ಬಂಕಾಪುರ (ಹಾವೇರಿ): ಲಾಕ್‌ಡೌನ್ ಮಧ್ಯೆ ಪ್ರಿಯಕರನನ್ನು ಹುಡುಕಿಕೊಂಡು ಬಂದ ಯುವತಿಗೆ ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಶುಕ್ರವಾರ ಮದುವೆ ಮಾಡಿಸಿದ ಅಪರೂಪದ ಪ್ರಸಂಗ ನಡೆಯಿತು.
ಲಕ್ಷ್ಮೇಶ್ವರ ತಾಲೂಕಿನ ಯತ್ನಳ್ಳಿ ಗ್ರಾಮದ ನಿರ್ಮಲಾ ಕಲ್ಮನಿ ತನ್ನ ಪ್ರಿಯಕರ ರವಿ ಯಲಿಗಾರನನ್ನು ಹುಡುಕಿಕೊಂಡು ಬಂಕಾಪುರಕ್ಕೆ ಬಂದಿದ್ದಳು. ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ ಎರಡು ವರ್ಷಗಳ ಹಿಂದೆ ಇಬ್ಬರಿಗೂ ಪರಿಚಯವಾಗಿತ್ತು. ಪರಿಚಯ ನಂತರ ಪ್ರೀತಿಗೆ ತಿರುಗಿ ಮದುವೆ ಮಾಡಿಕೊಳ್ಳುವ ತೀರ್ಮಾನಕ್ಕೆ ಬಂದಿದ್ದರು. ಆದರೆ, ಲಾಕ್‌ಡೌನ್ ಘೋಷಣೆಯಾದ ಕಾರಣ ಇಬ್ಬರೂ ಸ್ವಗ್ರಾಮಗಳಿಗೆ ಮರಳಿದ್ದರು.
ಇದನ್ನೂ ಓದಿಹೆಜ್ಜೆಹೆಜ್ಜೆಗೂ ಅಡ್ಡಗಾಲು ಹಾಕುತ್ತಿದ್ದ ಸಾಬೂನನ್ನು ಮುಗಿಸಿಯೇ ಬಿಟ್ಟರು!
ಯುವಕನ ಮನೆಯವರು ಮದುವೆ ಮಾಡಿಕೊಡಲು ವಿರೋಧ ವ್ಯಕ್ತಪಡಿಸಿದ್ದರು. ಶುಕ್ರವಾರ ಯುವತಿ ತನ್ನ ಇಬ್ಬರು ಸಹೋದರರ ಜತೆಗೆ ಯುವಕನ ಮನೆಗೆ ಬಂದು ಮದುವೆ ಮಾಡಿಕೊಳ್ಳುವಂತೆ ಕೇಳಿಕೊಂಡಿದ್ದಾಳೆ. ಆದರೆ, ಯುವಕ ಸಮ್ಮತಿಸದೆ ಇದ್ದಾಗ ಪೊಲೀಸರ ಮೊರೆ ಹೋಗಿದ್ದಾಳೆ.
ಪ್ರೇಮಿ ರವಿ ಮತ್ತು ಆತನ ತಂದೆಯನ್ನು ಠಾಣೆಗೆ ಕರೆಯಿಸಿದ ಪೊಲೀಸರು ಹಾಗೂ ಹಿರಿಯರು ಬುದ್ಧಿವಾದ ಹೇಳಿ ಮನವೊಲಿಸಿದರು. ನಂತರ ಠಾಣೆಯ ಆವರಣದಲ್ಲಿ ಹಿರಿಯರ ಸಮ್ಮುಖದಲ್ಲಿ ಯುವತಿಗೆ ತಾಳಿ ಕಟ್ಟಿಸಿ ಸರಳ ವಿವಾಹ ನೆರವೇರಿಸಿದ್ದಾರೆ.
ಹೊರಬರಲು ಹೆದರಿ ಪುಟ್ಟ ಮನೆಯಲ್ಲಿ ಮುದುರಿ ಕುಳಿತಿದ್ದಾರೆ ಇವರು; ಭಯಕ್ಕೆ ಕಾರಣ ಅಳುತ್ತ ಹೇಳಿದ್ದಾರೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − four =
Remember me
