ಬೆಂಗಳೂರು:ಯಶವಂತಪುರ ಕ್ಷೇತ್ರದಲ್ಲಿ ರಸ್ತೆಗಳ ಅಭಿವೃದ್ಧಿ, ಒಳಚರಂಡಿ ಸೇರಿ ಕೋವಿಡ್ ಸಮಯದಲ್ಲಿ ಜನತೆಯ ನೋವಿಗೆ ಸ್ಪಂದಿಸಿದ್ದೇನೆ. ಆದರೆ ಪ್ರತಿಪಕ್ಷದ ಅಭ್ಯರ್ಥಿ 205 ಕೋಟಿ ರೂ. ಆಸ್ತಿ ಘೋಷಿಸಿಕೊಂಡಿ ದ್ದಾರೆ. ಆದರೆ ಒಬ್ಬರಿಗೂ ಮಾಸ್ಕ್ ಕೂಡ ಕೊಡಲಿಲ್ಲ ಎಂದು ಬಿಜೆಪಿ ಅಭ್ಯರ್ಥಿ ಎಸ್.ಟಿ. ಸೋಮಶೇಖರ್ ವಾಗ್ದಾಳಿ ನಡೆಸಿದ್ದಾರೆ.ಕ್ಷೇತ್ರದಲ್ಲಿ ಮನೆಮನೆ ಪ್ರಚಾರ ನಡೆಸಿದ ಸಂದರ್ಭ ಮಾತನಾಡಿ, ಜನರಿಗೆ ಸಹಾಯ ಮಾಡಲು ಅಧಿಕಾರ ಬೇಕಿಲ್ಲ, ಮನುಷ್ಯತ್ವ ಇರುವವರು ಕಷ್ಟಕ್ಕೆ ಸ್ಪಂದಿಸುತ್ತಾರೆ. ಆ ಕೆಲಸವನ್ನು ನಾನು ಮಾಡಿದ್ದೇನೆ ಎಂದರು.ನಾನು ವರ್ಷದ 365 ದಿನವೂ ಕ್ಷೇತ್ರದಲ್ಲಿ ಇರುತ್ತೇನೆ. ಒಂದಿಲ್ಲೊಂದು ಕಾರ್ಯಕ್ರಮ ಮಾಡುತ್ತ ಜನರ ಜತೆ ಇದ್ದೇನೆ. ಅವರ ನೋವಿಗೆ ಸ್ಪಂದಿಸಿರುವುದರಿಂದ ಕ್ಷೇತ್ರದ ಜನತೆಯ ಸಹಾನುಭೂತಿ ನನ್ನ ಮೇಲಿದೆಯೇ ಹೊರತು ಐದು ವರ್ಷಕ್ಕೊಮ್ಮೆ ಬರುವವ ನಾನಲ್ಲ ಎಂದರು.
ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಶಾಶ್ವತ ಪರಿಹಾರ ಕಾಮಗಾರಿ ಕೈಗೊಳ್ಳಲಾಗುತ್ತಿದೆ. 110 ಹಳ್ಳಿಗಳ ವ್ಯಾಪ್ತಿಯ ಪ್ರದೇಶಗಳಲ್ಲಿ ಕಾವೇರಿ ಐದನೇ ಹಂತದ ಪೈಪ್‌ಲೈನ್ ಅಳವಡಿಸುವ ಕಾಮಗಾರಿ ಕೈಗೊಳ್ಳಲಾಗಿದೆ. ಸರ್ ಎಂ. ವಿಶ್ವೇಶ್ವರಯ್ಯ ಆರನೇ ಬ್ಲಾಕ್, ಲಿಂಗಧೀರೆನಹಳ್ಳಿ, ಬನಶಂಕರಿ 6ನೇ ಹಂತದಲ್ಲಿ 58 ಎಂಎಲ್‌ಡಿ ಸಾಮರ್ಥ್ಯದ ಜಲಗಾರಗಳನ್ನು ನಿರ್ಮಿಸಿ ನೀರು ಶೇಖರಣಾ ಪ್ರಕ್ರಿಯೆ ಪ್ರಗತಿಯಲ್ಲಿದೆ. ತಿಪ್ಪಗೊಂಡನ ಹಳ್ಳಿ ಜಲಾಶಯದಿಂದ ಶುದ್ದೀಕರಿಸಿದ 110 ಎಂಎಲ್‌ಡಿ ನೀರು ಕ್ಷೇತ್ರದ ಜನತೆಗೆ ಲಭ್ಯವಾಗುವಂತೆ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.
ಒಳಚರಂಡಿ ತ್ಯಾಜ್ಯ ನೀರು ಸಂಸ್ಕರಣೆಗಾಗಿ ಕೆಂಗೇರಿ, ಹೆಮ್ಮಿಗೆಪುರ, ದೊಡ್ಡಬಿದರಕಲ್ಲು ಸೇರಿ 5 ಎಸ್‌ಟಿಪಿಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಕೆಂಪೇಗೌಡ ಬಡಾವಣೆಗೆ ಭೂಮಿ ನೀಡಿದ 14 ಗ್ರಾಮಗಳಿಗೆ ಮೂಲಸೌಕರ್ಯ ಕಾಮಗಾರಿ ಪ್ರಾರಂಭ ಗೊಂಡಿದೆ ಎಂದರು. ಹೆಮ್ಮಿಗೆಪುರ ವಾರ್ಡ್‌ನ ಸುಣಕಲ್ಲು ಪಾಳ್ಯ, ರಘುವನಹಳ್ಳಿ, ವಾಜರಹಳ್ಳಿ, ಮಲ್ಲಸಂದ್ರ ಹೇರೋಹಳ್ಳಿ ವಾರ್ಡ್‌ ಬ್ಯಾಡರಹಳ್ಳಿ ಸೇರಿ ನಾನಾ ಕಡೆ ಮತಪ್ರಚಾರ ನಡೆಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three − one =
Remember me
