ಬೆಂಗಳೂರು:ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಇದೀಗ ಮರುಸಿಂಚನ ಎಂಬ ಮಹತ್ವಾಕಾಂಕ್ಷೆಯ ಯೋಜನೆಯನ್ನು ಅನೇಕ ಶಾಲೆಗಳಲ್ಲಿ ಪ್ರಾರಂಭಿಸಲು ಮುಂದಾಗಿದ್ದು, ಈ ಮೂಲಕ ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಹೆಚ್ಚಿಸಲು ಶ್ರಮಿಸಲಾಗುವುದು ಎಂದು ತಿಳಿಸಿದೆ. ಜನವರಿಯ ಮಧ್ಯಂತರದೊಳಗೆ ಸುಮಾರು 282ಕ್ಕೂ ಹೆಚ್ಚು ಶಾಲೆಗಳಲ್ಲಿ ಈ ಯೋಜನೆಯನ್ನು ಆರಂಭಿಸಲು ಚಿಂತನೆ ನಡೆಸಲಾಗಿದೆ.
ಇದನ್ನೂ ಓದಿ:ಚಿತ್ರದುರ್ಗ ಅಸ್ಥಿಪಂಜರ ಪತ್ತೆ ಪ್ರಕರಣ: ಉತ್ತಮ ತೋಟ ಕಟ್ಟಿದ್ದ ಬಾಬುರೆಡ್ಡಿ, ಇಷ್ಟೆಲ್ಲಾ ಇದ್ದು ಯಾಕೆ ಹೀಗಾಯಿತು?
ಈ ಮಹತ್ವದ ಯೋಜನೆಯನ್ನು ರಾಜ್ಯದ 17 ಸರ್ಕಾರಿ ಶಾಲೆಗಳ 9ನೇ ತರಗತಿ ವಿದ್ಯಾರ್ಥಿಗಳಿಗೆ ಶುರುಮಾಡಲಿದ್ದು, ಮಕ್ಕಳ ಕಲಿಕೆಯನ್ನು ಅರ್ಥಮಾಡಿಕೊಳ್ಳಲು ಸಮೀಕ್ಷೆಯನ್ನು ಕೂಡ ನಡೆಸಲಾಗುತ್ತದೆ. ಇದರಲ್ಲಿ ವಿದ್ಯಾರ್ಥಿಗಳ ಪರ್ಫಾಮೆನ್ಸ್​ ಆಧಾರದ ಮೇಲೆ 3, 5 ಮತ್ತು 7 ಗ್ರೇಡ್​ಗಳನ್ನು ನೀಡಲಾಗುತ್ತದೆ. ತರಬೇತಿ ನೀಡುವ ಸಲುವಾಗಿ ಪ್ರತಿವಾರವೂ ಮೂರು ತರಗತಿಗಳು ನಡೆಸಲಿರುವ ಶಿಕ್ಷಕರು, ಮಕ್ಕಳು ವಯಸ್ಸಿಗೆ ಸೂಕ್ತವಾದ ಕಲಿಕೆಯ ಮಟ್ಟವನ್ನು ತಲುಪುತ್ತಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲಿದ್ದಾರೆ.
“ಈ ಪ್ರತಿ ಗುಂಪುಗಳಲ್ಲಿ ಶಿಕ್ಷಕರು ವಿಶೇಷ ಮಧ್ಯಸ್ಥಿಕೆಗಳನ್ನು ವಹಿಸಲಿದ್ದು, 3ನೇ ತರಗತಿಯಲ್ಲಿರುವವರನ್ನು 5ನೇ ತರಗತಿಗೆ, ತದನಂತರ ಆ ಗುಂಪನ್ನು 7ನೇ ತರಗತಿಗೆ ತರಲಿದ್ದಾರೆ. ಉಳಿದ ದಿನಗಳಲ್ಲಿ ಎಂದಿನಂತೆ ತರಗತಿಗಳು ನಡೆಯಲಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಮರುಸಿಂಚನ ಕಾರ್ಯಕ್ರಮಕ್ಕಾಗಿ ಸುಮಾರು 2,800 ಶಿಕ್ಷಕರಿಗೆ ತರಬೇತಿ ನೀಡಲಾಗುವುದು” ಎಂದು ವರದಿಯಲ್ಲಿ ತಿಳಿಸಲಾಗಿದೆ,(ಏಜೆನ್ಸೀಸ್).
ಕರ್ತವ್ಯದ ವೇಳೆ ಬಿಜೆಪಿಗೆ ಸೇರ್ಪಡೆಗೊಂಡ ಇಬ್ಬರು ಪೊಲೀಸ್ ಅಧಿಕಾರಿಗಳು ಅಮಾನತು!

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:19 − ten =
Remember me
