ಲಂಡನ್:ಮಾರುಕಟ್ಟೆ ವಿಸ್ತರಣೆ ದೃಷ್ಟಿಯಿಂದ ಕರ್ನಾಟಕ ಮತ್ತು ಟೋಕಿಯೊ ಮೂಲದ ಸ್ಟಾರ್ಟ್‌ಅಪ್‌ಗಳನ್ನು ಪರಸ್ಪರ ಉತ್ತೇಜಿಸುವ ಕುರಿತು ಕರ್ನಾಟಕದ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಗ್ಲೋಬಲ್ ಪ್ರಮೋಷನ್ ಸ್ಟ್ರಾಟಜಿ ನಿರ್ದೇಶಕರಾದ ಕಿಯೊಕೊ ಹಷಿಬಾ ಚರ್ಚೆ ನಡೆಸಿದರು.
ಟೋಕಿಯೊ ಲಭ್ಯತಾ ಸಹಯೋಗ ತಂಡಗಳನ್ನು ರಚಿಸುವ ಕುರಿತು ಲಂಡನ್ ನಗರದಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಫಲಪ್ರದ ಚರ್ಚೆಗಳು ನಡೆದವು.ಈ ಟೆಕ್‌ವೀಕ್ ಶೃಂಗಶಭೆಯಲ್ಲಿ ಕರ್ನಾಟಕದಿಂದ ಸಚಿವ ಪ್ರಿಯಾಂಕ್ ಖರ್ಗೆ, ಕಿಯೊನಿಕ್ಸ್ ಸಂಸ್ಥೆಯ ಅಧ್ಯಕ್ಷ ಶರತ್ ಬಚ್ಚೇಗೌಡ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಡಾ.ಏಕರೂಪ್ ಕೌರ್ ಮತ್ತು ಇನ್ನಿತರ ಅಧಿಕಾರಿಗಳು ಪಾಲ್ಗೊಂಡಿದ್ದಾರೆ.
ಟೋಕಿಯೊ ಇನ್ನೋವೇಶನ್ ಬೇಸ್ ಸಹಯೋಗದೊಂದಿಗೆ ಕ್ಯುರೇಟಿಂಗ್ ಎ ಗ್ಲೋಬಲ್ ಇನ್ನೋವೇಶನ್ ಅಲೈಯನ್ಸ್ ಕಾರ್ಯಕ್ರಮದ ಸಂಬಂಧ ಮಾರುಕಟ್ಟೆ ಪ್ರವೇಶ ಕುರಿತಂತೆ ಮಾತುಕತೆ ನಡೆಯಿತು.
ಬೆಂಗಳೂರಿನಲ್ಲಿ ನಡೆಯಲಿರುವ ಟೆಕ್ ಶೃಂಗಸಭೆ 2024 ಸೇರಿದಂತೆ ಟೆಕ್ ಈವೆಂಟ್‌ಗಳಲ್ಲಿ ಭಾಗವಹಿಸುವಂತೆ ಸಚಿವ ಪ್ರಿಯಾಂಕ್ ಖರ್ಗೆ ಆಹ್ವಾನ ನೀಡಿದರು.
ಸಚಿವರ ನೇತೃತ್ವದ ರಾಜ್ಯದ ತಂಡ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದ ಪ್ರತಿನಿಧಿಗಳೊಂದಿಗೆ ರಾಜ್ಯದ ಸ್ಟಾರ್ಟ್‌ಆಪ್ ಮಾರುಕಟ್ಟೆ ವಿಸ್ತರಣೆ ಕುರಿತ ಚರ್ಚಾಸಭೆಗಳಲ್ಲಿ ಪಾಲ್ಗೊಂಡರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 1 =
Remember me
