ಶಿರಸಿ:ಉತ್ತರ ಕನ್ನಡದಲ್ಲಿ ಇಂದು ಒಂದೇ ದಿನ 21 ಕರೊನಾ ಪಾಸಿಟಿವ್​ ಕೇಸ್​ಗಳು ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 354ಕ್ಕೆ ಏರಿದೆ.
ಇಂದು ಶಿರಸಿಯ ಪ್ರಸಿದ್ಧ ಮಾರಿಕಾಂಬಾ ದೇವಸ್ಥಾನದ ಪಕ್ಕದಲ್ಲೇ ಇರುವ ಮನೆಯ ವ್ಯಕ್ತಿಯೋರ್ವನಲ್ಲಿ ಕರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ದೇಗುಲವನ್ನು ಒಂದು ವಾರಗಳ ಕಾಲ ಸೀಲ್​ಡೌನ್​ ಮಾಡಲಾಗಿದೆ.ಇವರು ಕಿರಾಣಿ ಖರೀದಿಗಾಗಿ ಹುಬ್ಬಳ್ಳಿಗೆ ತೆರಳಿದ್ದರು. ಜೂ.26ರಂದು ಶಿರಸಿಗೆ ವಾಪಸ್​ ಬಂದಿದ್ದರು. ನಂತರ ತಾವು ಹುಬ್ಬಳ್ಳಿಯಿಂದ ತಂದಿದ್ದ ಕಿರಾಣಿ ವಸ್ತುಗಳನ್ನು ನಗರದ ಹಲವು ಅಂಗಡಿಗಳಿಗೆ ವಿತರಣೆ ಮಾಡಿದ್ದರು. ಅಷ್ಟೇ ಅಲ್ಲ ಪ್ರತಿದಿನ ದೇವಸ್ಥಾನಕ್ಕೆ ಭೇಟಿ ನೀಡಿ, ದೇವಿಯ ದರ್ಶನ ಪಡೆಯುತ್ತಿದ್ದರು.ಇದನ್ನೂ ಓದಿ:ರಕ್ಷಣಾ ಪಡೆಗಳ ದಾಳಿಗೆ ನಾಲ್ವರು ಮಾವೋವಾದಿಗಳು ಉಡೀಸ್​…; ಓರ್ವ ಮಹಿಳಾ ನಕ್ಸಲ್​ ಕೂಡ ಬಲಿ
ಜು.1ರಂದು ಈ ವ್ಯಕ್ತಿಯಲ್ಲಿ ಜ್ವರ ಕಾಣಿಸಿಕೊಂಡಿತ್ತು. ನಗರದ ಖಾಸಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆಯನ್ನೂ ಪಡೆದಿದ್ದರು. ಬಳಿಕ ಆ ಆಸ್ಪತ್ರೆ ವೈದ್ಯರು ತಾಲೂಕು ಆಡಳಿತಕ್ಕೆ ಮಾಹಿತಿ ನೀಡಿದ್ದರು. ನಂತರ ವ್ಯಕ್ತಿಯ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳಿಸಲಾಗಿತ್ತು. ಇಂದು ಬಂದ ವರದಿಯಲ್ಲಿ ಕರೊನಾ ದೃಢಪಟ್ಟಿದೆ. ಹಾಗಾಗಿ ವ್ಯಕ್ತಿಯ ಪ್ರಾಥಮಿಕ ಸಂಪರ್ಕಕ್ಕೆ ಬಂದವರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ.ಇದನ್ನೂ ಓದಿ:ಕೇಳಿದಷ್ಟು ಬೆಡ್​​ಗಳನ್ನು ಕೊಟ್ಟಿಲ್ಲ ಖಾಸಗಿ ಆಸ್ಪತ್ರೆಗಳು; ಚಿಕಿತ್ಸೆ ಕೊಡದಿದ್ರೆ ಕ್ರಿಮಿನಲ್​ ಕೇಸ್​ ಎಂದ್ರು ಸಚಿವ ಸುಧಾಕರ್​
ಇವರು ಪ್ರತಿದಿನ ದೇವಸ್ಥಾನಕ್ಕೆ ಬರುತ್ತಿದ್ದುದರಿಂದ ದೇಗುಲವನ್ನು ಸೀಲ್​ಡೌನ್​ ಮಾಡಲಾಗಿದೆ. ಸಂಪೂರ್ಣ ಸ್ಯಾನಿಟೈಸ್ ಮಾಡಲಾಗುತ್ತಿದೆ. ಇನ್ನು ಒಂದು ವಾರ ದೇಗುಲದಲ್ಲಿ ಅರ್ಚಕರು ಪೂಜೆ ಮಾಡಬಹುದು ವಿನಃ ಭಕ್ತರಿಗೆ ಪ್ರವೇಶ ಇರುವುದಿಲ್ಲ ಎಂದು ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ವೆಂಕಟೇಶ್​ ನಾಯ್ಕ್​ ತಿಳಿಸಿದ್ದಾರೆ.
ಗರ್ಭಿಣಿಯ ತುಂಬಿದ ಹೊಟ್ಟೆಯನ್ನು ಮುತ್ತಿಕೊಂಡ ಜೇನು ನೊಣಗಳು…; ದಿಗಿಲಾಗುವಂಥ ಫೋಟೋ ವೈರಲ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 13 =
Remember me
