ವಿಟ್ಲ:ಕರೊನಾ ವೈರಸ್​ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತಿರುವ ಹಿನ್ನಲೆಯಲ್ಲಿ ಮಾಸ್ಕ್ ಈಗ ಪ್ರತಿಯೊಬ್ಬರ ಅಗತ್ಯವಾಗಿದೆ. ಆದರೆ ಕಳೆದ ಒಂದು ತಿಂಗಳಿಂದಲೂ ಮಾಸ್ಕ್​, ಸ್ಯಾನಿಟೈಸರ್​ಗಳು ಲಭ್ಯವಾಗುತ್ತಿಲ್ಲ.
ಮಾಲ್​​ಗಳು ಬಂದ್​ ಆಗಿವೆ. ಮೆಡಿಕಲ್​ ಶಾಪ್​​ಗಳಲ್ಲಿ ಮಾಸ್ಕ್​ ಸಂಗ್ರಹಣೆ ಇಲ್ಲ. ಆದರೆ ಲಾಕ್​ಡೌನ್ ಮಧ್ಯೆಯೂ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರು, ಪೊಲೀಸರಿಗೆ ಮಾಸ್ಕ್​​ ಬೇಕೇಬೇಕು. ಆದರೆ ಒಂದು ಮಾಸ್ಕ್​ ಅವಧಿ ನಾಲ್ಕು ತಾಸು. ಆಮೇಲೆ ಅದನ್ನು ಡಿಸ್​​ಪೋಸ್​ ಮಾಡಲೇಬೇಕು.
ಹೀಗಿರುವಾಗ ಪತ್ರಕರ್ತ ನಿಶಾಂತ್ ಬಿಲ್ಲಂಪದವು ಅವರು ಬಟ್ಟೆಯಲ್ಲಿಯೇ 180ಕ್ಕೂ ಅಧಿಕ ಮಾಸ್ಕ್​ ತಯಾರಿಸಿ ವಿತರಿಸಿದ್ದಾರೆ.ನಿಶಾಂತ್​ಗೆ ಸ್ವತಃ ಮಾಸ್ಕ್ ಬೇಕಾಗಿತ್ತು. ಜಿಲ್ಲಾ ಆರೋಗ್ಯಾಧಿಕಾರಿಗಳ ಬಳಿ ಹೋಗಿ ಕೇಳಿದಾಗ ಮಾಸ್ಕ್​ ಕೊರತೆ ಇದೆ ಎಂದು ಹೇಳಿದರು. ಸ್ಥಳೀಯ ವೈದ್ಯರನ್ನು ವಿಚಾರಿಸಿದಾಗ, ಇಂತಹ ಮಾಸ್ಕ್​​ಗಳು ನಾಲ್ಕು ಗಂಟೆ ಬಳಸಿದ ಬಳಿಕ ವೇಸ್ಟ್​ ಆಗುತ್ತವೆ ಎಂದು ಹೇಳಿದರು. ಹಾಗೇ ಬಟ್ಟೆಯಿಂದ ಮಾಸ್ಕ್​ ತಯಾರಿಸಿಕೊಂಡರೆ, ಅದನ್ನು ತೊಳೆದು ಇಸ್ತ್ರಿ ಹಾಕಿ ಮತ್ತೆ ಬಳಸಬಹುದು ಎಂಬ ಸಲಹೆಯನ್ನೂ ನೀಡಿದರು.
ಮತ್ತೆ ಮಾಸ್ಕ್​ಗಾಗಿ ತಿರುಗಾಡುವುದು ವ್ಯರ್ಥ ಎಂದರಿತ ನಿಶಾಂತ್​ ಬಿಲ್ಲಂಪದವು, ಮನೆಯಲ್ಲಿ ತಾಯಿ ಗೀತಾಲಕ್ಷ್ಮೀ ಬಿಲ್ಲಂಪದವು (ಪ್ರಗತಿಪರ ನಾರಾಯಣ್​ ಭಟ್​ ಬಿಲ್ಲಂಪದವು ಅವರ ಪತ್ನಿ) ಅವರ ಸಹಾಯದಿಂದ ಬಟ್ಟೆಯಲ್ಲಿ 180ಕ್ಕೂ ಹೆಚ್ಚು ಮಾಸ್ಕ್​ಗಳನ್ನು ತಯಾರಿಸಿದ್ದಾರೆ. ಅವರ ತಾಯಿಯೇ ಬಟ್ಟೆ ಹೊಲಿಗೆ ಮಾಡಿದ್ದಾರೆ.
ನಿಶಾಂತ್​ ಅವರು ತಾವೇ ತಯಾರಿಸಿದ ಮಾಸ್ಕ್​ಗಳಲ್ಲಿ ವಿಜಯವಾಣಿ ಕಚೇರಿಯಲ್ಲಿರುವವರಿಗೆ 60, ಉಳಿದ ಕೆಲವು ಪತ್ರಕರ್ತರಿಗೆ 10, ವಿಟ್ಲ ಪೊಲೀಸರಿಗೆ 70 ಹಾಗೂ ಕೆಲವು ಸ್ನೇಹಿತರಿಗೆ 40 ಮಾಸ್ಕ್​ಗಳನ್ನು ಹಂಚಿದ್ದಾರೆ.
ಬಿಲ್ಲಂಪದವು ಉಳ್ಳಾಲ್ತಿ ಪಂಚಲಿಂಗೇಶ್ವರ ಸನ್ನಿಧಿ ಮತ್ತು ಕಪಿಲಾ ಗೋಸಂರಕ್ಷಣಾ ಕೇಂದ್ರದಿಂದ ಈ ಕೊಡುಗೆ ನೀಡಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + 4 =
Remember me
