ಬೆಂಗಳೂರು: ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ನಗರವ್ಯಾಪಿ 15 ಸಾವಿರಕ್ಕಿಂತ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ತಿಳಿಸಿದ್ದಾರೆ.
ಐವರು ಹೆಚ್ಚುವರಿ ಪೊಲೀಸ್ ಆಯುಕ್ತರು, ಡಿಸಿಪಿಗಳು, ಎಸಿಪಿಗಳ ನೇತೃತ್ವದಲ್ಲಿ ಭದ್ರತೆ ನಿಯೋಜನೆ ಮಾಡಲಾಗುತ್ತದೆ. 35 ಕೆಎಸ್​ಆರ್​ಪಿ, 32 ಸಿಎಆರ್ ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ. ಬೆಳಗ್ಗೆಯಿಂದಲೇ ಪ್ರತಿ ಏರಿಯಾದಲ್ಲಿ ಅಧಿಕಾರಿಗಳು, ಹೊಯ್ಸಳ, ಚೀತಾ ಗಸ್ತು ತಿರುಗಲಿದ್ದು, ಬಂದ್ ನೆಪದಲ್ಲಿ ಕಾನೂನು ಭಂಗ ಮಾಡುವಂತಿಲ್ಲ. ಬಂದ್ ಮಾಡಲು ಯಾರೂ ಅನುಮತಿ ಕೇಳಿಲ್ಲ. ಯಾರಿಗೂ ಕೊಟ್ಟಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಇದನ್ನೂ ಓದಿ:ಜನರಿಗೆ ತೊಂದರೆಯಾಗದಿರಲಿ; ಪ್ರತಿಭಟನೆಯ ಹಕ್ಕು ಚೌಕಟ್ಟು ಮೀರಬಾರದು…
ಬಲವಂತವಾಗಿ ಅಂಗಡಿ, ಕಚೇರಿ, ರಸ್ತೆ ತಡೆ ಮಾಡುವಂತಿಲ್ಲ. ಮಾಡಿದರೆ ಅಂಥವರ ವಿರುದಟಛಿ ಕ್ರಮ ತೆಗೆದುಕೊಳ್ಳಲಾಗುತ್ತದೆ. ಜನಸಾಮಾನ್ಯರು ನಿರ್ಭಯವಾಗಿ ಓಡಾಟ ನಡೆಬಹುದು. ಬಿಎಂಟಿಸಿ, ಕೆಎಸ್​ಆರ್​ಟಿಸಿ, ಮೆಟ್ರೋ ಸೇವೆ ಇರಲಿದೆ. ಸಾರ್ವಜನಿಕ ಆಸ್ತಿಗಳಿಗೆ ಹಾನಿ ಮಾಡಿದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಕಮಲ್ ಪಂತ್ ಎಚ್ಚರಿಕೆ ನೀಡಿದರು.
ಮರಾಠ ನಿಗಮ ವಿವಾದ: ಕರ್ನಾಟಕ ಬಂದ್ ಪರಿಣಾಮ ಹೇಗಿದೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − six =
Remember me
