ತುಮಕೂರು :ಕರೊನಾ ಸಮಯದಲ್ಲೂ ಗಟ್ಟಿಮೇಳಗಳಿಗೆ ಕೊರತೆ ಇಲ್ಲ. ಕರೊನಾ ತಗುಲುವ ಭೀತಿ ಹಾಗೂ ಸರ್ಕಾರದ ಲಾಕ್​ಡೌನ್​ ನಡುವೆ ವಧುವರರು ಮನೆಗಳಲ್ಲೇ ಹಸೆಮಣೆ ಏರುತ್ತಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ನಿನ್ನೆ ಮತ್ತು ಇಂದು, ಎರಡೇ ದಿನಗಳಲ್ಲಿ, 500 ಕ್ಕೂ ಹೆಚ್ಚು ಮದುವೆಗಳು ನಡೆದಿವೆ ಎಂದು ಮೂಲಗಳು ತಿಳಿಸಿವೆ.
ತುಮಕೂರು ತಾಲೂಕು ಒಂದರಲ್ಲೇ 200 ಕ್ಕೂ ಹೆಚ್ಚು ಮದುವೆಗಳನ್ನು ನಡೆಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಲಾಗಿದೆ. ಚಿಕ್ಕನಾಯಕನಹಳ್ಳಿ, ಪಾವಗಡ ಮತ್ತು ಮಧುಗಿರಿ ತಾಲ್ಲೂಕುಗಳಲ್ಲೂ ಹೆಚ್ಚು ಮದುವೆಗಳು ನಡೆಯುತ್ತಿವೆ.
ಇದನ್ನೂ ಓದಿ:ಮಡಿಕೇರಿ ಕೋವಿಡ್​ ಆಸ್ಪತ್ರೆಯಲ್ಲಿ ಎಡವಟ್ಟು ! ಮೃತ ಮಹಿಳೆ ಮಾಂಗಲ್ಯ ಸರ ಕಾಣೆ !
ತಾಳಿ ಕಟ್ಟಲು ಒಳ್ಳೇ ಮುಹೂರ್ತ ಇರೋ ಕಾರಣಕ್ಕೆ ಹಲವರು ಮದುವೆ ಕಾರ್ಯದಲ್ಲಿ ತೊಡಗುತ್ತಿದ್ದಾರೆ. ಲಾಕ್​​ಡೌನ್ ವಿಸ್ತರಣೆ ಮತ್ತು ಮೂರನೇ ಅಲೆಯ ಭೀತಿಯ ಕಾರಣದಿಂದ ಪರಿಸ್ಥಿತಿ ಸುಧಾರಿಸಲು ಕಾಯದೆ, ಮನೆಗಳಲ್ಲೇ ಹೆಚ್ಚು ಅಬ್ಬರವಿಲ್ಲದೆ ಮದುವೆ ಮಾಡಲು ಪಾಲಕರು ಮುಂದಾಗುತ್ತಿದ್ದಾರೆ.
ನಕಲಿ ಗುರುತಿನೊಂದಿಗೆ ಪಾಕಿಸ್ತಾನೀಯರೊಂದಿಗೆ ಸಂಪರ್ಕ; ಗೂಢಚಾರಿಕೆಯ ಶಂಕೆಯಲ್ಲಿ ಇಬ್ಬರು ಮಹಿಳೆಯರ ಬಂಧನ

ಯುವಕನ ಮೊಬೈಲ್ ಒಡೆದು ಕಪಾಳಕ್ಕೆ ಹೊಡೆದ ಜಿಲ್ಲಾಧಿಕಾರಿ ಸಸ್ಪೆಂಡ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + 20 =
Remember me
