಡೆ ಹೊಸೂರು, ಮಿಟ್ಟಿಗಾನಹಳ್ಳಿ, ಕಾಡುಸೊಣ್ಣಪ್ಪನ ಹಳ್ಳಿ, ಚಿಕ್ಕಗುಬ್ಬಿ, ಯರ›ಪ್ಪನಹಳ್ಳಿ, ಕಾಡ ಅಗ್ರಹಾರ, ಬೊಮ್ಮಸಂದ್ರ, ದೊಡ್ಡಗುಬ್ಬಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಂಜುಳಾ ಮತಯಾಚಿಸಿದರು.
15 ವರ್ಷಗಳಿಂದ ನನ್ನ ಪತಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ನಾವಿಬ್ಬರೂ ಡಬಲ್ ಇಂಜಿನ್ ಸರ್ಕಾರದಂತೆ ನಿಮ್ಮ ಮನೆ ಮಗಳಾಗಿ ಸೇವೆ ಸಲ್ಲಿಸಲು ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡಿಕೊಂಡರು.
ಪ್ರಚಾರ ಕಣದಲ್ಲಿ ಇಂದಿನಿಂದ ಪ್ರಧಾನಿ ಮೋದಿ ಅಬ್ಬರ: ಇಂದು 3 ಪ್ರಚಾರಸಭೆ, ರಾಜಧಾನಿಯಲ್ಲಿ ರೋಡ್ ಶೋ

ಸುಡಾನ್​ನಿಂದ 754 ಮಂದಿ ಸ್ವದೇಶಕ್ಕೆ ವಾಪಸ್: ಆಪರೇಷನ್ ಕಾವೇರಿ ಮೂಲಕ ಈವರೆಗೆ 1,360 ಭಾರತೀಯರ ರಕ್ಷಣೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × three =
Remember me
