ಬೆಂಗಳೂರು:ಪತ್ನಿ ಜತೆಗಿದ್ದ ಪ್ರಿಯಕರನನ್ನು ಕಂಡು ಕೋಪಗೊಂಡ ಗಂಡ ಕಲ್ಲಿನಿಂದ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾನೆ. ಕನಕಪುರ ರಸ್ತೆ ಗುಬ್ಬಲಾಳದ ಸುರೇಶ್(34) ಕೊಲೆಯಾದ ವ್ಯಕ್ತಿ. ಆತನ ಹತ್ಯೆ ಮಾಡಿದ ಆರೋಪದಲ್ಲಿ ಮಲ್ಲಪ್ಪ (32) ಎಂಬಾತನನ್ನು ತಲಘಟ್ಟಪುರ ಪೊಲೀಸರು ಬಂಧಿಸಿದ್ದಾರೆ.
ಜೆ.ಪಿ. ನಗರದ ಈಶ್ವರಿ ಲೇಔಟ್​ನಲ್ಲಿನ ಪ್ಲೈವುಡ್ ಅಂಗಡಿಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಮಂಡ್ಯ ಮೂಲದ ಸುರೇಶ್ ವಾರಕ್ಕೊಮ್ಮೆ ಊರಿಗೆ ಹೋಗಿ ಬರುತ್ತಿದ್ದ. ಗುಬ್ಬಲಾಳ ಸಮೀಪದ ದೇವೇಂದ್ರಪ್ಪ ಲೇಔಟ್​ನಲ್ಲಿ ಕುಟುಂಬದ ಜತೆ ನೆಲೆಸಿದ್ದ ಮಲ್ಲಪ್ಪ, ಸಿಮೆಂಟ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ.
ಸುರೇಶ್​ಗೂ ಮತ್ತು ಮಲ್ಲಪ್ಪನ ಪತ್ನಿಗೂ ಸ್ನೇಹ ಬೆಳೆದು ಸಲಿಗೆಯಿಂದಿದ್ದರು. ಅದನ್ನು ತಿಳಿದ ಮಲ್ಲಪ್ಪ ತನ್ನ ಪತ್ನಿಗೆ ಬುದ್ಧಿವಾದ ಹೇಳಿದ್ದ. ಅಲ್ಲದೆ, ಸುರೇಶ್ ಜತೆಗೂ ಗಲಾಟೆ ಮಾಡಿದ್ದ. ಆದರೂ ಇಬ್ಬರೂ ಸರಿದಾರಿಗೆ ಬಂದಿರಲಿಲ್ಲ. ಕುಪಿತಗೊಂಡ ಮಲ್ಲಪ್ಪ, ಇಬ್ಬರನ್ನೂ ಸಾಕ್ಷಿ ಸಮೇತ ಹಿಡಿಯಬೇಕೆಂದು ನಿರ್ಧರಿಸಿದ್ದ. ಅ.16ರ ರಾತ್ರಿ 11.30ಕ್ಕೆ ಕೆಲಸದ ನಿಮಿತ್ತ ಹೊರಗೆ ಹೋಗುವುದಾಗಿ ಪತ್ನಿಗೆ ಹೇಳಿ ಮನೆಯಿಂದ ಹೊರಹೋಗಿದ್ದ. ಈ ವಿಚಾರ ತಿಳಿದ ಸುರೇಶ್, ಕೆಲವೇ ನಿಮಿಷದಲ್ಲಿ ಮನೆಗೆ ಆಗಮಿಸಿ ಪ್ರೇಯಸಿ ಜತೆ ಸೇರಿದ್ದ. ಸ್ವಲ್ಪ ಸಮಯದಲ್ಲಿಯೇ ಮಲ್ಲಪ್ಪ ಮನೆಗೆ ಹಿಂದಿರುಗಿದ್ದ. ಆತನನ್ನು ಕಂಡು ಮನೆ ಒಳಗಿದ್ದ ಸುರೇಶ್ ಮತ್ತು ಮಲ್ಲಪ್ಪನ ಪತ್ನಿ ಗಲಿಬಿಲಿಯಾಗಿದ್ದು, ಸುರೇಶ್ ಪಕ್ಕದ ಮನೆ ಮಹಡಿಗೆ ಹೋಗಿ ಸಜ್ಜೆ ಮೇಲೆ ಅವಿತುಕೊಂಡಿದ್ದ.
ಬಾಗಿಲು ತೆಗೆದ ಪತ್ನಿ ಮುಖದಲ್ಲಿ ಭಯ ನೋಡಿ ಅನುಮಾನಗೊಂಡ ಮಲ್ಲಪ್ಪ, ಮನೆಯೆಲ್ಲಾ ಹುಡುಕಾಟ ನಡೆಸಿದ್ದಾನೆ. ಮಹಡಿ ಮೇಲೆ ಹೋಗಿ ನೋಡಿದಾಗ ಪಕ್ಕದ ಕಟ್ಟಡದ ಸಜ್ಜೆ ಮೇಲೆ ಕುಳಿತಿದ್ದ ಸುರೇಶ್​ನನ್ನು ಕಂಡು ಗ್ರಾನೈಟ್​ನಿಂದ ಹಲ್ಲೆ ಮಾಡಿದ್ದಾನೆ. ಹಲ್ಲೆಗೆ ಒಳಗಾದ ಸುರೇಶ್, 25 ಅಡಿ ಎತ್ತರದಿಂದ ಕೆಳಗೆ ಬಿದ್ದು ತೀವ್ರ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ತೆರಳಿ ಆರೋಪಿ ಮಲ್ಲಪ್ಪನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − four =
Remember me
