ಬೆಂಗಳೂರು: ಮಳೆ ಕೊರತೆಯಿಂದಾಗಿ ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ಕಡಿಮೆ. ಸಂಕಷ್ಟ ಕಾಲದಲ್ಲಿ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳಿಗೆ ಪರಿಹಾರ ಸೂತ್ರವನ್ನು ಕಂಡುಕೊಳ್ಳಬೇಕಾಗಿದೆ. ಬರೀ ಗಣಿತಶಾಸ್ತ್ರೀಯ ಅಂಕಿಅಂಶಗಳ ಆಧಾರಿತ ಲೆಕ್ಕಾಚಾರಗಳು ಸಂಕಷ್ಟಕ್ಕೆ ಪರಿಹಾರ ಸೂತ್ರವಾಗದು ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.
ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಬುಧವಾರ ಸರ್ವಪಕ್ಷ ಸಭೆಯಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಕಾವೇರಿ ನ್ಯಾಯಾಧಿಕರಣದ ಐತೀರ್ಪು ಹಾಗೂ ಸುಪ್ರೀಂ ಕೋರ್ಟ್ ಆದೇಶಗಳು ಊರ್ಜಿತದಲ್ಲಿರುವಾಗ ಗಣಿತದ ಲೆಕ್ಕಾಚಾರಗಳು ನೆರವಿಗೆ ಬರುವುದಿಲ್ಲ ಎಂದು ತಮ್ಮ ಅಭಿಪ್ರಾಯ ಸಮರ್ಥಿಸಿಕೊಂಡರು.
ಮಳೆ ಕೈಕೊಟ್ಟಾಗೆಲ್ಲ ತಮಿಳುನಾಡು ಅನವಶ್ಯಕವಾಗಿ ವಿವಾದದ ಸೃಷ್ಟಿಸುತ್ತಿದೆ ಇವತ್ತು ಕರ್ನಾಟಕದ ಎಲ್ಲ ರಾಜಕೀಯ ಪಕ್ಷಗಳು ಮತ್ತು ನೀರಾವರಿ ತಜ್ಞರು ಸೇರಿ ಹೇಗೆ ಪರಿಸ್ಥಿತಿ ಬಗೆಹರಿಸಬೇಕು ಎಂಬುದರ ಬಗ್ಗೆ ಚರ್ಚೆ ಮಾಡಿದ್ದೇವೆ.
ಕರ್ನಾಟಕದಲ್ಲಿ ನೀರಿನ ಕೊರತೆ ಬಹಳಷ್ಟಿದೆ. ಐತೀರ್ಪಿನಲ್ಲಿ ಹೇಳಿರುವ ರೀತಿಯಲ್ಲಿ ನೀರು ಬೀಡಬೇಕಾದದ್ದು ನಮ್ಮ ಕರ್ತವ್ಯ ಅಂತ ಹೇಳ್ತೀನಿ.ಆದರೆ ನಮ್ಮ ರಾಜ್ಯ ಜನರ ಪ್ರಾಮುಖ್ಯತೆ ಕೊಡಬೇಕು.ನಾನು ಸಭೆಯಲ್ಲಿ ಎರಡು ವಿಚಾರ ಬಗ್ಗೆ ಸಲಹೆ ಕೊಟ್ಟಿರುವೆ.
ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇರೋದ್ರಿಂದ ಅದಕ್ಕೆ ಹೆಚ್ಚು ಆಧ್ಯತೆ ಕೊಡಬೇಕು.ತಮಿಳುನಾಡಿನ ಜಲಾಶಯದಲ್ಲಿ ನೀರು ಹೆಚ್ಚಾಗಿಯೇ ಇದೆ. ಅಲ್ಲಿಯ ಜಲಾಶಯದ ಹೆಚ್ಚುವರಿ ನೀರಿನ ಸಂಗ್ರಹದ ಬಗ್ಗೆ ಸುಪ್ರೀಂ ಕೋರ್ಟ್ ಗಮನಕ್ಕೆ ತರಬೇಕು.ಮಳೆ ನೀರಿನ ಕೊರತೆಯಾದಗ ಜಲಾಶಯದಲ್ಲಿ ಶೇಖರಣೆಯಾದ ಹೆಚ್ಚವರಿ ನೀರು ಬಳಕೆ‌ಮಾಡಿಕೊಳ್ಳಬಹುದು.
ಕೊರತೆ ವರ್ಷದಲ್ಲಿ ಏನು ಮಾಡಬೇಕು ಎಂಬುದರ ಬಗ್ಗೆ ಸುಪ್ರೀಂ ಕೋರ್ಟ್ ಇದುವರೆಗೂ ಹೇಳಿಲ್ಲ. ಕಾವೇರಿ ಪ್ರಾಧಿಕಾರ ಮತ್ತು ಕಾನೂನು ತಂಡ ಈ ಬಗ್ಗೆ ಹೆಚ್ಚು ಗಮನಹರಿಸಿಲ್ಲ. ಇವೆರಡೂ ಅಂಶಗಳನ್ನು ಸಮರ್ಥಿಸಿಕೊಂಡರೆ ಎಷ್ಟು ನೀರು ಬಿಡಬೇಕೆಂದು ಸುಪ್ರೀಂ ಕೋರ್ಟ್ ಹೇಳಬಹುದು ಎಂದು ಡಿ.ವಿ.ಸದಾನಂದ ಗೌಡ ವಿಶ್ಲೇಷಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + seven =
Remember me
