ಬೆಂಗಳೂರು:ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆಯಾದ ವಾಲೆಂಟೈನ್ಸ್ ಡೇ ಅಚರಣೆಯನ್ನು ಎದುರಿಸಲು ಫೆಬ್ರವರಿ 14 ರಂದು ‘ಮಾತಾಪಿತ’ ಪೂಜೆಯನ್ನು ಆಚರಿಸಲಾಗುವುದು ಎಂದು ಶ್ರೀ ರಾಮ ಸೇನೆ ಹೇಳಿದೆ. ವಾಲೆಂಟೈನ್ಸ್​ ಡೇ ಅಚರಣೆಯ ಹೆಸರಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಅಶ್ಲೀಲತೆ ನಡೆಯುವ ಸಾಧ್ಯತೆ ಇರುವೆಡೆ ಸಂಘಟನೆಯ ಕಾರ್ಯಕರ್ತರನ್ನು ನಿಯುಕ್ತಿಗೊಳಿಸಲಾಗುವುದು ಎಂದಿದೆ.
“ಪ್ರತಿವರ್ಷ ನಾವು ಮಾತಾ-ಪಿತಾ ಪೂಜೆಯನ್ನು ಆಯೋಜಿಸುತ್ತೇವೆ. ಈ ಬಾರಿಯೂ 50 ರಿಂದ 60 ಸ್ಥಳಗಳಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗುವುದು” ಎಂದು ಸಂಘಟನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಇದನ್ನೂ ಓದಿ:‘ವ್ಯಾಲೆಂಟೈನ್ಸ್​ ಡೇ’ಗೆ ಮುಂಚೆ ಹೀಗೊಂದು ದಿನ…. ‘ಪ್ರಾಮಿಸ್ ಡೇ’ !
ಕರ್ನಾಟಕದ ವಿವಿಧ ಭಾಗಗಳಲ್ಲಿ ಸಂಘಟನೆಯ ಕಾರ್ಯಕರ್ತರು ಪಬ್, ಬಾರ್, ಮಾಲ್, ಐಸ್​ಕ್ರೀಂ ಪಾರ್ಲರ್, ಪಾರ್ಕ್​ನಂತಹ ಸ್ಥಳಗಳಲ್ಲಿ ಅಶ್ಲೀಲ ನಡವಳಿಕೆಗೆ ಅವಕಾಶ ಕೊಡದಂತೆ ಎಚ್ಚರ ವಹಿಸಲಿದ್ದಾರೆ. ಕಾರ್ಯಕರ್ತರು ಕಾನೂನನ್ನು ಕೈಗೆ ತೆಗೆದುಕೊಳ್ಳುವುದಿಲ್ಲ, ಬದಲಿಗೆ, ಈ ರೀತಿಯ ಘಟನೆಗಳನ್ನು ತಡೆಯಲು ಪೊಲೀಸರೊಂದಿಗೆ ಸಹಕರಿಸುತ್ತಾರೆ ಎಂದು ಮುತಾಲಿಕ್ ಹೇಳಿದ್ದಾರೆ.
“ಪಾಶ್ಚಿಮಾತ್ಯ ಸಂಸ್ಕೃತಿಯು ನಮ್ಮ ಯುವಜನರನ್ನು ಅದರೆಡೆಗೆ ಆಕರ್ಷಿಸಲು ಪ್ರಯತ್ನಿಸುತ್ತಿದೆ. ಇದು ನಮ್ಮ ಅಮೂಲ್ಯ ಪರಂಪರೆಯ ಮೇಲೆ ವಿಪರೀತವಾದ ಪರಿಣಾಮ ಉಂಟುಮಾಡುತ್ತಿದೆ. ಡ್ರಗ್ಸ್, ಸೆಕ್ಸ್, ಲವ್ ಜಿಹಾದ್​ನ ಸಮಸ್ಯೆಗಳು ಹೆಚ್ಚುತ್ತಿವೆ. ವಾಲೆಂಟೈನ್ಸ್ ಡೇ ಅದರ ಸ್ಪಷ್ಟ ಉದಾಹರಣೆಯಾಗಿದೆ” ಎಂದು ಶ್ರೀ ರಾಮ ಸೇನೆ ಪ್ರಕಟಣೆಯಲ್ಲಿ ತಿಳಿಸಿದೆ.(ಏಜೆನ್ಸೀಸ್)
ಪ್ರಾಮಿಸ್​ ದಿನದಂದೇ ಪ್ರೀತಿ ತಿರಸ್ಕರಿಸಿದ ಯುವತಿಗೆ ಸಾವಿನ ಶಿಕ್ಷೆ ಕೊಟ್ಟ ಪ್ರಿಯಕರ!
ರೇಪ್ ಮಾಡಿದ ಎಂದಳು, ಆದರೆ ಕೈಯಲ್ಲಿ ಅವನ ಹೆಸರ ಟಾಟೂ ಇತ್ತು !


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × two =
Remember me
