ಬೆಂಗಳೂರು:ನಾಲ್ಕು ದಿನದ ಹಿಂದೆ ಕೆಲಸಕ್ಕೆಂದು ಹೋಗಿದ್ದ ಮಹಿಳೆಯೊಬ್ಬಳು ಇಬ್ಬರು ಬ್ಯಾಚಲರ್ ಹುಡುಗರಿದ್ದ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ಈ ಪ್ರಕರಣದ ಆರೋಪಿಗಳು ಗೋವಾದಲ್ಲಿ ಸಿಕ್ಕಿದ್ದು, ಆ ದಿನ ಏನಾಯ್ತು? ಎಂಬುದನ್ನ ಪೊಲೀಸರ ಬಳಿ ಬಾಯ್ಬಿಟ್ಟಿದ್ದಾರೆ.
ನಗರದ ಪ್ರಿಂಟಿಂಗ್​ ಪ್ರೆಸ್​ವೊಂದರಲ್ಲಿ ಕೆಲಸ ಮಾಡುತ್ತಿದ್ದ 33 ವರ್ಷದ ಮಹಿಳೆಯೊಬ್ಬರು ಜ.4ರಂದು ಎಂದಿನಂತೆ ಕೆಲಸಕ್ಕೆ ಹೋಗಿದ್ದರು. ಕತ್ತಲಾದರೂ ಆಕೆ ವಾಪಸ್​ ಮನೆಗೆ ಬಂದಿರಲಿಲ್ಲ. ಹಾಗಾಗಿ ಕುಟುಂಬಸ್ಥರು ಮಾಗಡಿ ರಸ್ತೆಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಮೊಬೈಲ್​ ನೆಟ್​ವರ್ಕ್​ ಜಾಡು ಹಿಡಿದು ತನಿಖೆ ಆರಂಭಿಸಿದ್ದ ಪೊಲೀಸರಿಗೆ, ಈ ಮಹಿಳೆ ಕಾಮಾಕ್ಷಿಪಾಳ್ಯದ ರಂಗನಾಥಪುರದ ಮನೆಯಲ್ಲಿರುವ ಬಗ್ಗೆ ಟವರ್ ಲೊಕೇಷನ್ ಸುಳಿವು ನೀಡಿತ್ತು.ಇದನ್ನೂ ಓದಿರಿಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್​ಐಆರ್​ ದಾಖಲು
ಪೊಲೀಸರು ಆ ಮನೆಗೆ ಹೋದಾಗ ಮಹಿಳೆ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಳು. ಮಹಿಳೆ ಮೃತಪಟ್ಟ ಮನೆಯಲ್ಲಿ ವಾಸವಿದ್ದ ಅವಿವಾಹಿತ ಹುಡುಗರಿಬ್ಬರು ಘಟನೆ ಬಳಿಕ ನಾಪತ್ತೆಯಾಗಿದ್ದರು. ತನಿಖೆ ಚುರುಕುಗೊಳಿಸಿದ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರ ಕೈಗೆ ನಾಪತ್ತೆಯಾಗಿದ್ದ ಅವಿವಾಹಿತ ಹುಡುಗರಿಬ್ಬರೂ ಗೋವಾದಲ್ಲಿ ಸಿಕ್ಕಿಬಿದ್ದಿದ್ದಾರೆ. ಆರೋಪಿಗಳನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸಿದ್ದು, ಈ ವೇಳೆ ಮಹಿಳೆ ಸಾವಿನ ಸತ್ಯವನ್ನು ಬಾಯ್ಬಿಟ್ಟಿದ್ದಾರೆ.
‘ಸೆಕ್ಸ್​ ಮಾಡುವಾಗ ಆ ಮಹಿಳೆ ಉಸಿರುಗಟ್ಟಿ ಅಸ್ವಸ್ಥಳಾದಳು. ಬಿಪಿ ಮತ್ತು ಉಸಿರಾಟ ಸಮಸ್ಯೆಯಿಂದ ಆಕೆ ಬಳಲುತ್ತಿದ್ದಳು. ಮಹಿಳೆ ಅಸ್ವಸ್ಥವಾಗುತ್ತಿದ್ದಂತೆ ಆಸ್ಪತ್ರೆಗೆ ಕರೆದೊಯ್ಯಲೂ ಯತ್ನಿಸಿದೆವು. ಆಕೆ ದಪ್ಪ ಇದ್ದ ಕಾರಣ ಮನೆಯಿಂದ ಹೊರ ತರಲು ಆಗಲಿಲ್ಲ. ಅಷ್ಟರಲ್ಲಿ ಆಕೆ ಪ್ರಾಣ ಬಿಟ್ಟಿದ್ದಳು… ಮಹಿಳೆ ಸಾವಿನ ಬಳಿಕ ಭಯಗೊಂಡು ತಲೆಮರೆಸಿಕೊಂಡಿದ್ದೆವು’ ಎಂದು ಆರೋಪಿಗಳು ಹೇಳಿದ್ದಾರೆ. ಆರೋಪಿಗಳ ಪೈಕಿ ಒಬ್ಬ ಬಾರ್ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿದ್ದ.
ತಾಯಿ-ತಂಗಿ ಮೇಲೆ ಟ್ರ್ಯಾಕ್ಟರ್​ ಹರಿಸಿ ಕೊಂದುಬಿಟ್ಟ! ಕಾರಣ ಕೇಳಿದ್ರೆ ಬೆಚ್ಚಿಬೀಳ್ತೀರಿ

ಲೈವ್​ನಲ್ಲೇ ವಿಷ ಕುಡಿದ ಅರ್ಚಕ! 3 ದಿನದ ಬಳಿಕ ಸೆಲ್ಫಿವಿಡಿಯೋ ವೈರಲ್​, ಡೆತ್​ನೋಟ್​ನಲ್ಲಿದೆ ಸ್ಫೋಟಕ ರಹಸ್ಯ

ವರ್ಷಾಚರಣೆಗೆ ಕೇಕ್​ ಕತ್ತರಿಸುತ್ತಿದ್ದ ಯುವಕರ ಹಿಂದೆಯೇ ಹಾದುಹೋದ ದೆವ್ವ! ಭಯಾನಕ ವಿಡಿಯೋ ಇಲ್ಲಿದೆ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:13 − three =
Remember me
