ಬೆಂಗಳೂರು:ಬೀದರ್‌ನಲ್ಲಿ ಮೃಗಾಲಯ ಸ್ಥಾಪನೆಗೆ ಕ್ರಿಯಾ ಯೋಜನೆ, ಬನ್ನೇರುಘಟ್ಟ ಮತ್ತು ಮೈಸೂರು ಮೃಗಾಲಯ ಅಭಿವೃದ್ಧಿಗೆ ಮಾಸ್ಟರ್ ಪ್ಲ್ಯಾನ್ ರೂಪಿಸಬೇಕೆಂದು ಮೃಗಾಲಯ ಪ್ರಾಧಿಕಾರದ ಅಧಿಕಾರಿಗಳಿಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ನಿರ್ದೇಶಿಸಿದರು.
ಇಲಾಖೆ ಕಚೇರಿಯಲ್ಲಿ ಮೃಗಾಲಯದ ಪ್ರಾಧಿಕಾರದ ಆಡಳಿತ ಮಂಡಳಿ ಸಭೆ ಪ್ರತ್ಯೇಕವಾಗಿ ಶನಿವಾರ ನಡೆಸಿದ ಅವರು, ರಾಜ್ಯದ ಮೃಗಾಲಯಗಳಿಗೆ ಉತ್ತಮ ಹೆಸರಿದೆ. ಮೃಗಾಲಯದಲ್ಲಿರುವ ಪ್ರಾಣಿಗಳ ಸಂತಾನೋತ್ಪತ್ತಿ ಪ್ರಮಾಣ ಉತ್ತಮವಾಗಿದೆ. ಹೆಚ್ಚಿನ ಸಂಖ್ಯೆಯ ಮೃಗಗಳ ರಕ್ಷಣೆ, ಪ್ರಾಣಿ ಮತ್ತು ಸಸ್ಯ ಸಂಕುಲದ ಬಗ್ಗೆ ಹೆಚ್ಚು ಮಾಹಿತಿಪೂರ್ಣ, ಪ್ರೇಕ್ಷಕಸ್ನೇಹಿಯಾಗಿಸಲು ಸಮಗ್ರ ನೀತಿ ರೂಪಿಸುವ ಅಗತ್ಯವಿದೆ ಎಂದರು.
ಗದಗ, ಕಲಬುರಗಿ ಜಿಲ್ಲೆಯ ಮೃಗಾಲಯಗಳ ಉನ್ನತೀಕರಣಕ್ಕೆ ವರದಿ ಸಲ್ಲಿಸಬೇಕು. ಬೀದರ್‌ನಲ್ಲಿ ಕೃಷ್ಣಮೃಗಗಳ ಸಂರಕ್ಷಿತ ಪ್ರದೇಶ ನಿರ್ಮಿಸುವ ಬಗ್ಗೆ ಸಿಎಂ ಬಾರಿ ಬಜೆಟ್‌ನಲ್ಲಿ ೋಷಿಸಿದ್ದು, ಜತೆಗೆ ಮೃಗಾಲಯ ಸ್ಥಾಪಿಸಿದರೆ ವನ್ಯಮೃಗಗಳನ್ನು ನೋಡಲು ಇಂದಿನ ಪೀಳಿಗೆಗೆ ಅವಕಾಶವಾಗುತ್ತದೆ ಎಂದು ಖಂಡ್ರೆ ಹೇಳಿದರು.
ಇದೇ ಸಂದರ್ಭದಲ್ಲಿ ಮೈಸೂರಿನ ಶ್ರೀ ಚಾಮರಾಜೇಂದ್ರದ ಮೃಗಾಲಯದ 2022-23ನೇ ಸಾಇನ ವಾರ್ಷಿಕ ವರದಿಯನ್ನು ಬಿಡುಗಡೆ ಮಾಡಿದರು. ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ಹಿರಿಯ ಅಧಿಕಾರಿಗಳಾದ ಕಪಿಲ್ ಮೋಹನ್, ಮಂಜುನಾಥ್ ಪ್ರಸಾದ್, ರಾಜೀವ್ ರಂಜನ್, ಸುಭಾಷ್ ಮಾಲ್ಕೆಡೆ, ಸಂಜಯ್ಯ ಬಿಜ್ಜೂರ್, ಕುಮಾರ್ ಪುಷ್ಕರ್ ಇದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + 2 =
Remember me
