ರಾಯಚೂರು:ಬೇಡುವ ವರವ ನೀಡುವ ಕಾಮಧೇನು ಎಂದೇ ಪ್ರಸಿದ್ಧರಾದ ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿಗಳ 351ನೇ ಆರಾಧನೆ ಮಹೋತ್ಸವಕ್ಕೆ ಈಗಾಗಲೆ ಚಾಲನೆ ದೊರೆತಿದೆ. ಆರಾಧನೆ ಮಹೋತ್ಸವ ನಿಮಿತ್ತ ಶ್ರೀಮಠವನ್ನು ವಿವಿಧ ಹೂವುಗಳಿಂದ ಶೃಂಗರಿಸಿದ್ದು, ವಿದ್ಯುತ್ ದೀಪಾಲಂಕಾರದಿಂದ ಶ್ರೀಮಠ ಜಗಮಗಿಸುತ್ತಿದೆ.
ಸಪ್ತ ರಾತ್ರೋತ್ಸವ ಹೆಸರಿನಲ್ಲಿ ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಏಳು ದಿನ ರಾಯರ ಆರಾಧನಾ ಮಹೋತ್ಸವ ಆಚರಿಸಲಾಗುತ್ತಿದೆ. ಶುಕ್ರವಾರ ಪೂರ್ವಾರಾಧನೆ, ಶನಿವಾರ ಮಧ್ಯಾರಾಧನೆ ಮತ್ತು ಭಾನುವಾರ ಉತ್ತರಾರಾಧನೆ ನೆರವೇರಲಿದೆ.
ಆರಾಧನೆ ಮಹೋತ್ಸವ ನಿಮಿತ್ತ ಆ.16ರವರೆಗೆ ನಿತ್ಯ ರಾಯರ ಮೂಲ ಬೃಂದಾವನಕ್ಕೆ ವಿಶೇಷ ಪೂಜೆ, ಅಲಂಕಾರ, ಉಪನ್ಯಾಸ ಹಾಗೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿವೆ. ಶ್ರೀಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ಮೂಲ ರಾಮದೇವರ ಪೂಜೆ ನಂತರ ಭಕ್ತರಿಗೆ ಫಲ ಮಂತ್ರಾಕ್ಷತೆ ನೀಡಿ ಆಶೀರ್ವದಿಸಲಿದ್ದಾರೆ. ಪೂರ್ವಾರಾಧನೆ ದಿನವಾದ ಶುಕ್ರವಾರ ರಜತ ಸಿಂಹ ವಾಹನೋತ್ಸವ ನಡೆಯಲಿದ್ದು, ಸಂಜೆ 7ಕ್ಕೆ ಯೋಗೇಂದ್ರ ಮಂಟಪದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಶ್ರೀಮಠದಿಂದ ವಿವಿಧ ಕ್ಷೇತ್ರದ ಸಾಧಕರಿಗೆ ಶ್ರೀ ರಾಘವೇಂದ್ರ ಅನುಗ್ರಹ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಆ.13ರಂದು ಮಧ್ಯಾರಾಧನೆ ಅಂಗವಾಗಿ ತಿರುಮಲ ತಿರುಪತಿ ದೇವಸ್ಥಾನ ಸಮಿತಿಯಿಂದ ರಾಯರಿಗೆ ಶೇಷವಸ್ತ್ರವನ್ನು ತಂದು ಸಮರ್ಪಣೆ ಮಾಡಲಾಗುತ್ತದೆ. ನಂತರ ಗಜ, ರಜತ, ಸ್ವರ್ಣ ರಥೋತ್ಸವ ನೆರವೇರಿಸಲಾಗುತ್ತಿದೆ. ಸಂಜೆ ಯೋಗಿಂದ್ರ ಮಂಟಪದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಆ.14ರಂದು ಉತ್ತರಾರಾಧನೆ ಅಂಗವಾಗಿ ಬೆಳಗ್ಗೆ 8ಕ್ಕೆ ಶ್ರೀಗಳಿಂದ ವಸಂತೋತ್ಸವ ನಡೆಯಲಿದ್ದು, ನಂತರ ಮಹಾರಥೋತ್ಸವ ಜರುಗಲಿದೆ. ಈ ಸಂದರ್ಭ ಶ್ರೀಗಳು ಆಶೀರ್ವಚನ ನೀಡಲಿದ್ದಾರೆ. ಆ.15ರಂದು ಶ್ರೀ ಸುಗುಣೇಂದ್ರ ತೀರ್ಥರ ಆರಾಧನೆ ಜರುಗಲಿದ್ದು, ಆ.16ರಂದು ಆರಾಧನೆ ಸರ್ವ ಸಮರ್ಪಣೆ ಕಾರ್ಯ ನೆರವೇರಿಸಲಾಗುತ್ತಿದೆ.
ವಿಶೇಷ ಅಲಂಕಾರ:ರಾಯರ ಆರಾಧನೆ ಮಹೋತ್ಸವ ನಿಮಿತ್ತ ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿನ ಪ್ರಾಕಾರ ಮತ್ತು ಮುಂಭಾಗವನ್ನು ಹೂವುಗಳಿಂದ ವಿಶೇಷವಾಗಿ ಅಲಂಕರಿಸಲಾಗಿದೆ. ಜತೆಗೆ ರಾತ್ರಿ ಶ್ರೀಮಠವನ್ನು ರಂಗುರಂಗಿನ ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ. ಮಧ್ವ ಮಾರ್ಗಕ್ಕೂ ದೀಪಾಲಂಕಾರ ಮಾಡಲಾಗಿದ್ದು, ಶನಿವಾರ, ಭಾನುವಾರ ರಜೆ ದಿನಗಳಾಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿದೆ.
ಪರೇಶ ಮೇಸ್ತ ಕೊಲೆ ಆರೋಪಿಗೇ ವಕ್ಫ್​ ಬೋರ್ಡ್​ ಉಪಾಧ್ಯಕ್ಷ ಸ್ಥಾನ!; ಬಿಜೆಪಿ ವಿರುದ್ಧ ತೀವ್ರ ಅಸಮಾಧಾನ..

ಆದಾಯ ತೆರಿಗೆ ಪಾವತಿಸುತ್ತಿದ್ದರೆ ನಿಮಗೆ ಈ ಯೋಜನೆಯ ಪ್ರಯೋಜನ ಸಿಗಲ್ಲ; ಹೊಸ ಆದೇಶ ಎಂದಿನಿಂದ ಜಾರಿ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six − 4 =
Remember me
