ಬೆಂಗಳೂರು:ಲಾಕ್​ಡೌನ್​ ಹಿನ್ನೆಲೆಯಲ್ಲಿ ಸಹಸ್ರಾರು ಮದುವೆಗಳು, ಇತರ ಸಭೆ ಸಮಾರಂಭಗಳು ಮುಂದೂಲ್ಪಟ್ಟದ್ದರಿಂದ ಈಗ ಸರ್ಕಾರ ಇವುಗಳಿಗೆ ಅನುಮತಿ ನೀಡಿದೆ.
ಆದರೆ ಕೆಲವೊಂದು ಮಾರ್ಗಸೂಚಿ ಹಾಗೂ ಷರತ್ತುಗಳನ್ನು ವಿಧಿಸಿ ಆರೋಗ್ಯ ಇಲಾಖೆ ಮಾರ್ಗಸೂಚಿ ಪ್ರಕಟಿಸಿದ್ದು, ಇದನ್ನು ಕಡ್ಡಾಯವಾಗಿ ಅನುಸರಿಸುವಂತೆ ಹೇಳಿದೆ.
ಮಾರ್ಗಸೂಚಿಯಲ್ಲಿ ಇರುವುದೇನು?
*ಕಡ್ಡಾಯವಾಗಿ ಸಂಸ್ಥೆ ಸಂಸ್ಥೆಗಳಿಂದ ಅನುಮತಿ ಪಡೆಯಬೇಕು.
*ಮದುವೆ ಅಥವಾ ಯಾವುದೇ ಸಮಾರಂಭದಲ್ಲಿ 50ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ.
*ಎ.ಸಿ.ಬಳಕೆ ಮಾಡುವಂತಿಲ್ಲ. ಆದರೆ ನೈಸರ್ಗಿಕ ಗಾಳಿಗೆ ಅವಕಾಶ ಕಲ್ಪಿಸಬೇಕು.
*ಯಾವುದೇ ಕಾರಣಕ್ಕೂ ಕಂಟೈನ್​ಮೆಂಟ್​ ಝೋನ್​ಗಳಲ್ಲಿ ವಾಸಿಸುತ್ತಿರುವವರನ್ನು ಕಾರ್ಯಕ್ರಮಗಳಿಗೆ ಆಹ್ವಾನಿಸುವಂತಿಲ್ಲ.
ಇದನ್ನೂ ಓದಿ:ಕರ್ನಾಟಕದ ರಾಗಿಗೆ ಜಾಗತಿಕ ಬ್ರ್ಯಾಂಡಿಂಗ್​​ ವ್ಯವಸ್ಥೆ: ನಿರ್ಮಲಾ ಸೀತಾರಾಮನ್​
*ಗರ್ಭಿಣಿ, 65 ವರ್ಷದ ಮೇಲ್ಪಟ್ಟ ಹಾಗೂ 10 ವರ್ಷದ ಒಳಗಿನ ಮಕ್ಕಳಿಗೆ ಅವಕಾಶವಿಲ್ಲ.
*ಸ್ಯಾನಿಟೈಸರ್, ಕೈತೊಳೆಯಲು ಸೋಪು ಸೇರಿದಂತೆ ಶುಚಿತ್ವದ ಕುರಿತಾದ ಇತರ ವ್ಯವಸ್ಥೆಗಳನ್ನು ಮಾಡಬೇಕು.
*ಸಮಾರಂಭದ ಪ್ರವೇಶ ದ್ವಾರದಲ್ಲಿ ಥರ್ಮಲ್‌ ಸ್ಕ್ರೀನಿಂಗ್ ಕಡ್ಡಾಯ.
*ಕಾರ್ಯಕ್ರಮಕ್ಕೆ ಬರುವವರು 37.5 ಡಿಗ್ರಿ ಸೆಲ್ಸಿಯಸ್ ಅಥವಾ 99.5 ಫ್ಯಾರನ್ ಹೀಟ್ ತಾಪಮಾನ ಹೊಂದಿದ್ದರೆ ಅಂಥವರನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಬೇಕು.
ಇದನ್ನೂ ಓದಿ:ಸಾಧುಗಳ ಬರ್ಬರ ಹತ್ಯೆಯ ರಹಸ್ಯ ಬಯಲಾಗುವ ಮೊದಲೇ ಅಪಘಾತದಲ್ಲಿ ವಕೀಲನ ನಿಗೂಢ ಸಾವು!
*ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದ ಕಡ್ಡಾಯ.
*ಗುಟ್ಕಾ, ಪಾನ್ ಮಸಾಲಾ, ಮದ್ಯ, ತಂಬಾಕು ಬಳಸುವಂತೆ ಇಲ್ಲ.
*ಕಾರ್ಯಕ್ರಮ ನಡೆಯುವ ಸ್ಥಳವು ಸ್ವಚ್ಛ ಹಾಗೂ ಶುಭ್ರವಾಗಿರಬೇಕು.
*ಸಾರ್ವಜನಿಕ ಸ್ಥಳದಲ್ಲಿ ಉಗುಳುವುದನ್ನು ನಿಷೇಧಿಸಲಾಗಿದೆ.
*ಕಾರ್ಯಕ್ರಮಕ್ಕೆ ನೋಡಲ್ ವ್ಯಕ್ತಿಯನ್ನು ನೇಮಿಸಿರಬೇಕು.
ಇದನ್ನೂ ಓದಿ:ಕರೊನಾಕ್ಕೆ ಕಣ್ಮುಂದೆಯೇ ಬಲಿಯಾದ ಅಪ್ಪ, ಅಮ್ಮ ಕ್ವಾರಂಟೈನ್​ಗೆ- ಒಂಟಿ ಬಾಲಕನ ಮನಕಲಕುವ ಕಥೆ
*ಕಾರ್ಯಕ್ರಮಕ್ಕೆ ಹಾಜರಾಗುವವರ ಹೆಸರು, ವಿಳಾಸ ಮತ್ತು ದೂರವಾಣಿ ಸಂಖ್ಯೆ ಮಾಹಿತಿ ಪಡೆಯಬೇಕು.
*ಆರೋಗ್ಯ ಸೇತು ಆ್ಯಪ್ ಡೌನ್​ಲೋಡ್​ ಮಾಡಿಕೊಳ್ಳುವುದು ಕಡ್ಡಾಯ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + nineteen =
Remember me
