ರಾಯಚೂರು:ಮಸ್ಕಿ ಉಪಚುನಾವಣೆಯ ಪ್ರಚಾರಕ್ಕೆ ಆಗಮಿಸಿದ ಬಿಜೆಪಿ ನಾಯಕರಿಗೆ ಗ್ರಾಮಸ್ಥರು ಘೇರಾವ್ ಹಾಕಿದ ಪ್ರಸಂಗ ರಾಯಚೂರಿನ ಅಮಿನಗಡ ಹಾಗೂ ವಟಗಲ್​ನಲ್ಲಿ ನಡೆಯಿತು.
ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಹಾಗೂ ಸಚಿವ ಶ್ರೀರಾಮುಲು ಅವರನ್ನು ಗ್ರಾಮಸ್ಥರು ಸಿಕ್ಕಾಪಟ್ಟೆ ತರಾಟೆಗೆ ತೆಗೆದುಕೊಂಡರು. 5A ಕಾಲುವೆ ಮಾಡಲು ಆಗಲ್ಲ ಎಂದಿದ್ದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
0ಪಾಮನಕಲ್ಲೂರಿನಲ್ಲಿ ರೈತರು 134 ದಿನಗಳಿಂದ ಕಾಲುವೆಗಾಗಿ ಧರಣಿ ನಡೆಸುತ್ತಿದ್ದಾರೆ. ಒಂದು ದಿನವು ಭೇಟಿ ನೀಡಿದ ರಾಜಕೀಯ ನಾಯಕರು, ಉಪಚುನಾವಣೆ ಹಿನ್ನೆಲೆಯಲ್ಲಿ ಪ್ರತಾಪಗೌಡರ ಪರವಾಗಿ ಮತ ಯಾಚನೆಗೆ ಬಂದಾಗ ಮುತ್ತಿಗೆ ಹಾಕಿದರು.
ಇದನ್ನೂ ಓದಿರಿ:ಕಬ್ಜ ಶೂಟಿಂಗ್​ ವೇಳೆ ನಟ ಉಪೇಂದ್ರ ತಲೆಗೆ ಬಡಿಯಿತು ಸಹ ನಟ ಬೀಸಿದ ರಾಡ್..!
ನಮಗೆ ಯಾರು ನೀರಾವರಿ ಸೌಲಭ್ಯ ಕಲ್ಪಿಸುತ್ತಾರೆ ಅವರಿಗೆ ಮತ ಹಾಕುತ್ತೇವೆ. ನಾವಿಂದು ಉಪ್ಪು ನೀರು ಕುಡಿಯುತ್ತಿದ್ದೇವೆ. ನೀವು ಸಹ ಇದೇ ನೀರು ಕುಡಿದು ನೋಡಿ ನಮ್ಮ ಕಷ್ಟ ಗೊತ್ತಾಗುತ್ತದೆ ಎಂದು ಆಕ್ರೋಶ ಹೊರಹಾಕಿದರು.
ರೈತರ ಅಕ್ರೋಶಕ್ಕೆ ತಬ್ಬಿಬ್ಬಾದ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್, ಶ್ರೀರಾಮುಲು ಹಾಗೂ ಸಂಸದ ಸಂಗಣ್ಣ ಕರಡಿ ಮೌನವಾದರು. ಬಿಜೆಪಿ ಮುಖಂಡರು ಎಷ್ಟೇ ಮನವೊಲಿಕೆಗೆ ಮುಂದಾದ್ರೂ ರೈತರ ಆಕ್ರೋಶ ಕರಗಲೇ ಇಲ್ಲ.(ದಿಗ್ವಿಜಯ ನ್ಯೂಸ್​)
ಹೆಂಡತಿ ಸತ್ತ ಬಳಿಕ ವಿಕೃತ ಕಾಮಿಯಾಗಿದ್ದವನನ್ನು ಸಂಚು ಮಾಡಿ ಹತ್ಯೆಗೈದ ಐವರು ಅಂದರ್​!

Web Exclusive | ತಾಯಿ ಮಡಿಲು ಸೇರುವುದೇ ಮರಿ ಹುಲಿ?: ಅರಣ್ಯದಲ್ಲಿ ಬೇರ್ಪಟ್ಟು, ಮೈಸೂರು ಮೃಗಾಲಯದಲ್ಲಿ ಆಶ್ರಯ

ನಿವೃತ್ತ ಯೋಧನಿಗೆ ಅದ್ದೂರಿ ಸ್ವಾಗತ: ಬೆಳ್ಳಿ ರಥದಲ್ಲಿ ಮಾಜಿ ಸೈನಿಕ ಶಿವಕುಮಾರ್ ಮೆರವಣಿಗೆ; ಸ್ನೇಹಿತರಿಂದ ಬೈಕ್ ರ‍್ಯಾಲಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − ten =
Remember me
