ಯಲ್ಲಾಪುರ:ಸ್ವರ್ಣವಲ್ಲೀ ಮಠದ ಸಪ್ತಪದಿ ಸಂಘಟನೆ ಮಾರ್ಗದರ್ಶನದಲ್ಲಿ ತಾಲೂಕಿನ ಕಳಚೆಯ ಲಕ್ಷ್ಮೀನರಸಿಂಹ ಸಭಾಭವನದಲ್ಲಿ ಉತ್ತರ ಪ್ರದೇಶದ ಬಲರಾಮಪುರದ ಸೋನಾರ್ ಗ್ರಾಮದ ಸಂಜನಾ ಮಿಶ್ರಾ ಹಾಗೂ ತಾಲೂಕಿನ ಕಳಚೆ ಗ್ರಾಮದ ವೈದಿಕ ನಾರಾಯಣ ಭಟ್ ಅವರ ವಿವಾಹ ಸೋಮವಾರ ನಡೆಯಿತು. ಇದು ಉತ್ತರ ಹಾಗೂ ದಕ್ಷಿಣದ ನಡುವೆ ನಡೆದ 27ನೇ ವೈವಾಹಿಕ ಸಂಬಂಧವಾಗಿದೆ.
ಈ ವೇಳೆ ಮಾತನಾಡಿದ ಸಪ್ತಪದಿ ಸಂಚಾಲಕ ವೆಂಕಟ್ರಮಣ ಬೆಳ್ಳಿ, ದಕ್ಷಿಣೋತ್ತರ ಸಂಬಂಧಕ್ಕೆ ಸ್ವರ್ಣವಲ್ಲಿ ಶ್ರೀಗಳು ಸಪ್ತಪದಿ ಸಂಘಟನೆಯನ್ನು ಹುಟ್ಟು ಹಾಕಿದ್ದು, ಅದರಡಿ ಏಳೆಂಟು ವರ್ಷಗಳಲ್ಲಿ 27 ಯಶಸ್ವಿ ಸಂಬಂಧಗಳು ಕೈಗೂಡಿವೆ ಎಂದರು.
ಪ್ರಮುಖರಾದ ಶ್ರೀಪಾದ ಉಪಾಧ್ಯ, ಕರಿಕಲ್ ನಾರಾಯಣ ಹೆಗಡೆ, ರಂಜನಾ, ರಾಮಚಂದ್ರ ಕೆರೆಗದ್ದೆ, ಬಲರಾಮಪುರದ ಕಿರಣ್ ಉಪಾಧ್ಯಾಯ, ಗಜಾನನ ಭಟ್ ಕಳಚೆ, ಉಮೇಶ್ ಭಾಗ್ವತ್ ಉಪಸ್ಥಿತರಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 3 =
Remember me
