ವಿಜಯಪುರ:ಮಹಾರಾಷ್ಟ್ರದ ಮುಂಬೈಯಿಂದ ಇಲ್ಲಿಗೆ ಬಂದು ಕ್ವಾರಂಟೈನ್‌ಗೆ ಒಳಗಾಗಿದ್ದ ಗರ್ಭಿಣಿಗೆ ಸೋಮವಾರ ನಾರ್ಮಲ್ ಹೆರಿಗೆ ಆಗಿದೆ.
ಮೇ 13ರಂದು ಮುಂಬೈಯಿಂದ ಖಾಸಗಿ ವಾಹನದಲ್ಲಿ ಬಂದಿದ್ದ 7 ಮಂದಿ ಕಾರ್ಮಿಕರಲ್ಲಿ ಈ 19 ವರ್ಷದ ಗರ್ಭಿಣಿ ಯುವತಿಯೂ ಇದ್ದಳು. ಅಂದೇ ಇವರನ್ನೆಲ್ಲ ಜಿಲ್ಲಾಡಳಿತವು ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಿತ್ತು.
ನಂತರ ಹೆರಿಗೆ ನೋವು ಕಂಡು ಬಂದ ಹಿನ್ನೆಲೆಯಲ್ಲಿ ಗಂಟಲ ದ್ರವವನ್ನು ಜಿಲ್ಲಾಡಳಿತ ಪರೀಕ್ಷೆಗೆ ಕಳಿಸಿತ್ತು. ಬಳಿಕ ಆರೋಗ್ಯ ಇಲಾಖೆಯವರು ಆಗಮಿಸಿ ಹೆರಿಗೆ ಮಾಡಿಸಿದ್ದರು. ಆರೋಗ್ಯವಂತ ಹೆಣ್ಣುಮಗುವಿಗೆ ಆಕೆ ಜನ್ಮ ನೀಡಿದ್ದಳು. ಮಗುವಿನ ಗಂಟಲ ದ್ರವವನ್ನೂ ಅಂದೇ ಕರೊನಾ ಪರೀಕ್ಷೆಗೆ ಕಳಿಸಲಾಗಿತ್ತು.
ಇದನ್ನೂ ಓದಿ:ಸೈಕಲ್​ ಕದ್ದ, ಚೀಟಿ ಬರೆದಿಟ್ಟ- ಅದನ್ನು ಓದಿದ ಸೈಕಲ್​ ಮಾಲೀಕ ಕಣ್ಣೀರಾದ… ಅಂಥದ್ದೇನಿತ್ತು ಆ ಚೀಟಿಯಲ್ಲಿ?
ಈಗ ತಾಯಿ ಮಗು ಇಬ್ಬರ ವರದಿಗಳೂ ಜಿಲ್ಲಾಡಳಿತದ ಕೈಸೇರಿದ್ದು, ತಾಯಿಯದು ಪಾಸಿಟಿವ್, ಮಗುವಿನದು ನೆಗೆಟಿವ್ ವರದಿ ಬಂದಿದೆ.
ಇವರ ಜತೆ ಉಳಿದವರ ಗಂಟಲ ದ್ರವವನ್ನೂ ಅಂದೇ ಕರೊನಾ ಪರೀಕ್ಷೆಗೆ ಕಳಿಸಲಾಗಿತ್ತು. ಈ ಪೈಕಿ ಆ ಗರ್ಭಿಣಿಯಲ್ಲದೆ, ಇತರ ನಾಲ್ವರಲ್ಲಿ ಸೋಂಕು ಇರುವುದು ದೃಢಪಟ್ಟಿದೆ. 45 ವರ್ಷದ ವ್ಯಕ್ತಿ, 10 ವರ್ಷದ ಬಾಲಕ, 20 ವರ್ಷದ ಇನ್ನೊಬ್ಬ ಯುವತಿ, 22 ವರ್ಷದ ಯುವಕ ಇದರಲ್ಲಿ ಸೇರಿದ್ದಾರೆ.
ಇದನ್ನೂ ಓದಿ:ಕರ್ನಾಟಕದ ಮೇಲೆ ಕರೊನಾ ಕೆಂಗಣ್ಣು- ಬೆಂಬಿಡದ ಮುಂಬೈ ನಂಟು… ಅರ್ಧ ದಿನದಲ್ಲೇ 84 ಪ್ರಕರಣ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 18 =
Remember me
