ಬೆಂಗಳೂರು:ಪ್ರಿಯಕರನ ಮಾತು ಕೇಳಿ ಪತಿಯಿಂದ ವಿಚ್ಛೇದನ ಪಡೆದ ಪ್ರತಿಷ್ಠಿತ ಕಂಪನಿಯ ಮಹಿಳಾ ಉದ್ಯೋಗಿಯನ್ನು ಇದೀಗ ವಿವಾಹವಾಗಲು ಪ್ರಿಯಕರ ಒಪ್ಪದ ಹಿನ್ನೆಲೆಯಲ್ಲಿ ಫಜೀತಿಗೆ ಸಿಲುಕಿದ್ದಾರೆ.
ಬಿಟಿಎಂ ನಿವಾಸಿ 30 ವರ್ಷದ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಇವರ ಪ್ರಿಯಕರ ಸಂಜಯ್ (30) ವಿರುದ್ಧ ಮೈಕೋ ಲೇಔಟ್ ಪೊಲೀಸರು ಎಫ್​ಐಆರ್ ದಾಖಲಿಸಿಕೊಂಡಿದ್ದಾರೆ.
ದೂರುದಾರ ಮಹಿಳೆ ನಗರದ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, 2015ರಲ್ಲಿ ಪಾಲಕರು ಸೂಚಿಸಿದ ಖಾಸಗಿ ಕಂಪನಿ ಉದ್ಯೋಗಿಯೊಬ್ಬರನ್ನು ವಿವಾಹವಾಗಿದ್ದರು. ಆರಂಭದಲ್ಲಿ ದಂಪತಿ ಅನ್ಯೋನ್ಯವಾಗಿದ್ದರು. ಆದರೆ, ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ವೇಳೆ ಇವರನ್ನು ಪ್ರೀತಿಸಿದ್ದವ 2017ರಲ್ಲಿ ಮಹಿಳೆಯನ್ನು ಸಂರ್ಪಸಿದ್ದ. ಅಲ್ಲದೆ, ಸಲುಗೆ ಬೆಳೆಸಿ, ವಿವಾಹವಾಗುವುದಾಗಿ ನಂಬಿಸಿದ್ದ.
ಪ್ರಿಯಕರನ ಮಾತಿಗೆ ಮರುಳಾದ ಮಹಿಳೆ ಅನ್ಯೋನ್ಯವಾಗಿದ್ದ ಪತಿಗೆ ನಡೆದ ಸಂಗತಿ ವಿವರಿಸಿ ಆತನಿಂದ ವಿಚ್ಛೇದನ ಪಡೆದಿದ್ದಳು. ಆರೋಪಿ ಸಂಜಯ್ ವಿವಾಹವಾಗುವುದಾಗಿ ನಂಬಿಸಿದ ಹಿನ್ನೆಲೆಯಲ್ಲಿ ಆತನೊಂದಿಗೆ ಸಹ ಜೀವನ ನಡೆಸುತ್ತಿದ್ದರು.
ಕೆಲ ಸಮಯದಿಂದ ದೂರುದಾರ ಮಹಿಳೆ ವಿವಾಹವಾಗುವಂತೆ ಒತ್ತಾಯಿಸಿದಾಗ ನೆಪ ಹೇಳಿ ಆರೋಪಿ ತಪ್ಪಿಸಿಕೊಳ್ಳುತ್ತಿದ್ದ. ಇತ್ತೀಚೆಗೆ ಮಹಿಳೆಯ ಪಾಲಕರು ವಿವಾಹವಾಗುವಂತೆ ಹೇಳಿದಾಗ, ಆರೋಪಿಯು ವಿವಾಹವಾಗಲು ನಿರಾಕರಿಸಿದ್ದ. ಅಲ್ಲದೆ, ಬೇರೊಬ್ಬ ಯುವತಿಯೊಂದಿಗೆ ವಿವಾಹವಾಗಲು ಸಿದ್ಧತೆ ನಡೆಸುತ್ತಿದ್ದಾನೆ ಎಂದು ದೂರಿನಲ್ಲಿ ಮಹಿಳೆ ಆರೋಪಿಸಿದ್ದಾರೆ.
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಸಿಗರೇಟ್ ಸೇದುವ ವಿಚಾರಕ್ಕೆ ರಿಯಾಲಿಟಿ ಶೋ ಸ್ಫರ್ಧಿಯ ಕಿರಿಕ್‌: ದೂರು ದಾಖಲು

ಯೂಟ್ಯೂಬ್ ಪ್ರಾಂಕ್ಸ್​ ಸೋಗಿನಲ್ಲಿ ಎಲ್ಲೆಲ್ಲೋ ಮುಟ್ತಿದ್ದ… ಮಾಡಿದ್ದೆಲ್ಲ ದುಡ್ಡಿಗಾಗಿ !

ಪತ್ನಿ ಮುಖ ನೋಡಿ ಮುಜುಗರಕ್ಕೊಳಗಾಗಿ ಆರೋಪಿ ಆತ್ಮಹತ್ಯೆ ಪ್ರಕರಣ: ಪಿಎಸ್​ಐ ಸಸ್ಪೆಂಡ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × four =
Remember me
