ಬೆಂಗಳೂರು: ಜನದಟ್ಟಣೆ ಹೆಚ್ಚಿರುವ ಪ್ರದೆಶಗಳಲ್ಲಿ ಶಾಲಾ- ಕಾಲೇಜುಗಳು ಸೇರುತ್ತವೆ. ಕೋವಿಡ್ ಹೊಸ ರೂಪಾಂತರಿ ಪ್ರಕರಣಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ಮಕ್ಕಳ ಶಿಕ್ಷಣ ಶಿಕ್ಷ ಹಾಗೂ ಆರೋಗ್ಯ ಹಿತದೃಷ್ಟಿಯಿಂದ ಇಲಾಖೆ ಸೂಕ್ತ ಕ್ರಮಕೈಗೊಳ್ಳಲಿದೆ.ಆದರೆ ಮಾಸ್ಕ್ ಕಡ್ಡಾಯದ ಬಗ್ಗೆ‌ ಯಾವುದೇ ನಿರ್ಧಾರವಾಗಿಲ್ಲ ಎಂದು ಶಾಲಾ ಶಿಕ್ಷ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದರು.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರಿಗೆ ಗುರುವಾರ ಪ್ರತಿಕ್ರಿಯಿಸಿದ ಅವರು, ಕೋವಿಡ್ ಹೊಸ ಉಪತಳಿ ಪ್ರಕರಣಗಳು ಬೇರೆ ರಾಜ್ಯದಲ್ಲಿ ವರದಿಯಾಗಿವೆ. ಪೂರಕವಾಗಿ ರಾಜ್ಯ ಸರ್ಕಾರ ಕ್ರಮವಹಿಸಿದೆ. ಇಲಾಖೆ ಏನೇನು ಕ್ರಮ ಅನುಸರಿಸಬೇಕು ಎಂಬ ಬಗ್ಗೆ  ಮಧ್ಯಾಹ್ನ  ಒಂದುವರೆ ಗಂಟೆಗೆ  ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿ, ಸದ್ಯದ  ವಾಸ್ತವಾಂಸದ ಬಗ್ಗೆ ಮಾಹಿತಿ ತಿಳಿದುಕೊಳ್ಳಲಾಗುವುದು ಎಂಷರು.
ಮಕ್ಕಳು, ಶಿಕ್ಷಕರ ಟ್ರಾವಲ್ ಹಿಸ್ಟರಿ ಇದ್ದರೆ ಹುಷಾರಾಗಿ ನೋಡಿಕೊಳ್ಳಲು ಸೂಚನೆ ನೀಡಲಾಗಿದೆ. ಇಲಾಖೆಯಿಂದ ಬೇರೆ ಸುತ್ತೋಲೆ ಹೊರಡಿಸಬೇಕಾ? ಅಥವಾ ಆರೋಗ್ಯ ಇಲಾಖೆ ಸುತ್ತೋಲೆಯನ್ನು ಪಾಲಿಸಬೇಕಾ? ಎಂದು ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಬಂಗಾರಪ್ಪ ಹೇಳಿದರು.
ಶಾಲೆಗಳಲ್ಲಿ ಜನಸಂಖ್ಯೆ ಒಂದೇ ಕಡೆ ಇರುವುದರಿಂದ ಸೂಕ್ಷ್ಮವಾಗಿ ನೋಡಬೇಕಾಗುತ್ತದೆ. ಹಿಂದಿನ ಅನುಭವದಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಮಕ್ಕಳ ಆರೋಗ್ಯ ವಿಚಾರದಲ್ಲಿ ನಾವು ಸೂಕ್ಷ್ಮವಾಗಿ ಹೇಳಿಕೆ ಕೊಡಬೇಕು ಮಕ್ಕಳಿಗೆ ಮಾಸ್ಕ್ ಕಡ್ಡಾಯದ  ಬಗ್ಗೆ ಏನೂ ನಿರ್ಧಾರ ಮಾಡಿಲ್ಲ. ಮಾಸ್ಕ್ ನಾವು ಕೊಡೊದಾ ಅವರು ತೆಗೆದುಕೊಂಡು ಬರಬೇಕು ಎಂಬ ಬಗ್ಗೆ ಯೋಚಿಸಬೇಕಾಗುತ್ತದೆ. ಮಕ್ಕಳ ಹಾಗೂ ಪೋಷಕರ ಹಿತದೃಷ್ಟಿಯಿಂದ ಸೂಕ್ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಮಧು ಬಂಗಾರಪ್ಪ  ತಿಳಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 20 =
Remember me
