ಕಾರವಾರ:ಕೇಂದ್ರ ಸರ್ಕಾರದ ಮಾತೃವಂದನ ಯೋಜನೆಗೆ ಪರ್ಯಾಯವಾಗಿ ಅಂದಿನ ಸಿದ್ದರಾಮಯ್ಯ ಸರ್ಕಾರ ಪ್ರಾರಂಭಿಸಿದ್ದ ಮಾತೃಶ್ರೀ ಯೋಜನೆಯನ್ನು ಕಳೆದ ಮಾರ್ಚ್​ನಿಂದ ಸ್ಥಗಿತ ಮಾಡಲಾಗಿದೆ. ಮಾರ್ಚ್ ನಂತರ ಅರ್ಜಿಗೆ ಸೌಲಭ್ಯ ನೀಡುವುದಿಲ್ಲ. ಹೊಸದಾಗಿ ಅರ್ಜಿ ಪಡೆಯಬೇಡಿ ಎಂದು ಮೇ ನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸುತ್ತೋಲೆ ಹೊರಡಿಸಿದೆ.
ಬಿಪಿಎಲ್ ಕುಟುಂಬದ ಗರ್ಭಿಣಿಯರಿಗೆ ಏಳು, ಎಂಟು ಹಾಗೂ ಒಂಬತ್ತನೇ ತಿಂಗಳಿಗೆ ತಲಾ 1 ಹಾಗೂ ಬಾಳಂತಿಯರಿಗೆ ಒಂದು, ಎರಡು ಮತ್ತು ಮೂರನೇ ತಿಂಗಳಿಗೆ ತಲಾ 1 ಸಾವಿರ ರೂ. ಸೇರಿ ಒಟ್ಟು 6 ಸಾವಿರ ರೂ.ಗಳನ್ನು ಎರಡು ಹೆರಿಗೆಗಳಿಗೆ ಸೀಮಿತವಾಗಿ ವಿತರಿಸುವ ಯೋಜನೆ ಇದಾಗಿತ್ತು.
ಕೇಂದ್ರ ಸರ್ಕಾರದ ಮಾತೃವಂದನಾ ಯೋಜನೆ 2017 ರಲ್ಲಿ ಪ್ರಾರಂಭವಾಗಿದ್ದು, ಗರ್ಭಿಣಿಯ ಖಾತೆಗೆ ಮೂರು ಹಂತದಲ್ಲಿ ಒಟ್ಟು 5 ಸಾವಿರ ರೂ. ಜಮಾ ಮಾಡಲಾಗುತ್ತದೆ. ಅದರಲ್ಲಿ ಶೇ. 60 ರಷ್ಟು ಕೇಂದ್ರದ ಪಾಲಿದ್ದರೆ ಶೇ. 40 ರಷ್ಟು ರಾಜ್ಯ ಸರ್ಕಾರದ ಪಾಲಿದೆ. ರಾಜ್ಯ ಸರ್ಕಾರ ಮಾತೃ ವಂದನಾ ಯೋಜನೆಗೆ ತನ್ನ ಪಾಲು ಒದಗಿಸುತ್ತಿದೆ. ಅಲ್ಲದೆ, ಗರ್ಭಿಣಿಯರಿಗೆ ಅಂಗನವಾಡಿಗಳಲ್ಲಿ ಊಟ ನೀಡುವ ರಾಜ್ಯ ಸರ್ಕಾರದ ಮಾತೃಪೂರ್ಣ ಯೋಜನೆ ಜಾರಿಯಲ್ಲಿ ಇರುವುದರಿಂದ ಹೊಸ ಮತ್ತೊಂದು ಯೋಜನೆ ಬೇಡ ಎಂದು ತೀರ್ವನಿಸಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
2018ರ ನವೆಂಬರ್​ನಲ್ಲಿ ಪ್ರಾರಂಭವಾದ ಯೋಜನೆಗೆ ಜಿಲ್ಲೆಯಲ್ಲಿ ಈ ವರ್ಷ ಮಾರ್ಚ್​ವರೆಗೆ ಒಟ್ಟು 21,728 ಗರ್ಭಿಣಿ, ಬಾಳಂತಿಯರು ಅರ್ಜಿ ಸಲ್ಲಿಸಿದ್ದಾರೆ. ಇನ್ನೂ ಸಾಕಷ್ಟು ಜನರಿಗೆ ಹಣ ಬರುವುದು ಬಾಕಿ ಇದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − seven =
Remember me
