ಮಹದೇವಪುರ:ಮಹದೇವಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಂಜುಳಾ ಅರವಿಂದ ಲಿಂಬಾವಳಿ ಸಾವಿರಾರು ಬೆಂಬಲಿಗರೊಂದಿಗೆ ಕುರುಡು ಸೊಣ್ಣೇನಹಳ್ಳಿ, ಕೆ.ದೊಮ್ಮಸಂದ್ರ, ಬೆಳತೂರು, ಬೆಳತೂರು ಕಾಲನಿ, ಕುಂಬೇನಹಳ್ಳಿ ಅಗ್ರಹಾರ, ವಿಜಯಲಕ್ಷ್ಮಿ ಕಾಲನಿ. ಕಾಡುಗುಡಿ ಸೇರಿ ವಿವಿಧ ಬಡಾವಣೆಗಳಲ್ಲಿ ರೋಡ್ ಶೋ ಮೂಲಕ ಮತಯಾಚಿಸಿದರು.
ಇದನ್ನೂ ಓದಿ:ಪ್ರಧಾನಿಯನ್ನು ನೋಡಲು ಬಂದ ಬಜರಂಗಿಗಳು!
ನಂತರ ಮತನಾಡಿದ ಅವರು, ಕೇಂದ್ರ ಹಾಗೂ ರಾಜ್ಯದ ಡಬಲ್ ಇಂಜಿನ್ ಸರ್ಕಾರದ ನೇತೃತ್ವದಲ್ಲಿ ಪತಿ ಶಾಸಕ ಅರವಿಂದ ಲಿಂಬಾವಳಿ ನಿರಂತರ ಪರಿಶ್ರಮದಿಂದ ರಸ್ತೆ, ಕೆರೆ, ಪಾರ್ಕ್, ಆರೋಗ್ಯ ಕೇಂದ್ರ, ಮೆಟ್ರೋ, ರಸ್ತೆ ಸೇರಿ ಹಲವಾರು ಅಭಿವೃದ್ದಿ ಕಾರ್ಯಗಳು ನಡೆದಿವೆ. ಕಾಡುಗುಡಿಯಲ್ಲಿ ಮೆಟ್ರೋ ಕಾಮಗಾರಿ ಪೂರ್ಣಗೊಂಡು ಪ್ರಧಾನಿ ಮೋದಿ ಉದ್ಘಾಟಿಸಿದ್ದು, ಉಳಿದ ಮಾರ್ಗದ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.
ಅಲ್ಲದೆ ವಾರಣಾಸಿಯಲ್ಲಿ ನಮ್ಮ ಕ್ಲಿನಿಕ್, ಬೆಳತ್ತೂರಿನಿಂದ ಮೇಡಹಳ್ಳಿ ಸೇರುವ 80 ಅಡಿ ರಸ್ತೆ ನಿರ್ವಣ, 30 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಬೆಳತ್ತೂರು ಕಾಲನಿ ಮಸೀದಿ ರಸ್ತೆ ನಿರ್ವಣ, ಬೈರತಿ ಬೆಸ್ಸಿಂಗ್ ಗಾರ್ಡನ್​ನಿಂದ ಗೆದ್ದಲಹಳ್ಳಿ ರಸ್ತೆಯ ಅಭಿವೃದ್ಧಿ, ಬಿಳಿಶಿವಾಲೆಯಿಂದ ದೊಡ್ಡಗುಬ್ಬಿ ರಸ್ತೆಯ ಅಭಿವೃದ್ಧಿ, 32 ವರ್ಷಗಳಿಂದ ನಿಂತುಹೋಗಿದ್ದ ಬೈರತಿ ಚರ್ಚ್ ಮುಖ್ಯರಸ್ತೆ, ಚರಂಡಿ ಮತ್ತು ರಸ್ತೆಗಳ ಅಭಿವೃದ್ಧಿ, ಬೆಳತ್ತೂರು ವಾರ್ಡ್​ನಲ್ಲಿ ಬೀದಿ ದೀಪಗಳ ಅಳವಡಿಕೆಯಾಗಿದೆ. ಬೈರತಿ, ಬಿಳಿಶಿವಾಲೆ, ವಾರಣಾಸಿ, ಬೆಳತ್ತೂರು, ಬೆಳತ್ತೂರು ಕಾಲನಿಗಳಲ್ಲಿ ಬೆಸ್ಕಾಂ ಮತ್ತು ಯುಜಿ ಕೇಬಲ್ ಅಳವಡಿಕೆ ಕಾಮಗಾರಿ ಪ್ರಗತಿಯಲ್ಲಿದ್ದು, ಹೀಗೆ ಇನ್ನೂ ಹಲವಾರು ಅಭಿವೃದ್ಧಿ ಕೆಲಸಗಳ ಅಭಿವೃದ್ಧಿಯ ಮುನ್ನಡೆಗಾಗಿ ಬಿಜೆಪಿಗೆ ಮತ ನೀಡಿ ಎಂದು ಮಂಜುಳಾ ಲಿಂಬಾವಳಿ ಮನವಿ ಮಾಡಿದರು.
ಇದನ್ನೂ ಓದಿ:ಪ್ರಧಾನಿ ಬೆಂಗಳೂರು ರೋಡ್ ಶೋ ಸಕ್ಸೆಸ್ | ಎರಡು ದಿನವೂ ಮೊಳಗಿದ ‘ಮೋದಿ’ ಘೋಷಣೆ; ಬಿಜೆಪಿಗೆ ಸಿಕ್ತು ಬಿಗ್ ಬೂಸ್ಟ್
ಬಿಜೆಪಿ ಮುಖಂಡರಾದ ರಾಮಾಂಜಿನಿ, ಕೃಷ್ಣಮೂರ್ತಿ, ಮಧು, ಸೋಮಶೇಖರ್, ಹೂಡಿ ಮಂಜುನಾಥ್, ಯಲ್ಲಪ್ಪ, ವೇಲು, ಮಂಜು, ಕೃಷ್ಣ, ಸುರೇಶ್ ಬಾಬು, ಗೋಪಾಲ್, ಸೋಮಶೇಖರ್, ಮುಕುಂದ, ಚಂದ್ರಪ್ಪ, ಲಕ್ಷೀಶ್, ಕೋಮಲ ಮತ್ತಿತರರು ಹಾಜರಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − fourteen =
Remember me
