ಬೆಂಗಳೂರು:ಕಾರಿನಲ್ಲಿ ಮಾಸ್ಕ್ ರಹಿತ ಪ್ರಯಾಣ ಮಾಡಿದ್ದಕ್ಕೆ ಬಿಜೆಪಿ ಶಾಸಕ ಎಂ.ಪಿ. ಕುಮಾರಸ್ವಾಮಿಗೆ ಪೊಲೀಸರು ದಂಡ ವಿಧಿಸಿದ್ದಾರೆ.
ಮಾಸ್ಕ್ ಹಾಕಿಲ್ಲವೆಂದು ಶಾಸಕರಿಗೆ ಶೇಷಾದ್ರಿಪುರಂ ಸಂಚಾರಿ ಪೊಲೀಸರು ಮೂಡಿಗೆರೆ ಶಾಸಕರಿಂದ 250 ರೂಪಾಯಿ ದಂಡ ವಸೂಲಿ ಮಾಡಿದ್ದು, ಈ ಬಗ್ಗೆ ಆಕ್ರೋಶ ಹೊರಹಾಕಿರುವ ಎಂ.ಪಿ.ಕುಮಾರಸ್ವಾಮಿ, ಪೊಲೀಸರ ವಿರುದ್ಧ ಗೃಹ ಸಚಿವ ಬಸವರಾಜ ಬೊಮ್ಮಾಯಿಗೆ ದೂರು ನೀಡಿದ್ದಾರೆ.ಇದನ್ನೂ ಓದಿರಿರಾಜ್ಯದ ಒಂದೇ ಕಾಲೇಜಿನ 21 ವಿದ್ಯಾರ್ಥಿನಿಯರಿಗೆ ಕರೊನಾ ಪಾಸಿಟಿವ್​
‘ಇಂದು(ಡಿ.24) ನಾನು ಬಾಡಿಗೆ ಕಾರಿನಲ್ಲಿ ಬೆಂಗಳೂರಿನ ಶೇಷಾದ್ರಿಪುರಂ ಕಡೆಯಿಂದ ಶಾಸಕ ಭವನಕ್ಕೆ ತೆರಳುತ್ತಿದ್ದೆ. ಆಗ ಶೇಷಾದ್ರಿಪುರಂ ಪೊಲೀಸ್​ ಠಾಣೆ ಮುಂಭಾಗ ಸಂಚಾರಿ ವ್ಯತ್ಯಯದಿಂದ ಕಾರು ನಿಲುಗಡೆಯಾಗಿತ್ತು. ಆ ವೇಳೆ ಕಾರಿನ ಟಿಂಟ್​ ಗ್ಲಾಸ್​ ಇಳಿಸುವಂತೆ ಬಲವಂತವಾಗಿ ಒತ್ತಡ ಹೇರಿ ಕಾರಿನೊಳಗೆ ಇದ್ದ ನನಗೆ ಮಾಸ್ಕ್​ ಹಾಕಿದ್ದರೂ 250 ರೂಪಾಯಿ ದಂಡ ವಿಧಿಸಿದ್ದಾರೆ. ಪೊಲೀಸರ ಈ ವರ್ತನೆಯಿಂದ ಮುಜುಗರಕ್ಕೊಳಗಾದ ನಾನು ಜವಾಬ್ದಾರಿಯುತ ವ್ಯಕ್ತಿಯಾಗಿ ಅವರಿಗೆ ಮರು ಮಾತನಾಡದೆ ದಂಡ ಕಟ್ಟಿದೆ. ವಿನಾ ಕಾರಣ ನನ್ನ ಮೇಲೆ ದಂಡ ವಿಧಿಸಿರುವ ಪೊಲೀಸರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ದೂರಿನಲ್ಲಿ ಶಾಸಕರು ವಿವರಿಸಿದ್ದಾರೆ.
ಈ ವಿವರವುಳ್ಳ ದೂರಿನ ಪತ್ರವನ್ನು ಗೃಹ ಸಚಿವರಿಗೆ ಕಳಿಸಿರುವ ಶಾಸಕರು, ಮಾಸ್ಕ್​ ಧರಿಸದ್ದರೂ ಪೊಲೀಸರು ದಂಡ ವಸೂಲಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಸಿರುಗುಪ್ಪ ತಹಸೀಲ್ದಾರ್​ ಪತ್ನಿ ಸಾವಿನ ರಹಸ್ಯ ಬಿಚ್ಚಿಟ್ಟ ಶಾಸಕ!

ರಾಜ್ಯ ಸಚಿವ ಸಂಪುಟದಲ್ಲಿ ಸಂಕ್ರಾಂತಿಗೆ ಮಹತ್ತರ ಬದಲಾವಣೆ, ಇಬ್ಬರು ಸಚಿವರಿಗೆ ಕೊಕ್​!

ಸಮವಸ್ತ್ರದಲ್ಲೇ ಹೊಟ್ಟೆಗೆ ಎಣ್ಣೆ ಇಳಿಸಿದ ಪೊಲೀಸ್​ ಸಿಬ್ಬಂದಿ! ಪ್ರಶ್ನಿಸಿದ್ದಕ್ಕೆ ಖಾಕಿ ದೌರ್ಜನ್ಯ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − fourteen =
Remember me
