|ಹರೀಶ್ ಬೇಲೂರುಬೆಂಗಳೂರು
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ’ಯೋಜನೆ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಮರ್ಪಕವಾಗಿ ರೈತರಿಗೆ ತಲುಪುತ್ತಿಲ್ಲ. ಯೋಜನೆಯಡಿ ಕೇಂದ್ರ ಇದುವರೆಗೆ 10 ಕಂತುಗಳ ಹಣ ಬಿಡುಗಡೆ ಮಾಡಿದ್ದರೂ ಹಲವು ರೈತರಿಗೆ ಒಂದು, ಎರಡು ಅಥವಾ ಮೂರು ಕಂತಿನ ಹಣ ಜಮೆಯಾಗಿದ್ದು, ಉಳಿದ ಕಂತಿನ ಹಣ ಜಮೆಗೊಂಡಿಲ್ಲ. ರೈತರ ಖಾತೆಗೆ ಹಣ ಜಮೆಯಾಗಿದೆ ಎಂದು ವೆಬ್​ಸೈಟ್​ನಲ್ಲಿ ತೋರಿಸಿದ್ದರೂ ರಾಜ್ಯ ಸರ್ಕಾರದ ಅನುಮೋದನೆ ಬಾಕಿ ಇದೆ ಎಂದು ಬರೆಯಲಾಗಿದೆ. ಈ ಸಮಸ್ಯೆ ಬಗೆಹರಿಸಲು ಅಧಿಕಾರಿಗಳು ಮುಂದಾಗದ ಹಿನ್ನೆಲೆಯಲ್ಲಿ ಜನಪ್ರಿಯ ಯೋಜನೆ ಹಳ್ಳಹಿಡಿದಿದೆ.
ಯೋಜನೆಯಡಿ ರಾಜ್ಯದಲ್ಲಿ 57,85,288 ಫಲಾನುಭವಿಗಳಿದ್ದು, 34,63,493 ರೈತರಿಗೆ ಹಣ ಪಾವತಿಯಾಗಿದೆ. ಆದರೆ, ಇದರಲ್ಲಿ 21,13,787 ರೈತರ ಆಧಾರ್ ಮತ್ತು ಪಹಣಿ ಸೇರಿ ಇನ್ನಿತರ ದಾಖಲೆಗಳು ಸಮರ್ಪಕವಾಗಿದ್ದರೂ ಹಣ ಜಮೆಯಾಗಿಲ್ಲ. ಅಲ್ಲದೆ, 3,36,087 ರೈತರು ಪಹಣಿ ಮತ್ತು ಆಧಾರ್ ಸಮಸ್ಯೆಯನ್ನು ಅಧಿಕಾರಿಗಳು ಬಗೆಹರಿಸಿಲ್ಲ. ಸಮಸ್ಯೆ ಬಗೆಹರಿಸುವಂತೆ ರೈತರು ನಾಡ ಕಚೇರಿಗೆ ತೆರಳಿದರೆ ಅಲ್ಲಿನ ಸಿಬ್ಬಂದಿ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಕೃಷಿ ಇಲಾಖೆಗೆ ಹೋಗಿ ಎಂದು ಹೇಳುತ್ತಾರೆ. ಕೃಷಿ ಇಲಾಖೆಗೆ ತೆರಳಿದರೆ ನಾಡ ಕಚೇರಿಗೆ ತೆರಳುವಂತೆ ಗದರಿಸುತ್ತಿದ್ದಾರೆ. ಸೂಕ್ತ ಮಾಹಿತಿ ದೊರೆಯದೆ ಲಕ್ಷಾಂತರ ರೈತರು ಕಂಗಾಲಾಗಿದ್ದಾರೆ.
ಏನಿದು ಯೋಜನೆ?:ದೇಶದ ಸಣ್ಣ ಮತ್ತು ಮಧ್ಯಮ ರೈತರ ಅನುಕೂಲಕ್ಕಾಗಿ ಪ್ರಧಾನಿ ನರೇಂದ್ರ ಮೋದಿ 3 ವರ್ಷದ ಹಿಂದೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ’ ಹೆಸರಿನಲ್ಲಿ ಯೋಜನೆ ಜಾರಿಗೆ ತಂದಿದ್ದಾರೆ. ಎರಡು ಹೆಕ್ಟೇರ್​ವರೆಗೆ ಕೃಷಿ ಭೂಮಿ ಹೊಂದಿರುವ ಯಾವುದೇ ರೈತರು ಈ ಯೋಜನೆಯ ಫಲಾನುಭವಿಗಳಾಗಬಹುದು. ದೇಶಾದ್ಯಂತ ಯೋಜನೆಯಡಿ 11.17 ಕೋಟಿಗೂ ಅಧಿಕ ರೈತರು ನೋದಾಯಿಸಿಕೊಂಡಿದ್ದಾರೆ. ಇವರೆಲ್ಲರಿಗೂ ಪ್ರತಿ ವರ್ಷ ಒಟ್ಟು ಮೂರು ಕಂತುಗಳಲ್ಲಿ ತಲಾ 2 ಸಾವಿರ ರೂ.ನಂತೆ ಒಟ್ಟು 6 ಸಾವಿರ ರೂ. ಸಿಗುತ್ತದೆ. ಯೋಜನೆ ಫಲಾನುಭವಿಗಳು ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಬೇಕು. ಮಾಡದಿದ್ದರೆ ಹಣ ವರ್ಗಾವಣೆಯಾಗುವುದಿಲ್ಲ. ಹಣ ಪಾವತಿಯಾಗದಿದ್ದಲ್ಲಿ ಪಿಎಂ ಕಿಸಾನ್ ಸಮ್ಮಾನ ನಿಧಿ ಯೋಜನೆಯ ಅಧಿಕೃತ ವೆಬ್​ಸೈಟ್ ಟಞkಜಿಠಚ್ಞ.ಜಟಡ.ಜ್ಞಿನಲ್ಲಿ ಲಾಗಿನ್ ಆಗಿ ಸರಿಪಡಿಸಬಹುದು. ಈಗಾಗಲೆ ಅರ್ಜಿ ಸಲ್ಲಿಸಿದ್ದು, ಆಧಾರ್ ಸರಿಯಾಗಿ ಅಪ್​ಲೋಡ್ ಮಾಡದಿದ್ದರೆ ಅಥವಾ ಕೆಲ ಕಾರಣಗಳಿಂದಾಗಿ ಆಧಾರ್ ಸಂಖ್ಯೆಯನ್ನು ತಪ್ಪಾಗಿ ನಮೂದಿಸಿದ್ದರೆ ಅಲ್ಲಿ ಮಾಹಿತಿ ಸಿಗುತ್ತದೆ. ಇಲ್ಲಿಯೇ ರೈತರು ಯೋಜನೆಗೆ ಹೆಸರು ನೋಂದಾಯಿಸಬಹುದು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + 17 =
Remember me
