ಬೆಂಗಳೂರು:ಎಲ್ಲವೂ ಅಂದುಕೊಂಡಂತೆಯೇ ನಡೆದಿದ್ದರೆ ಇಲ್ಲೊಂದಷ್ಟು ಜೋಡಿಗಳ ಮದುವೆ ಲಾಕ್​ಡೌನ್​ ಅವಧಿಯಲ್ಲಿಯೇ ಮುಗಿದುಹೋಗಿರಬೇಕಿತ್ತು. ಆದರೆ ಅಂದುಕೊಂಡ ಹಾಗಾಗದೆ ಈ ವಧು-ವರರು ನಿರಾಸೆಗೀಡಾಗಿದ್ದರು. ಆದರೆ ಇದೀಗ ಅವರ ಮುಖದಲ್ಲಿ ಖುಷಿ ಕಾಣಿಸಿದೆ.
ಏಕೆಂದರೆ ಸರ್ಕಾರದಿಂದಲೇ ಉಚಿತವಾಗಿ ಮದುವೆ ನಡೆಯಲಿದೆ ಎಂದು ‘ಆಹಾ ನಮ್​ ಮದ್ವೆಯಂತೆ’ ಎಂಬ ಖುಷಿಯಲ್ಲಿದ್ದು ಬೇಸರಕ್ಕೂ ಒಳಗಾಗಿದ್ದ ಜೋಡಿಗಳಿಗೆ ಈಗ ಕೊನೆಗೂ ‘ಸಪ್ತಪದಿ’ಗೆ ಮುಹೂರ್ತ ಕೂಡಿ ಬಂದಿದೆ.
ಹೌದು.. ಸರ್ಕಾರದ ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ಆ ವ್ಯಾಪ್ತಿಯ ‘ಎ’ ದರ್ಜೆಯ ದೇಗುಲಗಳಲ್ಲಿ ನಡೆಸಲು ಉದ್ದೇಶಿಸಿರುವ ಉಚಿತ ಸಾಮೂಹಿಕ ವಿವಾಹ ಯೋಜನೆ ‘ಸಪ್ತಪದಿ’ಗೆ ಕೊನೆಗೂ ಕಾಲ ಕೂಡಿ ಬಂದಿದೆ. ಡಿಸೆಂಬರ್ 2, 7 ಮತ್ತು 10ರಂದು ಮೂರು ಹಂತಗಳಲ್ಲಿ ಮಹೂರ್ತ ನಿಗದಿಯಾಗಿದೆ.
ಮೊದಲಿಗೆ ಕಳೆದ ಏಪ್ರಿಲ್​-ಮೇನಲ್ಲಿ ಈ ಮದುವೆ ನಡೆಯಬೇಕಿತ್ತು. ಆದರೆ ಕರೊನಾ ಹಾವಳಿ ಹಿನ್ನೆಲೆಯಲ್ಲಿ ಜುಲೈ ಹಾಗೂ ಆಗಸ್ಟ್​ ತಿಂಗಳಿಗೆ ಮುಂದೂಡಲಾಗಿತ್ತು. ಅದಾಗ್ಯೂ ಕರೊನಾ ಸೋಂಕು ನಿಯಂತ್ರಣಕ್ಕೆ ಬರದ್ದರಿಂದ ಮದುವೆ ಮತ್ತೆ ಮುಂದೂಡಲ್ಪಟ್ಟಿತ್ತು. ಇದೀಗ ಡಿಸೆಂಬರ್​ನಲ್ಲಿ ಸಪ್ತಪದಿ ನಡೆಯಲಿದೆ.

2021ರಲ್ಲಿ ಸ್ವಾತಂತ್ರ್ಯೋತ್ಸವ, ಕ್ರಿಸ್​ಮಸ್​, ಮಹಾವೀರ ಜಯಂತಿಗಿಲ್ಲ ಸಾರ್ವತ್ರಿಕ ರಜೆ; ಆದರೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × five =
Remember me
