ಬೆಂಗಳೂರು: ಕರೊನಾ ಭೀತಿ ಸಂದರ್ಭದಲ್ಲಿ ರಾಜ್ಯದ ಸರ್ಕಾರಿ ವ್ಯವಸ್ಥೆಯನ್ನು ತೀವ್ರವಾಗಿ ಕಾಡಿದ್ದ ಸ್ಯಾನಿಟೈಸರ್ ಹಾಗೂ ಮಾಸ್ಕ್ ಅಭಾವವನ್ನು ಕಡಿಮೆಗೊಳಿಸುವಲ್ಲಿ ಕೈಗೊಂಡ ಎರಡು ತೀರ್ಮಾನ ಸರ್ಕಾರಕ್ಕೆ ಒಂದಷ್ಟು ನಿರಾಳತೆ ತಂದಿದೆ.
ರಾಜ್ಯದ ವಿವಿಧ ಜೈಲುಗಳಲ್ಲಿನ ಕೈದಿಗಳು ದಿನವೊಂದಕ್ಕೆ ಐದು ಸಾವಿರ ಮಾಸ್ಕ್ ತಯಾರಿಯಲ್ಲಿ ತೊಡಗಿದ್ದು, ಈ ಪ್ರಮಾಣ ಹೆಚ್ಚಿಸುವ ಪ್ರಯತ್ನ ನಡೆದಿದೆ. ಮೊದಲ ಹಂತದಲ್ಲಿ ಭದ್ರತಾ ಕೆಲಸದಲ್ಲಿ ತೊಡಗಿರುವ ಪೊಲೀಸ್ ಸಿಬ್ಬಂದಿಗೆ 50 ಸಾವಿರ ಮಾಸ್ಕ್ ನಿರೀಕ್ಷಿಸಲಾಗಿದ್ದು, ಹಂತಹಂತವಾಗಿ ಎಲ್ಲೆಡೆ ಪೂರೈಕೆ ಮಾಡಲಾಗುತ್ತಿದೆ. ಬೆಳಗಾವಿ ಹಿಂಡಲಗಾ ಜೈಲೊಂದರಲ್ಲೇ 20 ಸಾವಿರದಷ್ಟು ಮಾಸ್ಕ್ ತಯಾರಿಸಿ ಸರಬರಾಜು ಮಾಡಲಾಗಿದೆ.
ವಿಶೇಷವೆಂದರೆ ಈ ಮಾಸ್ಕ್​ಗಳು ಕೇವಲ 6 ರೂ.ಗೆ ತಯಾರಾಗುತ್ತಿವೆ. ಸಾರ್ವಜನಿಕ ಸಂಘ-ಸಂಸ್ಥೆಗಳೂ ಪೊಲೀಸರಿಗೆ ಮಾಸ್ಕ್ ನೀಡುತ್ತಿರುವುದರಿಂದ ಮುಂದೆ ಕೈದಿಗಳು ತಯಾರಿಸುವ ಮಾಸ್ಕ್​ಗಳನ್ನು ಇತರ ಸರ್ಕಾರಿ ವ್ಯವಸ್ಥೆಯಲ್ಲಿ ತೊಡಗಿರುವವರಿಗೆ ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಇನ್ನು ಸ್ಯಾನಿಟೈಸರ್ ಪೂರೈಕೆಯಲ್ಲಿ ರಾಜ್ಯದಲ್ಲಿರುವ ಡಿಸ್ಟ್ರಿಲರಿ ಗಳು ನೆರವಾಗಿವೆ. ಸಂಯುಕ್ತ ಡಿಸ್ಟ್ರಿಲರಿಗಳು-7, ಭಾರತೀಯ ಮದ್ಯ ತಯಾರಿಸುವ- 24, ಬ್ರಿವರೀಸ್-8, ಫೋರ್ಟಿಫೈಡ್ ವೈನರಿ- 13, ಫ್ರೂಟ್ ವೈನರಿ-17 ಸೇರಿ ಎಲ್ಲ್ಲ ಬಗೆಯ 69 ಡಿಸ್ಟ್ರಿಲರಿಗಳು ರಾಜ್ಯದಲ್ಲಿವೆ.
ಇವುಗಳಲ್ಲಿ ಕಾಕಂಬಿಯಿಂದ ಸ್ಪಿರಿಟ್ ತಯಾರಿಸುವಂಥ ವ್ಯವಸ್ಥೆ ಇರುವಲ್ಲಿಯೂ ಸ್ಯಾನಿಟೈಸರ್ ಉತ್ಪಾದಿಸಲು ಆರೋಗ್ಯ ಇಲಾಖೆಯಿಂದ ಅನುಮತಿ ಕೊಡಲು ಸರ್ಕಾರ ನಿರ್ಧರಿಸಿತು. ಪರಿಣಾಮ ಈಗ ಜಿಲ್ಲೆಗಳಿಗೆ ಆದ್ಯತೆ ಮೇಲೆ 300-500 ಲೀಟರ್ ಸ್ಯಾನಿಟೈಸರ್ ಕಳಿಸಿಕೊಡಲಾಗುತ್ತಿದೆ. ಇನ್ನು 2-3 ದಿನಗಳಲ್ಲಿ ಬಹುತೇಕ ಜಿಲ್ಲಾ ಕೇಂದ್ರಗಳ ಜಿಲ್ಲಾಸ್ಪತ್ರೆ ಹಾಗೂ ಕರೊನಾಗೆಂದೇ ಗುರುತಿಸಲಾದ ಆಸ್ಪತ್ರೆಗಳಲ್ಲಿ ಸ್ಯಾನಿಟೈಸರ್ ಕೊರತೆ ಇರದು ಎಂಬುದು ಅಬಕಾರಿ ಇಲಾಖೆಯ ವಿವರಣೆ.
ಏಪ್ರಿಲ್​ ಆರಂಭದಿಂದಲೇ ಕರೊನಾದಿಂದ ಭಾರತೀಯರಿಗೆ ಮುಕ್ತಿ: ಭರವಸೆ ತಂದ ಹೊಸ ಸಂಶೋಧನಾ ವರದಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + 2 =
Remember me
