|ಪೊ.ಜಿ.ಕೆ.ಕುಲಕರ್ಣಿ, ಬೆಳಗಾವಿ
ಲಂಕೆಯಲ್ಲಿ ರಾಮನ ಗುಡಿಗಳಿವೆಯಂತೆ. ಅಲ್ಲಿಯ ಜನರು ಇಂದಿಗೂ ರಾಮನನ್ನು ಪೂಜಿಸುತ್ತಾರೆ. ಗೌರವಿಸುತ್ತಾರೆ. ಆಳವಾಗಿ ವಿಶ್ಲೇಷಣೆ ಮಾಡಿದರೆ ಇದೊಂದು ಸೋಜಿಗದ ವಿಷಯವೆನಿಸುತ್ತದೆ. ರಾಮ ಲಂಕೆಯವನಲ್ಲ, ಅಲ್ಲಿ ಹುಟ್ಟಿಲ್ಲ, ಬೆಳೆದಿಲ್ಲ. ಅಲ್ಲಿ ರಾಜ್ಯಭಾರ ಮಾಡಿಲ್ಲ. ಅಲ್ಲಿಯ ರಾಜನಾದ ರಾವಣನನ್ನು ಕೊಂದು ಬಂದವ. ಹೀಗಿದ್ದರೂ ಅಲ್ಲಿಯ ಜನರು ರಾಮನನ್ನೇಕೆ ಪೂಜಿಸುತ್ತಾರೆ? ಈ ಪ್ರಶ್ನೆಗೆ ಉತ್ತರ ಹುಡುಕುತ್ತ ಹೋದರೆ ರಾಮ-ರಾವಣರ ಯುದ್ಧದ ನಂತರ ಲಂಕೆಯಲ್ಲಿ ನಡೆದ ಕೆಲವೊಂದು ಘಟನೆಗಳು ನಮ್ಮ ಮುಂದೆ ಬಂದು ನಿಲ್ಲುತ್ತವೆ.
ರಾವಣ ಯುದ್ಧದಲ್ಲಿ ಮಡಿದ ಎಂಬ ಸುದ್ದಿ ತಿಳಿಯುತ್ತಲೇ ಲಂಕೆಯ ಜನರು ಭಯಭೀತರಾದರು. ತಮ್ಮಲ್ಲಿದ್ದ ಮುತ್ತುರತ್ನ, ವಸ್ತು, ಒಡವೆಗಳ ಸಮೇತ ದಿಕ್ಕಾಪಾಲಾಗಿ ಓಡಲು ಪ್ರಾರಂಭಿಸಿದರು. ರಾಮ ಎಲ್ಲಿ ತಮ್ಮ ಮೇಲೆ ಆಕ್ರಮಣ ಮಾಡುತ್ತಾನೋ ಎಂಬ ಭಯದಿಂದ ಸುರತ ಸ್ಥಳಗಳಿಗೆ ಧಾವಿಸಿದರು. ಸ್ತ್ರೀಯರು ಮಾನ, ಶೀಲಗಳ ಬಗ್ಗೆ ಆತಂಕಗೊಂಡು ಗುಪ್ತಸ್ಥಳಗಳಲ್ಲಿ ಅಡಗಿಕೊಂಡರು. ಇದಕ್ಕೆ ಬಲವಾದ ಕಾರಣವೂ ಇತ್ತು. ರಾವಣ ರಾಮನ ಹೆಂಡತಿಯಾದ ಸೀತೆಯನ್ನು ಅಪಹರಿಸಿ ಅಕ್ರಮವಾಗಿ ತಂದಿಟ್ಟುಕೊಂಡಿದ್ದ. ಇದರ ಸೇಡು ತೀರಿಸಿಕೊಳ್ಳಲು ರಾಮ ತಮ್ಮ ಮೇಲೆ ಆಕ್ರಮಣ ಮಾಡಬಹುದು ಎಂಬ ಹೆದರಿಕೆ ಅವರಲ್ಲಿತ್ತು. ಆದರೆ, ವಾಸ್ತವವಾಗಿ ಅಲ್ಲಿ ನಡೆದದ್ದೇ ಬೇರೆ. ರಾಮ ಇಂಥ ಯಾವ ಅನ್ಯಾಯದ ಕೆಲಸಗಳನ್ನು ಮಾಡಲಿಲ್ಲ. ರಾಜ್ಯವನ್ನು ರಾವಣನ ತಮ್ಮನಾದ ವಿಭೀಷಣನಿಗೆ ಒಪ್ಪಿಸಿ ಬಂದ. ಒಂದು ಹಂತದಲ್ಲಿ ವಿಭೀಷಣ ರಾಮನನ್ನು ಕುರಿತು, “ಹೇ ರಾಮ ದುಷ್ಟನಾದ ನನ್ನ ಅಣ್ಣ ರಾವಣ ಯುದ್ಧದಲ್ಲಿ ಸತ್ತು ಹೋದ. ಈ ರಾಜ್ಯ ಈಗ ಅನಾಥವಾಗಿದೆ, ನೀನು ಲಂಕೆಗೆ ರಾಜನಾಗು, ನಾಳೆಯೇ ನಿನಗೆ ಪಟ್ಟಾಭಿಷೇಕ ಮಾಡುತ್ತೇನೆ’ ಎಂದು ಆಹ್ವಾನ ನೀಡಿದ. ಈ ಆಹ್ವಾನವನ್ನು ಸಾರಾಸಗಟಾಗಿ ತಿರಸ್ಕರಿಸಿದ ರಾಮ ಅಂದು ಆಡಿದ ಮಾತುಗಳು ಅವನ ನವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತವೆ.
“ನೀನು ರಾವಣನ ತಮ್ಮ, ಅವನೊಂದಿಗೆ ರಕ್ತ ಹಂಚಿಕೊಂಡು ಹುಟ್ಟಿದವ, ಈ ರಾಜ್ಯಕ್ಕೆ ನೀನು ವಾರಸುದಾರ. ಈ ರಾಜ್ಯ ನಿನ್ನದು, ನಿನ್ನ ರಾಜ್ಯವನ್ನು ನಾನು ತೆಗೆದುಕೊಳ್ಳಲೇ? ಹಾಗೆ ಮಾಡಿದರೆ ಜನ ಏನಂದಾರು? ಇನ್ನೊಬ್ಬರ ರಾಜ್ಯ ಕಬಳಿಸಿದ ರಾಮ ಎಂಬ ಅಪಖ್ಯಾತಿ ನನಗೆ ಬರುವದಿಲ್ಲವೇ? ಇಂಥ ಅಪಖ್ಯಾತಿ, ಜನಾಪವಾದಕ್ಕೆ ಗುರಿಯಾಗಲಾರೆ’ ಎಂದು ಹೇಳಿ ವಿಭೀಷಣನಿಗೆ ಪಟ್ಟ ಕಟ್ಟಿ ಉಟ್ಟ ಬಟ್ಟೆಯ ಮೇಲೆ ಅಯೋಧ್ಯೆಗೆ ವಾಪಸಾದ ರಾಮ.
ಅಂದು ಅವನು ತೋರಿದ ಔದಾರ್ಯ, ಮಾಡಿದ ತ್ಯಾಗ, ನಡೆದುಕೊಂಡ ರೀತಿ ಲಂಕೆಯ ಜನರಿಗೆ ಗೊತ್ತಿದೆ. ಅದಕ್ಕೇ ರಾಮ ಲಂಕೆಯಲ್ಲಿ ಇಂದಿಗೂ ಗೌರವಾನ್ವಿತ ವ್ಯಕ್ತಿ. ತ್ಯಾಗ ಮನುಷ್ಯನನ್ನು ಎತ್ತರದ ಸ್ಥಾನದಲ್ಲಿ ನಿಲ್ಲಿಸುತ್ತದೆ. ಸಮಾಜದಲ್ಲಿ ಮಾನ, ಮರ್ಯಾದೆ, ಗೌರವಗಳು ಸುಲಭವಾಗಿ ಸಿಗುವುದಿಲ್ಲ. ಅದಕ್ಕಾಗಿ ಒಂದಿಲ್ಲೊಂದು ತ್ಯಾಗ ಮಾಡಲೇಬೇಕಾಗುತ್ತದೆ. ಕೇವಲ ಭೋಗದಲ್ಲಿ ತನ್ಮಯರಾಗಿ ಯಾವ ತ್ಯಾಗವನ್ನೂ ಮಾಡದೇ ಗೌರವ-ಸನ್ಮಾನಗಳನ್ನು ಅಪೇಸುವ ಜನರು ರಾಮನ ಆದರ್ಶಗುಣಗಳಿಂದ ಪಾಠ ಕಲಿಯಬೇಕಿದೆ.
(ಲೇಖಕರು ನಿವೃತ್ತ ಉಪನ್ಯಾಸಕರು)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 9 =
Remember me
