ವಿಜಯಪುರ:ವಿಜಯಪುರದಲ್ಲಿ ವಿವಾಹಿತೆ ಮಹಿಳೆ ಲೈವ್ ಆಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಈ ಮಹಿಳೆ ನೇಣಿಗೆ ಶರಣಾಗುವ ಮುನ್ನ ಮೊಬೈಲ್ ವಿಡಿಯೋ ಆನ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪ್ರಿಯಕರನ ಬ್ಲ್ಯಾಕ್ಮೇಲ್ ಕಾರಣಕ್ಕೆ ವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಆಕೆಯ ಪ್ರಿಯಕರ ಅಲ್ತಾಫ್ ಸುಲೆಮಾನ್ “ನನ್ನೊಂದಿಗಿರುವ ಫೋಟೋ ನಿನ್ನ ಗಂಡನಿಗೆ ತೋರಿಸುತ್ತೇನೆ” ಎಂದು ಬ್ಲ್ಯಾಕ್ಮೇಲ್ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಮರ್ಯಾದೆಗೆ ಹೆದರಿ ಸುಹಾನಾ ಲೈವ್ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವಿಡಿಯೋ ಕೂಡ ನೋಡಲು ಭಯಾನಕವಾಗಿದೆ. ಮೃತ ಮಹಿಳೆಯನ್ನು 21 ವರ್ಷದ ಸುಹಾನ್ ಸೋನಾರ್ ಎಂದು ಗುರುತಿಸಲಾಗಿದೆ. ಈ ಘಟನೆ ಏ. 15ರಂದು ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಉಪ್ಪಲದಿನ್ನಿ ಗ್ರಾಮದಲ್ಲಿ ನಡೆದಿದೆ.
ಉಪ್ಪಲದಿನ್ನಿ ಗ್ರಾಮದ ಅಲ್ತಾಫ್ ಸುಲೆಮಾನ್ 1ವರ್ಷದ ಹಿಂದೆ ಸುಹಾನಾ ಜತೆ ಸಲುಗೆ ಬೆಳೆಸಿ ಪ್ರೀತಿಸುತ್ತಿದ್ದ. ಈ ವಿಷಯ ಸುಹಾನಾ ಪೋಷಕರಿಗೆ ಗೊತ್ತಾಗಿ ಹಿರಿಯರ ಸಮ್ಮುಖದಲ್ಲಿ ಅಲ್ತಾಫ್ ಗೆ ತಾಕೀತು ಮಾಡಿದ್ದರು. ಬಳಿಕ ಸುಹಾನಾ ಹೊಕ್ಕುಂಡಿ ಗ್ರಾಮದ ಷರೀಫ್ ಸೋನಾರ್ ಜೊತೆಗೆ ಈಚೆಗೆ ಮದುವೆ ಮಾಡಿಕೊಟ್ಟಿದ್ದರು.
ಇನ್ನೂಸ್ ಪಾರ್ಥನಲ್ಲಿ ಹಾಗೂ ದಸ್ತಗಿರಸಾಬ ಮುಳವಾಡ ಜತೆಗೆ ವಿವಾಹಿತೆಯ ತಂದೆ ಅಸ್ಲಂ ಮುಲ್ಲಾಗೆ ರಾಜಕೀಯ ದ್ವೇಷವೂ ಇತ್ತು ಎನ್ನಲಾಗಿದೆ. ದಸ್ತಗಿರಸಾಬ ಮುಳವಾಡ ಮಗಳ ಬಾಲ್ಯ ವಿವಾಹವನ್ನು ಅಧಿಕಾರಿಗಳು ತಡೆದಿದ್ದಕ್ಕೆ ಅಸ್ಲಂ ಮುಲ್ಲಾ ಕಾರಣವೆಂದು ಸಿಟ್ಟು ಇತ್ತು.
ಮೂವರು ಸೇರಿ ಸುಹಾನಾ ಬೆನ್ನುಹತ್ತಿ ಕಿರುಕುಳ ಕೊಡುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖವಾಗಿದೆ. ಗಂಡನನ್ನು ಬಿಟ್ಟು ಬಾ ಇಲ್ಲವಾದರೆ ನನ್ನೊಂದಿಗಿರುವ ಫೋಟೋ ನಿನ್ನ ಗಂಡನಿಗೆ ತೋರಿಸುತ್ತೇನೆ ಎಂದು ಸುಹಾನಾಳಿಗೆ ಅಲ್ತಾಫ್ ಸುಲೆಮಾನ್ ಬ್ಲ್ಯಾಕ್ಮೇಲ್ ಮಾಡುತ್ತಿದ್ದ.
ಮೂವರು ಹೆಸರು ಹೇಳಿ ವಿವಾಹಿತೆ ಸುಹಾನಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ತಂದೆ ಅಸ್ಲಂ ಮುಲ್ಲಾ ಪೊಲೀಸ್ ಠಾಣೆಗೆ ದೂರು. ಸದ್ಯ ಬಬಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:13 + 2 =
Remember me
