ಬೆಂಗಳೂರು: ಕರೊನಾ ನಿಯಂತ್ರಿಸಲು ಘೋಷಿಸಲಾಗಿದ್ದ ಲಾಕ್​ಡೌನ್ ನಿಯಮಕ್ಕೆ ರಾಜ್ಯ ಸರ್ಕಾರ ಕೆಲ ವಿನಾಯಿತಿಗಳನ್ನು ಘೋಷಿಸಿದೆ. ಬುಧವಾರ ಮಧ್ಯರಾತ್ರಿಯಿಂದಲೇ ಇದು ಜಾರಿಗೆ ಬಂದಿದ್ದು, ನಿಯಂತ್ರಿತ ಪ್ರದೇಶ (ಕಂಟೈನ್ಮೆಂಟ್ ಝೋನ್) ಹೊರತುಪಡಿಸಿ ಉಳಿದೆಡೆ ಅನ್ವಯವಾಗಲಿದೆ.
ಮೆಟ್ರೊ ರೈಲ್ವೆ ಯೋಜನೆ ಕಾಮಗಾರಿ, ನರೇಗಾ, ಗ್ರಾಮೀಣ ಪ್ರದೇಶ ವ್ಯಾಪ್ತಿಯ ರಸ್ತೆ, ಕಟ್ಟಡ ನಿರ್ವಣ, ಕೈಗಾರಿಕೆ ಹಾಗೂ ತಯಾರಿಕಾ ಘಟಕಗಳಿಗೆ ಅನುಮತಿ ನೀಡಲಾಗಿದೆ. ಸಾರ್ವಜನಿಕರ ತೊಂದರೆ ನಿವಾರಣೆಗಾಗಿ ಆಯ್ದ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಿದ್ದು, ಬಿಬಿಎಂಪಿ ಆಯುಕ್ತರು ಹಾಗೂ ಆಯಾ ಜಿಲ್ಲಾ ಆಡಳಿತಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕೆಂದು ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಆದೇಶ ಹೊರಡಿಸಿದ್ದಾರೆ.
ಕೇಂದ್ರದ ಮಾರ್ಗಸೂಚಿಯಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಇನ್ನಿತರ ಸುರಕ್ಷತಾ ಕ್ರಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ. ಬಸ್, ರೈಲು, ವಿಮಾನ, ಖಾಸಗಿ ವಾಹನಗಳ ಓಡಾಟ, ಮಾಲ್, ಹೊಟೆಲ್, ಬಾರ್ ಮತ್ತು ರೆಸ್ಟೋರೆಂಟ್ ಮೇಲಿನ ನಿರ್ಬಂಧಗಳು ಮೇ 3ರವರೆಗೆ ಮುಂದುವರಿಯಲಿವೆ.
ಕಿರಾಣಿ, ಇ-ಕಾಮರ್ಸ್ ಸೇರಿ ಅಗತ್ಯ ಸೇವೆಗಳು, ಆರೋಗ್ಯ ಸೇವೆ, ಕೃಷಿ ಹಾಗೂ ಕೃಷಿ ಸಂಬಂಧಿತ ಪೂರಕ ಚಟುವಟಿಕೆಗಳು, ಮೀನುಗಾರಿಕೆ, ಬ್ಯಾಂಕ್ ಇನ್ನಿತರ ಹಣಕಾಸು ಸಂಸ್ಥೆಗಳು, ವಿಮಾ ಕಂಪನಿಗಳ ವಹಿವಾಟಿಗೆ ನೀಡಿರುವ ವಿನಾಯಿತಿ ಮುಂದುವರಿಯಲಿವೆ.
ವೈದ್ಯರ ಮೇಲೆ ಕೈ ಮಾಡಿದ್ರೆ ಹುಷಾರ್
ಕರೊನಾ ವಿರುದ್ಧದ ಹೋರಾಟದಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ಆರೋಗ್ಯ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸುವ ವ್ಯಕ್ತಿಗಳಿಗೆ ಗರಿಷ್ಠ ಏಳು ವರ್ಷದವರೆಗೆ ಸೆರೆವಾಸ ಮತ್ತು ಐದು ಲಕ್ಷ ರೂಪಾಯಿ ದಂಡ ವಿಧಿಸಲು ಅವಕಾಶ ವಿರುವ ಸುಗ್ರೀವಾಜ್ಞೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ದೇಶದ ವಿವಿಧ ಭಾಗಗಳಲ್ಲಿ ಸೋಂಕಿತರ ತಪಾಸಣೆ, ಕ್ವಾರಂಟೈನ್ ಪ್ರಕ್ರಿಯೆ ವೇಳೆ ವೈದ್ಯರು, ಆರೋಗ್ಯ ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿರುವ ಹಿನ್ನೆಲೆಯಲ್ಲಿ ಸರ್ಕಾರ ಸುಗ್ರೀವಾಜ್ಞೆ ತಂದಿದೆ. ಆರೋಗ್ಯ ಕಾರ್ಯಕರ್ತರ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸುವವರಿಗೆ ಐದು ವರ್ಷ ಜೈಲು, 2 ಲಕ್ಷ ರೂ. ದಂಡ ವಿಧಿಸಲೂ ಅವಕಾಶವಿದೆ.
ಯಾವುದಕ್ಕೆ ಅನುಮತಿ?
ಸಾಮಾಜಿಕ ಕ್ಷೇತ್ರ, ಮಕ್ಕಳು, ಅಂಗವಿಕಲರು, ಹಿರಿಯ ನಾಗರಿಕರ, ಮಹಿಳೆಯರು/ವಿಧವೆಯರ ಆಶ್ರಯ ನೆಲೆಗಳು,
ಪರಿವೀಕ್ಷಣಾಲಯಗಳು, ನಿಗಾ ಹಾಗೂ ಕಾಳಜಿ ಕೇಂದ್ರಗಳು. ಸಾಮಾಜಿಕ ಭದ್ರತಾ ಯೋಜನೆಯ ಪಿಂಚಣಿ, ಸ್ವಾತಂತ್ರ್ಯ ಯೋಧರ ಪಿಂಚಣಿ ಹಾಗೂ ಇಪಿಎಫ್ ಸೇವೆಗಳು.
ಅಂಗನವಾಡಿಗಳಿಂದ ಫಲಾನುಭವಿಗಳ ಮನೆ ಬಾಗಿಲಿಗೆ ಪ್ರತಿ 15 ದಿನಕ್ಕೊಮ್ಮೆ ಪೌಷ್ಟಿಕ ಆಹಾರ ತಲುಪಿಸುವುದು.
ಆನ್​ಲೈನ್ ಶಿಕ್ಷಣ ಆನ್ಲೈನ್ ಮೂಲಕ ಎಲ್ಲ ಶಿಕ್ಷಣ ಸಂಸ್ಥೆಗಳು ಶೈಕ್ಷಣಿಕ ವರ್ಷದ ವೇಳಾಪಟ್ಟಿ ನಿರ್ವಹಿಸುವುದು. ಶೋಧನೆಗಾಗಿ ದೂರದರ್ಶನ ಹಾಗೂ ಶಿಕ್ಷಣಕ್ಕೆ ಸಂಬಂಧಿಸಿದ ಚಾನಲ್​ಗಳ ಗರಿಷ್ಠ ಬಳಕೆ.
ನರೇಗಾ, ಸಾಮಾಜಿಕ ಅಂತರ ಪಾಲನೆ ಹಾಗೂ ಮಾಸ್ಕ್ ಅಳವಡಿಸಿಕೊಳ್ಳುವುದು ಕಡ್ಡಾಯ
ಕೇಂದ್ರ ಹಾಗೂ ರಾಜ್ಯ ಪುರಸ್ಕೃತ ನೀರಾವರಿ ಹಾಗೂ ಜಲ ಸಂರಕ್ಷಣಾ ಕಾಮಗಾರಿಗಳು.
ಸಾರ್ವಜನಿಕ ಕ್ಷೇತ್ರ ಇಂಧನ  ಹಾಗೂ ಗ್ಯಾಸ್ ವಲಯ ಕಾರ್ಯಾಚರಣೆ. ಪೆಟ್ರೋಲ್, ಡೀಸೆಲ್, ಗ್ಯಾಸ್ ಇತ್ಯಾದಿ ಪೂರೈಕೆ, ಅಂಚೆ ಸೇವೆಗಳು, ವಿದ್ಯುತ್ ಉತ್ಪಾದನೆ ಪ್ರಸರಣ, ವಿತರಣೆ. ನಗರ ಸ್ಥಳೀಯ ಸಂಸ್ಥೆಯ ಕುಡಿಯುವ ನೀರು, ನೈರ್ಮಲ್ಯ, ಘನತ್ಯಾಜ್ಯ ನಿರ್ವಹಣೆ. ದೂ ಸಂಪರ್ಕ ಹಾಗೂ ಅಂತರ್ಜಾಲ ಸೇವೆಗಳು.
ಸರಕು ಸಾಗಣೆ, ಸಿಮೆಂಟ್, ಸ್ಟೀಲ್ ಜಲ್ಲಿ, ಇಟ್ಟಿಗೆ, ಡಾಂಬರ್ ಸೇರಿ ಎಲ್ಲ ವಿಧದ ಸರಕು ಸಾಗಣೆ. ಸರಕು ಹಾಗೂ ಪಾರ್ಸೆಲ್ ರೈಲುಗಳ ಓಡಾಟ.  ತುರ್ತು ಸೇವೆ ಹಾಗೂ ಪರಿಹಾರ ಕಾರ್ಯದ ವಿಮಾನಗಳ ಸಂಚಾರ. ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿ 20 ಕಿ.ಮೀ. ದೂರ ಅಂತರದಲ್ಲಿ ಟ್ರಕ್ ರಿಪೇರಿ, ಅಂಗಡಿಗಳು ಹಾಗೂ ಡಾಬಾಗಳು.
ವಾಣಿಜ್ಯ ಚಟುವಟಿಕೆಗಳು ಕೊರಿಯರ್ ಸೇವೆ ಸ್ಥಳೀಯವಾಗಿ ಸ್ವಯಂ ಉದ್ಯೋಗಿಗಳಾದ ಎಲೆಕ್ಟ್ರಿಷಿಯನ್, ಐಟಿ ರಿಪೇರಿ, ಪ್ಲಂಬರ್ಸ್, ಮೋಟಾರ್ ಮೆಕ್ಯಾನಿಕ್ ಹಾಗೂ ಕಾರ್ಪೆಂಟರ್ಸ್.
ಸಾರ್ವಜನಿಕ/ ಖಾಸಗಿ ವಲಯದ ಉದ್ಯಮ, ವೈದ್ಯಕೀಯ ಉಪಕರಣ, ಸಂಬಂಧಿತ ಕಚ್ಚಾ ಸಾಮಗ್ರಿ, ಔಷಧ ಸಹಿತ ಅಗತ್ಯ ವಸ್ತುಗಳ ತಯಾರಿಕೆ ಘಟಕ. ನಗರ ಸ್ಥಳೀಯ ಸಂಸ್ಥೆ ಹೊರಗಿರುವ ಆಹಾರ ಸಂಸ್ಕರಣಾ ಕೈಗಾರಿಕೆಗಳು.ಕಲ್ಲಿದ್ದಲು, ಖನಿಜಗಳ ಗಣಿಗಾರಿಕೆ ಹಾಗೂ ಉತ್ಪಾದನೆ, ಸಾಗಣೆ ಮತ್ತು ಗಣಿಗಾರಿಕೆಗೆ ಬೇಕಾದ ಸ್ಪೋಟಕಗಳ ಪೂರೈಕೆ. ಪ್ಯಾಕಿಂಗ್ ಸಾಮಗ್ರಿ ತಯಾರಿಕಾ ಘಟಕಗಳು. ಕಾರ್ಖಾನೆಗಳಲ್ಲಿ ಪೂರ್ಣ ಕಟ್ಟಡ ಸೋಂಕು ಮುಕ್ತವಾಗಿರುವಂತೆ ನೋಡಿಕೊಳ್ಳಬೇಕು.
ನಿರ್ಮಾಣ ಚಟುವಟಿಕೆಗಳು, ನಗರನಗರ ಸ್ಥಳೀಯ ಸಂಸ್ಥೆ ಹೊರತುಪಡಿಸಿ ಕಾರ್ವಿುಕರು ಲಭ್ಯವಿರುವ ಕೈಗಾರಿಕಾ ವಸಾಹತು ಯೋಜನಾ ಪ್ರದೇಶ, ಗ್ರಾಮೀಣ ಪ್ರದೇಶದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು, ಉದ್ಯಮ, ನೀರಾವರಿ, ರಸ್ತೆ, ಕಟ್ಟಡ ಕಾಮಗಾರಿಗಳು. ಹೊರಗಿನಿಂದ ಕಾರ್ವಿುಕರನ್ನು ಕರೆದೊಯ್ಯದೆ, ಸ್ಥಳೀಯವಾಗಿ ಲಭ್ಯವಿರುವ ಕಾರ್ವಿುಕರನ್ನು ಬಳಸಿಕೊಂಡು ಮೆಟ್ರೊ ರೈಲ್ವೆ ಯೋಜನೆ ಕಾಮಗಾರಿ ಕೈಗೆತ್ತಿಕೊಳ್ಳುವುದು.
ಲಾಕ್​ಡೌನ್​ನಿಂದ ಮನೆ ಸೇರಿರುವವರನ್ನು ರಂಜಿಸಲು ಫ್ಲೋರಿಡಾದ ಮಹಿಳೆ ಮಾಡಿದ್ದು ಏನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − fourteen =
Remember me
