ಚಿಟಗುಪ್ಪ: ಹೃದಯಘಾತದಿಂದ ತಂದೆ ಸಾವನ್ನಪ್ಪಿದರು. ಈ ನೋವು ಇರುವಂತೆಯೇ ಮರುದಿನವೇ ಮಕ್ಕಳ ಮದುವೆಯೂ ನೆರವೇರಿತು. ಗ್ರಾಮಸ್ಥರ ನೆರವು ಮತ್ತು ಸಹಕಾರದೊಂದಿಗೆ ನಡೆದ ಮದುವೆಯ ಹಿಂದಿದೆ ಒಂದು ಹೃದ್ಯ ಕಾರಣ.
ಇಂಥದ್ದೊಂದು ಮದುವೆ ನಡೆದಿರುವುದು ಕಂದಗೂಳದಲ್ಲಿ. ಈ ಕಂದಗೂಳ ಗ್ರಾಮದ ವಿಶ್ವನಾಥ ಶೇರಿಕಾರ (45) ಇವರ ಮಕ್ಕಳ ಮದುವೆ ಸೋಮವಾರ ನಿಗದಿಯಾಗಿತ್ತು. ಆದರೆ ಅವರು ಭಾನುವಾರವೇ ಹೃದಯಘಾತದಿಂದ ನಿಧನ ಹೊಂದಿದ್ದರು. ಇದರಿಂದಾಗಿ ಮನೆಯಲ್ಲಿ ಕುಟುಂಬಸ್ಥರು ದುಃಖದ ಮಡುವಿನಲ್ಲಿ ಮುಳುಗಿದ್ದರು. ಮೃತ ವಿಶ್ವನಾಥ ಶೇರಿಕಾರ ಅವರ ಪುತ್ರ ನಾಗರಾಜನಿಗೆ ಪಕ್ಕದ ತಾಳಮಡಗಿ ಗ್ರಾಮದ ಕಾವೇರಿ ಅವರೊಂದಿಗೆ ಹಾಗೂ ಪುತ್ರಿ ಗೀತಾ ಅವರಿಗೆ ಕಮಲಾಪುರ ತಾಲೂಕಿನ ಮುದ್ದಡಗಾ ಗ್ರಾಮದ ನಾಗರಾಜ ಅವರೊಂದಿಗೆ ಮದುವೆ ನಿರ್ಣಯವಾಗಿತ್ತು.
ಮದುವೆಯ ಸಿದ್ಧತೆಯಲ್ಲಿದ್ದಾಗ ವಿಶ್ವನಾಥ ಹೃದಯಘಾತದಿಂದ ನಿಧನ ಹೊಂದಿದ್ದರು. ಶರಣ ತತ್ತ್ವದ ಅನುಯಾಯಿಗಳಾದ ಕಂದಗೂಳ ಗ್ರಾಮಸ್ಥರು ವಿಶ್ವನಾಥ ಅವರ ಆತ್ಮಕ್ಕೆ ಶಾಂತಿ ದೊರೆಯಬೇಕಾದರೆ ನಿಗದಿಯಂತೆ ಅವರ ಮಕ್ಕಳ ಮದುವೆ ಮಾಡಬೇಕೆಂದು ಒಮ್ಮತದ ನಿರ್ಧಾರ ಕೈಗೊಂಡರು. ಅದರಂತೆ ಕುಟುಂಬಸ್ಥರು ವಧು-ವರನ ಕಡೆಯವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿಮ್ಮ ತಂದೆಯ ಆಸೆ ಎಲ್ಲರೂ ಸೇರಿ ಈಡೇರಿಸೋಣ ಎಂದು ಮದುವೆ ಮಾಡಿಸಿದರು.
VIDEO| ಕರೊನಾ ಡ್ಯಾನ್ಸ್​ಗೆ ಪೊಲೀಸರ ಹೆಜ್ಜೆ; ವೈರಲ್​ ಆಯ್ತು ಕೇರಳ ಪೊಲೀಸರು ಕೈ ತೊಳೆಯೋ ಡ್ಯಾನ್ಸ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × four =
Remember me
