ಬೆಂಗಳೂರು:ನಗರ ಪ್ರದೇಶಗಳಲ್ಲಿ ಕಟ್ಟಡ ಹಾಗೂ ಮನೆ ನಿರ್ವಿುಸಲು ನಕ್ಷೆ ಮಂಜೂರಾತಿ ಸೌಲಭ್ಯ ಆನ್​ಲೈನ್ ಮೂಲಕವೇ ಸಿಗಲಿದ್ದು, ಮಾರ್ಚ್ ಅಂತ್ಯಕ್ಕೆ ಸೇವೆ ಆರಂಭವಾಗಲಿದೆ. ನಗರಾಭಿವೃದ್ಧಿ ಇಲಾಖೆಯು ಬೆಂಗಳೂರು ಸೇರಿ ರಾಜ್ಯದ 150 ನಗರಗಳಲ್ಲಿ ಭೂಮಿ ಮತ್ತು ಕಟ್ಟಡ ನಕ್ಷೆ ಮಂಜೂರಾತಿ ವ್ಯವಸ್ಥೆ ಜಾರಿ ಮಾಡಲಿದ್ದು, ಪ್ರಮಾಣಪತ್ರಗಳಿಗೆ ಅಧಿಕಾರಿಗಳ ಡಿಜಿಟಲ್ ಸಹಿ ಇರಲಿದೆ. ನಗರದಲ್ಲಿ ಮನೆ, ಸಂಕೀರ್ಣ ಅಥವಾ ಕಟ್ಟಡ ನಿರ್ವಿುಸಲು ನಗರದಲ್ಲಿ ಮೂಲಸೌಕರ್ಯ ಒದಗಿಸುವ ವಿವಿಧ ಸಂಸ್ಥೆಗಳಿಂದ ನಿರಾಕ್ಷೇಪಣಾ ಪ್ರಮಾಣ ಪತ್ರ ಪಡೆಯಬೇಕಿದೆ. ಜಲಮಂಡಳಿ, ಬಿಬಿಎಂಪಿ, ಬೆಸ್ಕಾಂ ಸಂಸ್ಥೆಗಳ ಅನುಮತಿ ಪಡೆಯಬೇಕು. ಇದಕ್ಕಾಗಿ ಸಾರ್ವಜನಿಕರು ಕೆಲಸ ಕಾರ್ಯ ಬಿಟ್ಟು ತಿಂಗಳಾನುಗಟ್ಟಲೆ ಕಚೇರಿಗಳಿಗೆ ಅಲೆದಾಡಬೇಕಿದೆ. ಈ ಅಲೆದಾಟಕ್ಕೆ ಶೀಘ್ರವೇ ಮುಕ್ತಿ ಸಿಗಲಿದ್ದು, ಕುಳಿತಲ್ಲೇ ದಾಖಲೆಗಳ ಸಮೇತ ಅರ್ಜಿ ಸಲ್ಲಿಸಿದರೆ ಮನೆ ನಿರ್ವಣಕ್ಕೆ ಬೇಕಾದ ಎಲ್ಲ ಸಂಸ್ಥೆಗಳ ಒಪ್ಪಿಗೆ ಆನ್​ಲೈನ್​ನಲ್ಲೇ ಲಭ್ಯವಾಗಲಿದೆ.
ಅಧಿಕಾರಿಗಳ ಡಿಜಿಟಲ್ ಸಹಿ:ಕಟ್ಟಡ ನಿರ್ವಣಕ್ಕೆ ಅನುಮತಿ ಪಡೆಯಬೇಕಾದ ಅಧಿಕಾರಿಯ ಸಹಿಯನ್ನು ಡಿಜಿಟಲೀಕರಣ ಮಾಡಲಾಗುತ್ತಿದ್ದು, ಈಗಾಗಲೇ ಕೆಲವು ಪ್ರಮಾಣಪತ್ರಗಳಿಗೆ ತಹಸೀಲ್ದಾರ್​ರ ಡಿಜಿಟಲ್ ಸಹಿಯಂತೆ ಇದನ್ನೂ ಅಭಿವೃದ್ಧಿ ಮಾಡಲಾಗುತ್ತಿದೆ. ರಾಜ್ಯದಲ್ಲಿ 125 ನಗರಗಳಲ್ಲಿ ಅಭಿವೃದ್ಧಿ ಪಡಿಸಲಾಗಿದ್ದು, ಸೇವೆ ಆರಂಭಿಸಲಾಗುತ್ತದೆ. ಮಾರ್ಚ್ ಅಂತ್ಯದೊಳಗೆ ಬಿಬಿಎಂಪಿ ಸೇರಿ 150 ನಗರಗಳಲ್ಲಿ ಆನ್​ಲೈನ್ ಸೇವೆ ಆರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಸ್ವಯಂ ಚಾಲಿತ ಮಂಜೂರಾತಿ:ಕಟ್ಟಡ ನಿರ್ವಿುಸಬೇಕಾದ ಮಾಲೀಕರು ತಮಗೆ ಬೇಕಾದ ಮಂಜೂರಾತಿಗೆ ಸಲ್ಲಿಸುವ ಅರ್ಜಿಯು ಆಯಾ ಇಲಾಖೆಗಳ ಸಂಬಂಧಿಸಿದ ಅಧಿಕಾರಿಗಳ ಸಹಿಗೆ ಹೋಗುತ್ತದೆ. ಅಧಿಕಾರಿಗಳು ನಿಗದಿತ ದಿನದ ಒಳಗಾಗಿ ಕಡತವನ್ನು ಆನ್​ಲೈನ್​ನಲ್ಲಿ ಪರೀಕ್ಷಿಸಿ ಸ್ಥಳ ಭೇಟಿ ಮಾಡಿ ಅರ್ಜಿ ವಿಲೇವಾರಿ ಮಾಡುತ್ತಾರೆ. ಹಾಗಾಗಿ ಆನ್​ಲೈನ್ ಮೂಲಕ ಸಲ್ಲಿಸಿದ ಅರ್ಜಿಗಳಿಗೆ ಆಯಾ ಇಲಾಖೆಗಳಿಂದ ಸ್ವಯಂ ಚಾಲಿತವಾಗಿ ಮಂಜೂರಾತಿ ದೊರೆಯುತ್ತದೆ. ಇಲ್ಲಿ ಅಧಿಕಾರಿಗಳು ನಿರ್ಲಕ್ಷ್ಯವಹಿಸಲು ಅವಕಾಶವಿಲ್ಲ.
ಕಾವೇರಿ ಪೋರ್ಟಲ್​ಗೆ ಲಿಂಕ್:ಒಮ್ಮೆ ಭೂಮಿ ಅಥವಾ ಕಟ್ಟಡದ ಬಗ್ಗೆ ಮಂಜೂರಾತಿ ಪಡೆದರೆ ಅದು ನೇರವಾಗಿ ರಾಜ್ಯ ಸರ್ಕಾರದ ಕಾವೇರಿ ಪೋರ್ಟಲ್​ಗೆ ಲಿಂಕ್ ಆಗುತ್ತದೆ. ಈ ಕುರಿತು ಮಾಲೀಕರ ಮೊಬೈಲ್​ಗೆ ಸಂದೇಶ ರವಾನೆಯಾಗುತ್ತದೆ. ಹಾಗಾಗಿ ಒಬ್ಬರಿಗೆ ಮಾರಾಟ ಮಾಡಿದ ಕಟ್ಟಡವನ್ನು ಮತ್ತೊಬ್ಬರಿಗೆ ಮಾರಾಟ ಮಾಡುವ ಅಕ್ರಮಕ್ಕೆ ಕಡಿವಾಣ ಬೀಳಲಿದೆ. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಭ್ರಷ್ಟಾಚಾರದ ಜಾಲಕ್ಕೆ ಸಿಲುಕುವವರನ್ನು ರಕ್ಷಿಸಬಹುದು. ಆಸ್ತಿಗೆ ಸಂಬಂಧಿಸಿದ ಯಾವುದೇ ಪ್ರಕ್ರಿಯೆ ಆರಂಭಿಸಿದರೂ ಮಾಲೀಕರ ಮೊಬೈಲ್​ಗೆ ಸಂದೇಶ ರವಾನೆಯಾಗುತ್ತದೆ.
ಮನೆ ನಿರ್ವಿುಸುವವರಿಗೆ ನಕಾಶೆ ಮಂಜೂರಾತಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಮುನ್ಸಿಪಲ್ ಡೇಟಾ ಸೊಸೈಟಿ ಅಡಿಯಲ್ಲಿ ಸರಳ ಮಂಜೂರಾತಿ ನೀಡುವ ಆನ್​ಲೈನ್ ವ್ಯವಸ್ಥೆ ಅಭಿವೃದ್ಧಿ ಮಾಡಲಾಗುತ್ತಿದೆ. ಮಾರ್ಚ್ ಅಂತ್ಯದೊಳಗೆ ಬಿಬಿಎಂಪಿ ಸೇರಿ 150 ನಗರದಲ್ಲಿ ಆನ್​ಲೈನ್ ಮಂಜೂರಾತಿ ಸೇವೆ ಲಭ್ಯವಾಗಲಿದೆ.
| ಅಂಜುಮ್ ಪರ್ವೆಜ್ ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ
| ಸತೀಶ್ ಕೆ. ಬಳ್ಳಾರಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + 17 =
Remember me
