ಅನ್ಸಾರ್ ಇನೋಳಿ
ಉಳ್ಳಾಲ:ಮಸೀದಿ ತೆರೆಯಲು ಸರ್ಕಾರ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಸಾಮೂಹಿಕ ಪ್ರಾರ್ಥನೆಗೆ ಬರುವ ಜನರ ನಿಯಂತ್ರಣ, ಮಸೀದಿ ನಿರ್ವಹಣೆ ಜಮಾತ್ ಸಮಿತಿಗಳಿಗೆ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ ಮಸೀದಿಗಳಲ್ಲಿ ಪಾಲಿಸಬೇಕಾಗಿರುವ ನಿಯಮಗಳನ್ನು ವಿದ್ವಾಂಸರು ರೂಪಿಸಿದ್ದಾರೆ. ಇದು ಕರಾವಳಿಯ ಎಲ್ಲ ಮಸೀದಿಗಳಿಗೂ ಅನ್ವಯವಾದರೂ, ಪಾಲನೆ ಕಡ್ಡಾಯವಲ್ಲ. ಅನುಷ್ಠಾನ ಆಯಾ ಮಸೀದಿಗಳ ಆಡಳಿತ ಸಮಿತಿಗೆ ಬಿಟ್ಟ ವಿಚಾರ.
ವಿದ್ವಾಂಸರ ನಿಯಮ ಪ್ರಕಾರ, ಮಸೀದಿ ಪ್ರವೇಶ ಮತ್ತು ಹೊರಹೋಗುವ ಸಂದರ್ಭ ಸೋಪ್ ಬಳಸಿ ಕೈಗಳನ್ನು ತೊಳೆದು ರೋಗಾಣುಮುಕ್ತಗೊಳಿಸಲು ವ್ಯವಸ್ಥೆ ಕಲ್ಪಿಸುವುದು, ಮಸೀದಿಗೆ ಬರುವಾಗ ಮನೆಯಿಂದಲೇ ಅಂಗಶುದ್ಧಿ ಮಾಡಿಕೊಂಡು ಬರುವುದು, ಮಸೀದಿಯಲ್ಲಿರುವ ಅಂಗಶುದ್ಧಿ ಕೊಳಗಳ ಬದಲು ನಲ್ಲಿಗಳನ್ನು ಉಪಯೋಗಿಸುವುದು, ಮಸೀದಿಯ ಕಾರ್ಪೆಟ್ ಬದಲು, ಐದು ಹೊತ್ತು ನಮಾಜ್ ಮಾಡಿ ತೊಳೆದು ಒಣಗಿಸಲು ಅನುಕೂಲವಾಗುವ ಕಡಿಮೆ ಭಾರದ ಬಟ್ಟೆಗಳನ್ನು ಮನೆಯಿಂದಲೇ ತರುವುದು, ರೋಗಿಗಳು, ವೃದ್ಧರು, ಮಕ್ಕಳು, ಪ್ರತಿರೋಧ ಶಕ್ತಿ ಕಡಿಮೆ ಇರುವವರಿಗೆ ಪ್ರವೇಶ ನಿಷೇಧಿಸುವುದು ಮೊದಲಾದ ಕ್ರಮಗಳನ್ನು ಅನುಸಿರಿಸುವಂತೆ ತಿಳಿಸಲಾಗಿದೆ.
ಅಪರಿಚಿತರಿಗೆ ನೋ ಎಂಟ್ರಿಮೊಹಲ್ಲಾದ ಪರಿಚಿತ ನಿವಾಸಿಗಳಿಗೆ ಮಾತ್ರ ಮಸೀದಿಯೊಳಗೆ ಪ್ರವೇಶ ನೀಡುವುದು ಈ ನಿಯಮಗಳಲ್ಲಿ ಪ್ರಮುಖವಾದುದು. ಅಪರಿಚಿತರು, ಯಾತ್ರಿಕರು ಅನಿವಾರ್ಯವಾಗಿ ಬಂದರೆ ಮಸೀದಿಯ ಹೊರಗಿನ ಚಾವಡಿಯಲ್ಲಿ ನಮಾಜ್ ಮಾಡಬೇಕು. ಅದ್ಸಾನ್‌ಗೆ ಐದು ನಿಮಿಷಗಳ ಮೊದಲು ಮಸೀದಿ ತೆರೆದು, ಜಮಾತನ್ನು ಹದಿನೈದು ನಿಮಿಷಗಳ ಒಳಗೆ ಮತ್ತು ಜುಮಾ ನಮಾಜನ್ನು 20 ನಿಮಿಷಗಳ ಒಳಗೆ ನಿರ್ವಹಿಸಿ ಇತರ ಸಮಯದಲ್ಲಿ ಮಸೀದಿ ಬಂದ್ ಮಾಡುವುದು. ಜಮಾತ್‌ಗೆ ನಿಯಂತ್ರಣ ಅತೀತವಾಗಿ ಜನ ಸೇರುವ ಸ್ಥಳಗಳಲ್ಲಿ ಒಬ್ಬರಿಗೆ ಒಂದು ಅಥವಾ ಎರಡು ಹೊತ್ತಿನ ಸಾಮೂಹಿಕ ನಮಾಜ್‌ನಲ್ಲಿ ಭಾಗವಹಿಸುವಂತೆ ಹಾಗೂ ಐದು ಹೊತ್ತಿನಲ್ಲೂ ಭಾಗವಹಿಸುವವರ ಪಟ್ಟಿಯನ್ನು ಜಮಾತ್ ಸಮಿತಿ ಸಿದ್ಧಪಡಿಸುವುದು ನಿಯಮದಲ್ಲಿ ಸೇರಿದೆ.
ಬಂದರ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೂಲಿ ಕಾರ್ಮಿಕರಿದ್ದಾರೆ. ಅವರಿಗೆ ಮಸೀದಿ ಪ್ರವೇಶ ನಿರಾಕರಿಸುವಂತಿಲ್ಲ. ಆದರೆ ನಮಾಜ್ ಸಂಕ್ಷಿಪ್ತವಾಗಿರಲಿದೆ. ಬಳಿಕ ಗೇಟು ಹಾಕಲಾಗುತ್ತದೆ. ನೆಲದಲ್ಲೇ ನಮಾಜ್ ನಡೆಯಲಿದ್ದು, ಪ್ರತೀ ಬಾರಿ ಸ್ಯಾನಿಟೈಸೇಶನ್ ಮಾಡಲಾಗುವುದು.ಕೆ.ಅಶ್ರಫ್,ಉಪಾಧ್ಯಕ್ಷ, ಮಂಗಳೂರು ಕೇಂದ್ರ ಜುಮಾ ಮಸೀದಿ
ಉಳ್ಳಾಲ ದರ್ಗಾ ಅಧೀನದಲ್ಲಿ 32 ಮಸೀದಿಗಳಿವೆ. ಭಾನುವಾರದ ಪದಾಧಿಕಾರಿಗಳ ಸಭೆಯಲ್ಲಿ ಹೆಚ್ಚಿನ ಮಸೀದಿಗಳ ಪದಾಧಿಕಾರಿಗಳು ಭಾಗವಹಿಸಿದ್ದಾರೆ. ಜಿಲ್ಲೆ ಇನ್ನೂ ಕರೊನಾಮುಕ್ತ ಆಗದ ಕಾರಣ ಜೂನ್ ಅಂತ್ಯದವರೆಗೆ ಮಸೀದಿಗಳಲ್ಲಿ ಸಾಮೂಹಿಕ ನಮಾಜ್ ಬೇಡ ಎನ್ನುವ ತೀರ್ಮಾನಕ್ಕೆ ಬರಲಾಗಿದ್ದು, ಜೂ.30ರ ಬಳಿಕ ಪರಿಸ್ಥಿತಿ ಅವಲೋಕಿಸಿ ನಿರ್ಧಾರ ಕೈಗೊಳ್ಳಲಾಗುವುದು.ಅಬ್ದುಲ್ ರಶೀದ್, ಅಧ್ಯಕ್ಷ ಉಳ್ಳಾಲ ಕೇಂದ್ರ ಜುಮಾ ಮಸೀದಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five − 2 =
Remember me
