ಬೆಂಗಳೂರು:ಶತಾವಧಾನಿ ಡಾ. ಆರ್​. ಗಣೇಶ್​ ಅವರ ಮೊದಲ ಕಾದಂಬರಿ ‘ಮಣ್ಣಿನ ಕನಸು’ ಶುಕ್ರವಾರ ಬಿಡುಗಡೆಯಾಯಿತು.
ಬಸವನಗುಡಿಯ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯ ಡಿವಿಜಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾಡೋಜ ಎಸ್​. ಆರ್​. ರಾಮಸ್ವಾಮಿ ಅವರು ಕಾದಂಬರಿಯನ್ನು ಲೋಕಾರ್ಪಣೆಗೊಳಿಸಿದರು.
ಭಾಸನ ಸ್ವಪ್ನ ವಾಸವದತ್ತ ಹಾಗೂ ಶೂದ್ರಕನ ಮೃಚ್ಛಕಟಿಕಂ ನಾಟಕಗಳ ಪಾತ್ರಗಳನ್ನು ಒಳಗೊಂಡ ಈ ಕಾದಂಬರಿಯಲ್ಲಿ ಅಂದಿನ ಸಾಂಸ್ಕೃತಿಕ ಮತ್ತು ರಾಜಕೀಯ ಜೀವನದ ಸಾಕಷ್ಟು ವಿವರಗಳಿವೆ. ಓದುಗರ ಮನಸ್ಸನ್ನು ಕಾಡುವ ದಟ್ಟವಾದ ಪಾತ್ರಗಳನ್ನು ಹೆಣೆಯಲಾಗಿದ್ದು, ಈ ಕಾದಂಬರಿ ಗಣೇಶ್ ಅವರ ಕ್ರಿಯಾಶೀಲತೆಗೆ ಹಿಡಿದ ಕನ್ನಡಿ ಎಂದು ರಾಮಸ್ವಾಮಿ ಪ್ರಶಂಸಿಸಿದರು.
ಕಾದಂಬರಿ ಕುರಿತು ಲೇಖಕ ಮತ್ತು ಸಾಫ್ಟ್​ವೇರ್​ ತಂತ್ರಜ್ಞ ಎಚ್​.ಎ. ವಾಸುಕಿ ಮಾತನಾಡಿ, ಎಲ್ಲ ಪಾತ್ರಗಳನ್ನು ಸನ್ನಿವೇಶಕ್ಕೆ ತಕ್ಕ ಹಾಗೆ ಬಹಳ ರೋಚಕವಾಗಿ ಮತ್ತು ಅರ್ಥಪೂರ್ಣವಾಗಿ ಶತಾವಧಾನಿ ಗಣೇಶ್ ಕಟ್ಟಿಕೊಟ್ಟಿದ್ದಾರೆ ಎಂದು ಶ್ಲಾಘಿಸಿದರು.
ತಮ್ಮ ಮೊದಲ ಕಾದಂಬರಿಯ ಮೊದಲ ಗೌರವ ಪ್ರತಿಯನ್ನು ಗಣೇಶ್ ಅವರು ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಅವರಿಗೆ ಇದೇ ಸಂದರ್ಭದಲ್ಲಿ ನೀಡಿದರು.
ಸಾವಿರಾರು ವರ್ಷಗಳಿಗೂ ಹಳೆಯ ಕಾಲಘಟ್ಟದ ಕಥಾಹಂದರ ಇರುವ ಮಣ್ಣಿನ ಕನಸು ಕಾದಂಬರಿಯನ್ನು ಸಾಹಿತ್ಯ ಪ್ರಕಾಶನ ಪ್ರಕಟಿಸಿದೆ. ಕಾರ್ಯಕ್ರಮದಲ್ಲಿ ಬಿ.ಎನ್. ಶಶಿಕಿರಣ್, ಸಾಹಿತ್ಯ ಪ್ರಕಾಶನದ ಎಂ.ಎ. ಸುಬ್ರಮಣ್ಯ ಮತ್ತಿತರರು ಪಾಲ್ಗೊಂಡಿದ್ದರು.
ವಿದ್ವಾಂಸ ಡಾ. ಶತಾವಧಾನಿ ಆರ್. ಗಣೇಶ್ ಅವರು ಕಾದಂಬರಿ ಪ್ರಕಾರಕ್ಕೆ ಕೈಹಾಕಿದ ಮೊದಲ ಪ್ರಯೋಗದಲ್ಲೇ ಯಶಸ್ವಿಯಾಗಿದ್ದು, ಭಾಷಾಪ್ರಯೋಗದಿಂದಲೇ ಕಾದಂಬರಿಗೆ ಹೊಸಚೈತನ್ಯವನ್ನು, ಓದುಗರಿಗೆ ಹೊಚ್ಚಹೊಸ ಅನುಭವವನ್ನು ನೀಡಿದ್ದಾರೆ.
ಕೃತಿಯ ಬೆನ್ನುಡಿಯಲ್ಲಿ ಹೀಗೆ ಉಲ್ಲೇಖಿಸಲಾಗಿದೆ; ‘ಮಣ್ಣಿನ ಕನಸು ಸ್ವಪ್ನವಾಸವದತ್ತ ಮತ್ತು ಮೃಚ್ಛಕಟಿಕ ಎಂಬ ಸುಪ್ರಸಿದ್ಧ ಸಂಸ್ಕೃತ ರೂಪಕಗಳ ಇತಿವೃತ್ತವನ್ನು ಆಧರಿಸಿ ರೂಪುಗೊಂಡ ಐತಿಹಾಸಿಕ ಕಾದಂಬರಿ. ಇದು ಪ್ರೀತಿ-ವಿಶ್ವಾಸಗಳ, ರಾಜಕೀಯ, ತಂತ್ರ-ಪ್ರತಿತಂತ್ರಗಳ, ಕಲೆ ತತ್ವಗಳ ಬಣ್ಣಗಳನ್ನು ಒಳಗೊಂಡ ಚಿತ್ರ. ಸಹೃದಯರ ಚಿತ್ರವೃತ್ತಿಗಳನ್ನು ಕಾಡುವ ಹತ್ತಾರು ಪಾತ್ರಗಳು, ಸಂಕೀರ್ಣವಾದ ಘಟನೆಗಳು, ಕಾವ್ಯಮಯ ವರ್ಣನೆಗಳು, ಆಳವಾದ ಸಂವಾದಗಳು, ಅಭಿಜಾತ ಭಾಷಾ ಶೈಲಿ, ಈ ಕಾದಂಬರಿಯ ಕೆಲವು ವಿಶೇಷಗಳು. ವ್ಯಕ್ತಿಗಳಿಗೆ ಕನಸುಗಳಿರುವಂತೆ ನಮ್ಮನ್ನು ತಾಳಿ ಬಾಳಿಸುವ ಈ ಮಣ್ಣಿಗೂ ಕನಸಿದ್ದರೆ ಅದು ನನಸಾಗುವ ನಲಿವಿನ ಹಾದಿಯನ್ನು ಹುಡುಕುವ ನೋವು ಇಲ್ಲಿದೆ. ಸುಮಾರು ಎರಡು ಸಾವಿರದ ಐನೂರು ವರ್ಷಗಳಿಗೂ ಮುನ್ನ ಇದ್ದ ಭಾರತದ ಸಾಂಸ್ಕೃತಿಕ ಮತ್ತು ರಾಜಕೀಯ ಜೀವನದ ಎಷ್ಟೋ ವಿವರಗಳು ಈ ಕೃತಿಯ ಕಥೆ ಮತ್ತು ಪಾತ್ರಗಳ ಜೊತೆಯಲ್ಲಿ ದಟ್ಟವಾಗಿ ಹೆಣೆದುಕೊಂಡಿದೆ. ಇವುಗಳ ಅಧಿಕೃತತೆ ಮತ್ತು ಸೂಕ್ಷ್ಮತೆಗಳು ಓದುಗರ ಮನೋನೇತ್ರಗಳಿಗೆ ಆ ಕಾಲದ ಜೀವನವನ್ನು ಆಪ್ತವಾಗಿ ಒದಗಿಸಿಕೊಟ್ಟಿವೆ.’

ಪಠ್ಯದಲ್ಲಿ ಭಗವದ್ಗೀತೆ?: ನಿರ್ಧಾರ ಕೈಗೊಳ್ಳುವ ಮೊದಲು ಚರ್ಚೆ-ಸಚಿವ ನಾಗೇಶ್

ಜಲಸಂಘರ್ಷಕ್ಕೆ ಒಗ್ಗಟ್ಟು: ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಸರ್ವಪಕ್ಷ ಸಭೆ ನಿರ್ಣಯ

ಎರಡನೇ ದಿನವೂ ಜೇಮ್ಸ್​ ದರ್ಬಾರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × five =
Remember me
