ಬೆಂಗಳೂರು:ವಿಧಾನ ಪರಿಷತ್​ ಚುನಾವಣೆಯ ಜೆಡಿಎಸ್​ ಅಭ್ಯರ್ಥಿಯಾಗಿ ಕೋಲಾರ ಮೂಲದ ಇಂಚರ ಗೋವಿಂದರಾಜು ಸ್ಪರ್ಧಿಸಿದ್ದು, ಪಕ್ಷದ ಸಾಮಾನ್ಯ ಕಾರ್ಯಕರ್ತರಾದ ಇವರಿಗೆ ಟಿಕೆಟ್​ ನೀಡಿದ್ದರ ಹಿಂದೆ ಎಚ್​ಡಿಕೆ ಮಾಸ್ಟರ್​ ಪ್ಲ್ಯಾನ್ ಅಡಗಿದೆ.
ಇಂದು ಬೆಳಗ್ಗೆ (ಗುರುವಾರ) ನಾಮಪತ್ರ ಸಲ್ಲಿಸಿದ ಗೋವಿಂದರಾಜುಗೆ ಖುದ್ದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಾಥ್​ ನೀಡಿದರು. ಅಂದಹಾಗೇ ಯಾವ ಲೆಕ್ಕಾಚಾರದಲ್ಲಿ ಗೋವಿಂದರಾಜುಗೆ ಟಿಕೆಟ್ ನೀಡಲಾಗಿದೆ ಎಂಬುದರ ಬಗ್ಗೆ ಸ್ವತಃ ಕುಮಾರಸ್ವಾಮಿಯೇ ಮಾತನಾಡಿದ್ದಾರೆ ನೋಡಿ.ಇದನ್ನೂ ಓದಿರಿವಿಶ್ವನಾಥ್​ಗೆ ಟಿಕೆಟ್ ಕೈತಪ್ಪಿರುವ ಹಿಂದೆ ದೊಡ್ಡ ಷಡ್ಯಂತ್ರವೇ ಅಡಗಿದೆ…
ಕೋಲಾರ ಭಾಗದಲ್ಲಿ ಪಕ್ಷದ ಹಿತದೃಷ್ಟಿಯಿಂದ ಗೋವಿಂದರಾಜುಗೆ ಟಿಕೆಟ್ ನೀಡಲಾಗಿದೆ. ಪರಿಣಾಮ ಚಿಕ್ಕಬಳ್ಳಾಪುರ-ಕೋಲಾರದಲ್ಲಿ ಪಕ್ಷ ಸಂಘಟನೆಗೆ ಮತ್ತಷ್ಟು ಶಕ್ತಿ ಸಿಗಲಿದೆ ಎಂದು ಎಚ್​ಡಿಕೆ ಹೇಳಿದ್ದಾರೆ.
ಕುಮಾರಣ್ಣನ ಜೊತೆ ನನ್ನ ಸಂಬಂಧ ಚೆನ್ನಾಗಿತ್ತು. ಅವರ ಕೆಲಸಗಳನ್ನೆಲ್ಲ ಅಚ್ಚುಕಟ್ಟಾಗಿ ಮಾಡಿಕೊಂಡು ಬಂದಿದ್ದೇನೆ. ಅವರ ಅಪೇಕ್ಷೆ ಮೇರೆಗೆ ಕೋಲಾರ ಭಾಗದಲ್ಲಿ ಪಕ್ಷ ಕಟ್ಟಲು ಅನುಕೂಲವಾಗಲಿದೆ ಎಂದು ನನಗೆ ಟಿಕೆಟ್ ಸಿಕ್ಕಿದೆ. ನಾನೊಬ್ಬ ಸಾಮಾನ್ಯ ಪ್ರಜೆ. ನನಗೆ ಯಾವ ಬ್ಯಾಕ್​ಗ್ರೌಂಡೂ ಇಲ್ಲ.. ಇನ್​ಪ್ಲ್ಯೂಯೆನ್ಸ್ ಇಲ್ಲ. ಸಾಮಾಜಿಕ ಕಾರ್ಯಗಳಲ್ಲಿ ಇಲ್ಲಿಯವರೆಗೆ ಗುರುತಿಸಿಕೊಂಡಿದ್ದೆ. ಅದಕ್ಕಾಗಿ ನನ್ನ ಆದಾಯದ ಒಂದಷ್ಟು ಭಾಗ ತೆಗೆದಿಟ್ಟಿದ್ದೆ. ಈಗ ಪಕ್ಷ ಸಂಘಟನೆಗಾಗಿ ಟಿಕೆಟ್ ಕೊಟ್ಟಿದ್ದಾರೆ. ಆ ಕೆಲಸ ನಿಭಾಯಿಸುವೆ ಎಂದು ಜೆಡಿಎಸ್ ಅಭ್ಯರ್ಥಿ ಇಂಚರ ಗೋವಿಂದರಾಜು ಹೇಳಿದರು.
ಚುನಾವಣಾಧಿಕಾರಿ ವಿಶಾಲಾಕ್ಷಿ ಅವರಿಗೆ ಗೋವಿಂದರಾಜು ನಾಮಪತ್ರ ಸಲ್ಲಿಸಿದರು. ಈ ವೇಳೆ ಎಚ್​ಡಿಕೆ, ಮಾಜಿ ಸಭಾಪತಿ ಬಸವರಾಜ ಹೊರಟ್ಟಿ, ಮಾಜಿ ಉಪ ಸಭಾಧ್ಯಾಕ್ಷ ಕೃಷ್ಣರೆಡ್ಡಿ, ಕೋಲಾರ ಶಾಸಕ ಶ್ರೀನಿವಾಸ ಗೌಡ ಉಪಸ್ಥಿತರಿದ್ದರು.
ಇದನ್ನೂ ಓದಿರಿಬಿಜೆಪಿ ಕಚೇರಿಯಲ್ಲಿ ಆರ್.ಶಂಕರ್​ ಗಳಗಳನೇ ಅತ್ತಿದ್ದೇಕೆ?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 1 =
Remember me
