ಸ್ವಚ್ಛತೆಗಾಗಿ ಮಾರ್ಷಲ್​ಗಳ ನೇಮಕ*ನಿಯಮ ಉಲ್ಲಂಘಿಸಿದರೆ ಕಾದಿದೆ ದಂಡ
ಬೆಂಗಳೂರು:ಕರೊನಾ ಹಿನ್ನೆಲೆ ಸೀಲ್​ಡೌನ್ ಆಗಿದ್ದ ಕೆ.ಆರ್. ಮಾರುಕಟ್ಟೆ ಮತ್ತು ಕಲಾಸಿಪಾಳ್ಯ ತರಕಾರಿ ಮಾರುಕಟ್ಟೆಗಳಲ್ಲಿ ಸೆ.1ರಿಂದ ವಹಿವಾಟು ಆರಂಭಿಸಲು ಬಿಬಿಎಂಪಿ ಅವಕಾಶ ನೀಡಿದೆ.
ಬಿಬಿಎಂಪಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದ್ದು, ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ವರ್ತಕರೊಬ್ಬರು ತಿಳಿಸಿದರು. ಮಾರುಕಟ್ಟೆ ಪ್ರಾಂಗಣದಲ್ಲಿ ವರ್ತಕರು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದ ದೃಶ್ಯ ಭಾನುವಾರ ಕಂಡುಬಂತು. ಕೆ.ಆರ್. ಮಾರುಕಟ್ಟೆ ಹಾಗೂ ಕಲಾಸಿಪಾಳ್ಯ ತರಕಾರಿ ಮಾರುಕಟ್ಟೆಯು ಸದಾ ಜನದಟ್ಟಣೆಯಿಂದ ಕೂಡಿರುತ್ತದೆ. ಮಾರುಕಟ್ಟೆ ಪ್ರಾಂಗಣದಲ್ಲಿ ನೂಕುನುಗ್ಗಲು ನಿಯಂತ್ರಿಸಲು ಬಿಬಿಎಂಪಿ ಅಧಿಕಾರಿಗಳು ಪ್ರತಿ ಮಳಿಗೆಗಳ ಮುಂಭಾಗ ಮಾರ್ಕಿಂಗ್ ವ್ಯವಸ್ಥೆ ಮಾಡಿದ್ದಾರೆ.
ದಂಡ ಪ್ರಯೋಗ
ಪಾಲಿಕೆ ನಿಯಮ ಪಾಲಿಸದವರಿಗೆ ಬಿಬಿಎಂಪಿ ದಂಡ ಪ್ರಯೋಗ ಮಾಡಲಿದೆ. ಮಾರುಕಟ್ಟೆ ಪ್ರಾಂಗಣ ಹೊರಭಾಗದ ರಸ್ತೆಗಳಲ್ಲಿ ಅನಧಿಕೃತ ವ್ಯಾಪಾರ ಮಾಡುವವರಿಗೆ, ಮಾಸ್ಕ್ ಧರಿಸದವರಿಗೆ ಪಾಲಿಕೆ ದಂಡ ವಿಧಿಸಲಿದೆ.
ಮಾರ್ಷಲ್​ಗಳಿಂದ ನಿಗಾ
ಮಾರುಕಟ್ಟೆ ಪ್ರಾಂಗಣದಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಬಿಬಿಎಂಪಿ ವತಿಯಿಂದ ಪ್ರತಿ ಪಾಳಿಗೆ 15 ಮಾರ್ಷಲ್​ಗಳನ್ನು ನೇಮಕ ಮಾಡಲಾಗಿದೆ. ಕೆ.ಆರ್. ಮಾರುಕಟ್ಟೆ ಹಾಗೂ ಕಲಾಸಿಪಾಳ್ಯ ತರಕಾರಿ ಮಾರುಕಟ್ಟೆ ಸೇರಿ ಒಟ್ಟು 60 ಮಾರ್ಷಲ್​ಗಳು ಸ್ಚಚ್ಛತೆ ಬಗ್ಗೆ ನಿಗಾ ವಹಿಸಲಿದ್ದಾರೆ.
ಇದನ್ನೂ ಓದಿ:ಕೃಷ್ಣ ಮಠ ನಿರ್ವಹಣೆಗೆ ಸಾಲ ಮಾರ್ಗ
ಮುಖ್ಯದ್ವಾರಕ್ಕೆ ಇಂದು ಪೂಜೆ
ಬಿಬಿಎಂಪಿಯಿಂದ ಸೋಮವಾರ (ಆ.31) ಬೆಳಗ್ಗೆ 8 ಗಂಟೆಗೆ ಮಾರುಕಟ್ಟೆ ಪ್ರಾಂಗಣದಲ್ಲಿರುವ ಎಲ್ಲ ಮಳಿಗೆಗಳಿಗೂ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಗುತ್ತಿದೆ. ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಬೆಳಗ್ಗೆ 9.30ಕ್ಕೆ ಕಲಾಸಿಪಾಳ್ಯ ಮಾರುಕಟ್ಟೆ ಮುಖ್ಯದ್ವಾರಕ್ಕೆ ಪೂಜೆ ನೆರವೇರಲಿದೆ. ಕಾರ್ಯಕ್ರಮದಲ್ಲಿ ಹಣ್ಣು ಮತ್ತು ತರಕಾರಿ ಸಗಟು ಮಾರುಕಟ್ಟೆ ವರ್ತಕರ ಸಂಘದ ಅಧ್ಯಕ್ಷ ಆರ್.ವಿ. ಗೋಪಿ, ಕಾರ್ಯದರ್ಶಿ ವಿಜಯ್ಕುಮಾರ್, ವರ್ತಕ ಶ್ರೀಧರ್ ಮತ್ತಿತರರು ಭಾಗವಹಿಸಲಿದ್ದಾರೆ.
ಇದನ್ನೂ ಓದಿ:ಗಲ್ವಾನ್ ಘಟನೆ ಬಳಿಕ ದಕ್ಷಿಣ ಚೀನಾ ಸಮುದ್ರದಲ್ಲಿ ಸಮರ ಸನ್ನದ್ಧವಾಗಿದ್ದ ನೌಕಾಪಡೆ ಹಡಗು…!
ನಟಿ ಶರ್ವಿುಳಾ ಮಾಂಡ್ರೆಗೆ ಕ್ಲೀನ್​ಚಿಟ್: ಹಾಗಾದ್ರೆ ಆರೋಪಿ ಯಾರು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × five =
Remember me
