ಬೆಂಗಳೂರು:ಡ್ರಗ್ಸ್​ ವ್ಯವಹಾರ ಸಂಬಂಧ ಬಿಗ್​ಬಾಸ್ ಖ್ಯಾತಿಯ ಮಸ್ತಾನ್ ಮನೆ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ.
ಸಂಜಯ್ ನಗರದಲ್ಲಿರುವ ಮಸ್ತಾನ್ ಮನೆ ಮೇಲೆ ಗೋವಿಂದಪುರ ಪೊಲೀಸರು ಶುಕ್ರವಾರ ಬೆಳ್ಳಂಬೆಳಗ್ಗೆ ದಾಳಿ ಮಾಡಿದ್ದಾರೆ. ನೈಜೀರಿಯನ್ ಡ್ರಗ್​ ಫೆಡ್ಲರ್ಸ್ ಜತೆ ಮಸ್ತಾನ್​ ಸಂಪರ್ಕ ಹೊಂದಿರುವ ಆರೋಪ ಕೇಳಿಬಂದಿದೆ.
ಡ್ರಗ್ಸ್ ಪ್ರಕರಣದಲ್ಲಿ ನೈಜಿರಿಯನ್ ಡ್ರಗ್ಸ್ ಪೆಡ್ಲರ್ ಬಂಧನವಾಗಿತ್ತು. ಈ ವೇಳೆ ನೀಡಿದ ಮಾಹಿತಿ ಆಧಾರದ ಮೇಲೆ ಕೋರ್ಟ್​ನಿಂದ ಸರ್ಚ್ ವಾರೆಂಟ್ ಪಡೆದು ದಾಳಿ ಮಾಡಲಾಗಿದೆ. ಈ ವೇಳೆ ಮನೆಯಲ್ಲಿಯೇ ಇದ್ದ ಮಸ್ತಾನ್​ರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿರಿ:ದೂರು ಸ್ವೀಕರಿಸದ ಪೊಲೀಸರು; ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸಿದ ಕುಟುಂಬ..!
ಮಸ್ತಾನ್ ಸ್ನೇಹಿತ ಕೇಶವ್ ಮನೆ ಮೇಲೂ ಸಹ ಗೋವಿಂದಪುರ ಠಾಣಾ ಪೊಲೀಸರು ದಾಳಿ ಮಾಡಿದ್ದಾರೆ. ಸದ್ಯ ಮನೆಯನ್ನು ಪರಿಶೀಲಿಸುತ್ತಿರುವ ಪೊಲೀಸರು ಸಾಕ್ಷ್ಯಾಧಾರ ಹುಡುಕಾಟದಲ್ಲಿ ತೊಡಗಿದ್ದಾರೆ.
ಅಂದಹಾಗೆ ಮಸ್ತಾನ ಬಿಗ್​ಬಾಸ್​ 4ನೇ ಆವೃತ್ತಿಯಲ್ಲಿ ವೈಲ್ಡ್​ ಕಾರ್ಡ್​ ಮೂಲಕ ಎಂಟ್ರಿ ಪಡೆದುಕೊಂಡಿದ್ದರು. ಕೇವಲ ಒಂದೇ ವಾರಕ್ಕೆ ಮನೆಯಿಂದ ಹೊರಬಂದರು.(ಏಜೆನ್ಸೀಸ್​)
ಬಾಯ್​ಫ್ರೆಂಡ್​ ಭೇಟಿಗಾಗಿ ಈಕೆ ಸೃಷ್ಟಿಸಿದ್ದು ಅಂತಿಂಥ ಕತೆಯಲ್ಲ: ಈಕೆಯ ಡ್ರಾಮಾ ನೋಡಿ ಪೊಲೀಸರೇ ಕಂಗಾಲು!

ಡಿಕೆಡಿ ಸ್ಪರ್ಧಿಗಳ ಜತೆ ಪವರ್​ಸ್ಟಾರ್; ಶನಿವಾರ ಮತ್ತು ಭಾನುವಾರ ರಾತ್ರಿ 7.30ಕ್ಕೆ ಜೀ ಕನ್ನಡದಲ್ಲಿ..

ಜಿಎಸ್​ಟಿ ವ್ಯಾಪ್ತಿಗೆ ಬಂದರೆ ಪೆಟ್ರೋಲ್, ಡೀಸೆಲ್  30 ರೂಪಾಯಿ ಇಳಿಕೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − six =
Remember me
