ವಿಜಯಪುರ: ದಕ್ಷಿಣ ಅಮೆರಿಕದ ಅಮೆಜಾನ್ ನದಿಯಲ್ಲಿ ಕಂಡುಬರುವ ಡೈಮಂಡ್ ಸ್ಟಿಂಗ್ ರೇ ಎಂಬ ಒಂದು ಸೆಂ.ಮೀ. ಅಳತೆಯ ಮೀನಿನ ಬೆಲೆ ಒಂದು ಲಕ್ಷ ರೂ.! ಇದೇ ಮೀನು ಐದು ಸೆಂ.ಮೀ. ಇದ್ದ್ದೆ 5 ಲಕ್ಷ ರೂ. ಬೆಲೆ. ಒಂದೂವರೆ ಕೆಜಿಯಿದ್ದರೆ ಬರೋಬ್ಬರಿ 20 ಲಕ್ಷ ರೂ.!ವಿಜಯಪುರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣ ಸಮೀಪದ ಆನ್​ಲೈನ್ ಟ್ರೇಡಿಂಗ್ ಸಂಕೀರ್ಣದ ಆವರಣದಲ್ಲಿ ಹಮ್ಮಿಕೊಂಡಿರುವ ಬೃಹತ್ ಮತ್ಸ್ಯ ಮೇಳದಲ್ಲಿ ಪ್ರದರ್ಶನಕ್ಕೆ ಇಡ ಲಾಗಿರುವ ದುಬಾರಿ ಮೀನುಗಳಿವು.
ಡೈಮಂಡ್ ಸ್ಟಿಂಗ್:ರೇ ಮೀನನ್ನು ಅಮೆರಿಕದಲ್ಲಿ ವಾಸ್ತು ಮೀನಾಗಿ ಅಕ್ವೇರಿಯಂನಲ್ಲಿ ಇಡಲಾಗುತ್ತದೆ. ಇದಲ್ಲದೆ ಅಲಿಗೇಟರ್ ಗಾರ್ ಎಂಬ ಮೀನಿಗೆ 2 ಲಕ್ಷ ರೂ., ಲಿಯೋಪಾರ್ಡ್ ಡಿಸ್ಕಸ್ ಮೀನಿನ ದರ 1 ಲಕ್ಷ ರೂ., ಚೀನಾದ ವಾಸ್ತುಮೀನು ಫ್ಲವರ್ ಹಾರ್ನ್ ಬೆಲೆ 70 ಸಾವಿರ ರೂ. ಇದೆ. ಹೀಗೆ ಬೆಲೆಬಾಳುವ ಮೀನುಗಳು ಜನರನ್ನು ಆಕರ್ಷಿಸುತ್ತಿವೆ. ಮತ್ಸ್ಯಮೇಳ ಮೂರು ದಿನ ನಡೆಯಲಿದೆ.
ತರಹೇವಾರಿ ಮೀನು:ಮೇಳದಲ್ಲಿ ಸಿಲ್ವರ್ ಅರೋವನ್, ರೆಡ್​ಟೇಲ್ ಅರೋನ್, ಅಲ್​ಬಿನೋ ಗೌರಾಮಿ ಹೆಡ್​ಗೋಲ್ಡ್, ಆರೆಂಜ್ ಮಾರ್ಫ್, ಆರೆಂಜ್ ಕೋಯಿ, ಮಿಲ್ಕ್ ಕೊಯಿ ಕಾರ್ಫ್, ಸರ್ಪೆಟೆಟ್ರಾ, ವೆನಿಲ್ಲಾ ಕಾರ್ಪ್, ಗ್ರೀನ್​ಸ್ಕೇಟ್ಸ್, ನಿಯೋನ್ ಟೆಟ್ರಾ, ಪೆನ್ಸಿಲ್ ಟೆಟ್ರಾ, ಪಫರ್, ಟೈಗರ್ ಬಾರ್ಬ್, ರೋಜಿ ಬಾರ್ಬ್, ಸಿಂಗಾಪುರ್ ಗಪ್ಟಿ, ಟೈಗರ್ ಆಸ್ಕರ್, ಗ್ರೀನ್ ಟೆರರ್, ತಿಲಾಪಿಯಾ, ಗೋಲ್ಡನ್ ಕ್ಯಾಟ್ ಫಿಶ್, ಸಿಲ್ವರ್ ಶಾರ್ಕ್, ಚೆರ್ರಿ ಬಾರ್ಬ್, ಡೈಮಂಡ್ ಆಂಗಲ್, ಗ್ರೀನ್ ಟೈಗರ್, ಹಾಕಿ ಸ್ಟಿಕ್ ಟೆಟ್ರಾ, ಬ್ಲಾಕ್ ಶಾರ್ಕ್ ಹೀಗೆ ದೇಶ-ವಿದೇಶದ ಮೀನುಗಳು ಜನರ ಗಮನ ಸೆಳೆಯುತ್ತಿವೆ.
90ಕ್ಕೂ ಹೆಚ್ಚು ಅಕ್ವೇರಿಯಂ:90ಕ್ಕೂ ಹೆಚ್ಚು ಅಕ್ವೇರಿಯಂಗಳಲ್ಲಿ ಮೀನುಗಳನ್ನು ಪ್ರದರ್ಶಿಸಲಾಗಿದೆ. ಮೂರು ದಿನಗಳ ಮತ್ಸ್ಯಮೇಳದಲ್ಲಿ ಸಿಹಿ ನೀರಿನ, ಉಪ್ಪು ನೀರಿನ ಮೀನುಗಳ ಅಕ್ವೇರಿಯಂ, ಪ್ಲಾಂಟೆಡ್ ಅಕ್ವೇರಿಯಂಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಸಮುದ್ರದ ಒಳಭಾಗದಲ್ಲಿ ಕಂಡುಬರುವ ಸಸ್ಯಗಳನ್ನಿಟ್ಟು ಪ್ರದರ್ಶಿಸುವ ಪ್ಲಾಂಟೆಡ್ ಅಕ್ವೇರಿಯಂ, ಅರ್ಧ ಭಾಗ ನೀರಿನ ಒಳಭಾಗದಲ್ಲಿ ಹಾಗೂ ಅರ್ಧ ಸಸ್ಯ ನೀರಿನಿಂದ ಹೊರಗೆ ಇರುವ ಅಕ್ವೇರಿಯಂಗಳು ಗಮನ ಸೆಳೆಯುತ್ತಿವೆ.
ಮತ್ಸ್ಯಮೇಳಕ್ಕೆ ಮೊದಲ ದಿನವೇ ಜನರಿಂದ ಉತ್ತಮ ಸ್ಪಂದನೆ ದೊರಕಿದೆ. ದೇಶ- ವಿದೇಶಗಳ ಮೀನುಗಳನ್ನು ಪ್ರದರ್ಶನಕ್ಕೆ ಇಡಲಾಗಿದ್ದು, ಜನರನ್ನು ಆಕರ್ಷಿಸುತ್ತಿದೆ.| ಡಾ. ಎಸ್. ವಿಜಯಕುಮಾರ್ಮೀನುಗಾರಿಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥ, ಭೂತನಾಳ
ಹೀರಾನಾಯ್ಕ ಟಿ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:11 − one =
Remember me
