ಶಿವಮೊಗ್ಗ:ಎಂತೆಂಥ ಖತರ್ನಾಕ್​ ಕಳ್ಳರು ಇರ್ತಾರೆ ಗೊತ್ತಾ? ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸದ ಓಡಾಡುತ್ತಿದ್ದವನಿಗೆ ದಂಡ ಹಾಕಿದ್ದಕ್ಕೆ ಪೊಲೀಸರ ಮೇಲೆ ಸಿಟ್ಟಿಗೆದ್ದ ದುಷ್ಕರ್ಮಿಯೊಬ್ಬ ಠಾಣೆ ಬಳಿಯಿದ್ದ ಪೇದೆಯ ಬೈಕ್​ ಅನ್ನೇ ಕದ್ದಿದ್ದಾನೆ!
ಇಂತಹ ವಿಚಿತ್ರ ಘಟನೆ ಹೊಸನಗರ ಪೊಲೀಸ್ ಠಾಣೆ ಆವರಣದಲ್ಲಿ ಶುಕ್ರವಾರ ಸಂಭವಿಸಿದೆ.ಇದನ್ನೂ ಓದಿರಿಮೈಸೂರಲ್ಲಿ ನಕಲಿ ಡಾಕ್ಟರೇಟ್ ದಂಧೆ, ಶಾಸಕನ ಗೌರವ ಡಾಕ್ಟರೇಟ್ ತಡೆದ ಡಿಸಿಪಿ!
ಕರೋನಾ ಹಿನ್ನೆಲೆ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸಿ ಓಡಾಡಬೇಕು ಎಂಬ ನಿಯಮವಿದೆ. ಆದರೂ ಚೇತನ್ ಎಂಬಾತ ಮಾಸ್ಕ್​ ಧರಿಸಿರಲಿಲ್ಲ. ಪೊಲೀಸರು ಈತನಿಗೆ ದಂಡ ವಿಧಿಸಿದ್ದರು. ಇದರಿಂದ ರೊಚ್ಚಿಗೆದ್ದ ಚೇತನ್​, ಪೊಲೀಸ್ ಠಾಣೆ ಪಕ್ಕದಲ್ಲಿ ನಿಲ್ಲಿಸಿದ್ದ ಪೇದೆ ರಾಘವೇಂದ್ರ ಅವರ ಬೈಕ್​ ಕದ್ದು ಪರಾರಿಯಾಗಿದ್ದ.
ಕದ್ದ ಬೈಕ್​ನಲ್ಲಿ ಚೇತನ್ ಕುಂದಾಪುರಕ್ಕೆ ತೆರಳಿದ್ದ. ಪ್ರಕಣರದ ಜಾಡು ಹಿಡಿದು ಹೊರಟ ಪೊಲೀಸರು ಘಟನೆ ನಡೆದ ಒಂದೇ ದಿನದಲ್ಲಿ ಅಂದರೆ ಶನಿವಾರ ಬೆಳಗ್ಗೆ ಆರೋಪಿಯನ್ನು ಬೈಕ್​ ಸಮೇತ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾದರು.
ಅಪಘಾತದಲ್ಲಿ ಪಾರಾದರೂ ಬೆನ್ನಟ್ಟಿದ ಜವರಾಯ ಸಾಲಾಗಿ ತಾಯಿ-ಮಗ-ಮೊಮ್ಮಗನ ಪ್ರಾಣ ಹೊತ್ತೊಯ್ದ!

ಸಾಯುತ್ತಿದ್ದ ನಾಯಿಗೆ ನೀರು ಕುಡಿಸಲು ಬಂದವ ಸ್ಥಳದಲ್ಲೇ ಶವವಾದ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + seventeen =
Remember me
