ಹುಬ್ಬಳ್ಳಿ:ಗುರುನಾಥಾರೂಢ ನಗರದ ಮಹಾರಾಣಿ ಕಾಲೇಜಿನಲ್ಲಿ ಕುವೆಂಪು ವಿವಿ ದೂರ ಶಿಕ್ಷಣ ಕೇಂದ್ರ ನಡೆಸುತ್ತಿದ್ದ ಪದವಿ, ಸ್ನಾತಕೋತ್ತರ ಪದವಿ ಪರೀಕ್ಷೆ ವೇಳೆ ಸಾಮೂಹಿಕ ನಕಲು ನಡೆದಿದ್ದು, ಈ ದೃಶ್ಯ ವೈರಲ್ ಆಗಿದೆ.
ಅಭ್ಯರ್ಥಿಗಳು ಕೈಯಲ್ಲಿ ಪುಸ್ತಕ ಹಿಡಿದು, ಪರಸ್ಪರ ರ್ಚಚಿಸಿ ಉತ್ತರ ಬರೆಯುತ್ತಿದ್ದ ದೃಶ್ಯ ಕಂಡುಬಂತು. 4 ದಿನಗಳಿಂದ ಪರೀಕ್ಷೆ ನಡೆಯುತ್ತಿದ್ದು, ನಿರಂತರವಾಗಿ ಸಾಮೂಹಿಕ ನಕಲು ನಡೆಯುತ್ತಿದೆ. ಪರೀಕ್ಷಾ ಕೇಂದ್ರದ ಮುಖ್ಯಸ್ಥರು, ಅಧೀಕ್ಷಕರು ಶಾಮೀಲಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಬಾಬುರಾವ ಶೇಗುಣಸಿ ಎಂಬುವರು ಧಾರವಾಡ ಜಿಲ್ಲೆಯ ಪರೀಕ್ಷಾ ಕೇಂದ್ರದ ಪರವಾನಗಿ ಪಡೆದಿದ್ದು, ವಿಜಯಪುರ, ರಾಯಚೂರಿನಲ್ಲೂ ಶಾಖೆ ಹೊಂದಿದ್ದಾರೆ ಎನ್ನಲಾಗಿದೆ. ಪರೀಕ್ಷಾ ಕೇಂದ್ರದಲ್ಲಿ ಕುವೆಂಪು ವಿವಿಯ ಒಬ್ಬ ಅಧಿಕಾರಿಯೂ ಇರಲಿಲ್ಲ.
8 ಸಾವಿರ ರೂ. ಕೊಟ್ಟರೆ ಬೇರೆಯವರಿಂದ ಪರೀಕ್ಷೆ:ನಕಲು ಮಾಡಿ ಪರೀಕ್ಷೆ ಬರೆಯಲು ಅಭ್ಯರ್ಥಿ 3 ಸಾವಿರ ರೂ. ಕೊಡಬೇಕು. 8 ಸಾವಿರ ರೂ. ಕೊಟ್ಟರೆ ಬೇರೆ ಅಭ್ಯರ್ಥಿಯಿಂದ ಪರೀಕ್ಷೆ ಬರೆಸುತ್ತಾರೆ! ಕೆಲವರು ಲಂಚ ಕೊಟ್ಟು ಬೇರೆಯವರಿಂದ ಪರೀಕ್ಷೆ ಬರೆಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಸಾಮೂಹಿಕ ನಕಲು ಆರೋಪ ಕುರಿತು ಸಮಗ್ರ ವರದಿ ನೀಡುವಂತೆ ವಿವಿ ಮೌಲ್ಯಮಾಪನ ಕುಲಸಚಿವ ವೆಂಕಟೇಶ್ವರಲು ಅವರಿಗೆ ಸೂಚಿಸಿದ್ದೇನೆ. ನಕಲು ಮಾಡಿದ್ದು ಸಾಬೀತಾದರೆ ಕೇಂದ್ರದ ಲೈಸನ್ಸ್ ರದ್ದು ಪಡಿಸಲಾಗುವುದು.
| ಡಾ.ಬಿ.ಪಿ. ವೀರಭದ್ರಪ್ಪ ಕುಲಪತಿ, ಕುವೆಂಪು ವಿಶ್ವವಿದ್ಯಾಲಯ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 4 =
Remember me
