ಸಿದ್ದಾಪುರ:ತಾಲೂಕಿನ ಆಡುಕಟ್ಟಾ ಗ್ರಾಪಂ ವ್ಯಾಪ್ತಿಯ ಮಾವಿನಗುಂಡಿ- ಸಾಗರ ರಾಷ್ಟ್ರೀಯ ಹೆದ್ದಾರಿಯ 2016ರ ಸಮೀಪವಿರುವ ನಿಸರ್ಗ ನಿರ್ವಿುತ ಶಿಲಾ ಸೇತುವೆ ಜನಪ್ರತಿನಿಧಿಗಳ ನಿರ್ಲಕ್ಷ್ಯ ಹಾಗೂ ಅಧಿಕಾರಿಗಳ ನಿರಾಸಕ್ತಿಯಿಂದ ಕಾಲಗರ್ಭ ಸೇರುವ ಸ್ಥಿತಿ ನಿರ್ವಣಗಿದೆ.
ಕಲಗಾರಿನಲ್ಲಿ ಹುಟ್ಟಿ ಮುಂದೆ ವರದಾನದಿಗೆ ಸೇರುವ ಹೊಳೆಗೆ ಪ್ರಾಕೃತಿಕವಾಗಿ ನಿರ್ವಣಗೊಂಡಿರುವ ಈ ಶಿಲಾ ಸೇತುವೆಯು ವಿಶ್ವ ವಿಖ್ಯಾತಜೋಗ ಜಲಪಾತದಿಂದ 8 ಕಿ.ಮೀ ದೂರದಲ್ಲಿದೆ. ಸುಮಾರು 45 ಅಡಿ ಉದ್ದ, 4 ರಿಂದ ಆರು ಅಡಿ ಅಗಲ, 2 ರಿಂದ 3 ಅಡಿ ದಪ್ಪ ಇದ್ದು ಹೊಳೆಯ ತಳಪಾಯದಿಂದ 9 ಅಡಿ ಎತ್ತರದಲ್ಲಿದೆ. ಸೇತುವೆ ಮೇಲೆ ನಿತ್ಯ ಜನ- ಜಾನುವಾರುಗಳು ಸಂಚರಿಸುತ್ತಾರೆ.
ಈ ಕಲ್ಲು ಸಂಕ ಭೂ ವೈಜ್ಞಾನಿಕ ವಿಸ್ಮಯದಲ್ಲೊಂದಾಗಿದ್ದು, ವಿಶ್ವದಲ್ಲಿರುವ ಪ್ರಕೃತಿ ನಿರ್ವಿುತ ಸೇತುವೆಯಲ್ಲಿ ಇದು ಎರಡನೇಯದು. ಭಾರತದಲ್ಲಿ ಇದನ್ನು ಹೊರತುಪಡಿಸಿದರೆ ಬೇರೆ ಯಾವ ಹೊಳೆಗೂ ಕಲ್ಲಿನ ಸೇತುವೆ ನಿರ್ವಣಗೊಂಡಿಲ್ಲ. ತಿರುಪತಿ ಹಾಗೂ ಬಾದಾಮಿಗಳಲ್ಲಿ ಶಿಲಾ ಕಮಾನುಗಳು ಮಾತ್ರ ಇವೆ ಎನ್ನುವುದು ಇತಿಹಾಸಕಾರರ ಅಭಿಪ್ರಾಯವಾಗಿದೆ.
ಅಮೆರಿಕ ಸಂಯುಕ್ತ ಸಂಸ್ಥಾನದ ರಾಜ್ಯಗಳಲ್ಲೊಂದಾದ ಉಟಾದಲ್ಲಿನ ಒಂದು ಹೊಳೆಗೆ ಕಲ್ಲಿನ ಸೇತುವೆ ಪ್ರಾಕೃತಿಕವಾಗಿ ನಿರ್ವಣಗೊಂಡಿದ್ದು, ಅದನ್ನು ಭೂ ವೈಜ್ಞಾನಿಕ ಸ್ಮಾರಕ ಎಂದು ಘೊಷಿಸಿ, ಸಂರಕ್ಷಿಸಲಾಗಿದೆ. ಶಿಲಾ ಸೇತುವೆಯನ್ನು ಅನೇಕ ಜನಪ್ರತಿನಿಧಿಗಳು, ಅಧಿಕಾರಿಗಳು ವೀಕ್ಷಿಸಿ ಅಭಿವೃದ್ಧಿಪಡಿಸುವ ಕುರಿತು ಆಶ್ವಾಸನೆ- ಭರವಸೆ ನೀಡಿ ಹೋಗಿದ್ದಾರೆ.
ವಿಧಾನಸಭಾಧ್ಯಕ್ಷರಿಗೆ ಮನವಿ: ಇತ್ತೀಚೆಗೆ ಆಡುಕಟ್ಟಾ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಸ್ಥಳೀಯರು ಮನವಿ ನೀಡಿದ್ದು, ಪ್ರಯೋಜನವಾಗಬಹುದೇ ಎಂದು ಕಾದು ನೋಡಬೇಕಾಗಿದೆ.
ಆತಂಕ: ಕಲ್ಲು ಸಂಕದ ಎರಡು ಪಾರ್ಶ್ವಗಳಲ್ಲಿ ಅರಳಿಗಿಡ ಬೆಳೆದು ಸೇತುವೆ ಶಿಥಿಲಗೊಳ್ಳುತ್ತಿದೆ. ಸೇತುವೆಯ ಒಂದು ಭಾಗದಲ್ಲಿ ಸಣ್ಣ ಬಿರುಕು ಕಾಣಿಸಿಕೊಂಡಿದೆ. ಹೊಳೆಯ ಎರಡೂ ಭಾಗದ ದಡ ಪ್ರತಿವರ್ಷ ಕೊರೆದು ಐದಾರು ಅಡಿ ವಿಸ್ತರಿಸಿರುವುದರಿಂದ ಮುರಿಯುವ ಸಾಧ್ಯತೆ ಇದೆ.
ಆಗ್ರಹ: ಅರಣ್ಯ ಭೂಮಿ ಒತ್ತುವರಿ ತಡೆಯಬೇಕು. ಸೇತುವೆಯ ಎರಡೂ ಪಕ್ಕ ತಡೆಗೋಡೆ ನಿರ್ವಿುಸಿ ಹೊಳೆಯ ವಿಸ್ತರಣೆ ತಪ್ಪಿಸಿ, ಸೇತುವೆ ಮುರಿಯದಂತೆ ರಕ್ಷಿಸಬೇಕು. ಪ್ರವಾಸೋದ್ಯಮ ಇಲಾಖೆ ಅಥವಾ ಜೋಗ ಪ್ರಾಧಿಕಾರದಂತಹ ಸರ್ಕಾರಿ ಸಂಸ್ಥೆಗಳು ಇದರ ಅಭಿವೃದ್ಧಿಗೆ ಮುಂದಾಗಬೇಕು ಎಂದು ಕಲಗಾರ, ಮುಸವಳ್ಳಿ ಸುತ್ತಮುತ್ತಲಿನ ಜನತೆ ಆಗ್ರಹಿಸಿದ್ದಾರೆ.
ಈಡೇರದ ಸಂಸದರ ಭರವಸೆ: ಕಲ್ಲು ಸಂಕದ ಸಂರಕ್ಷಣೆಗೆ 30 ಲಕ್ಷ ರೂ. ವೆಚ್ಚದ ಯೋಜನೆ ಕೈಗೊಳ್ಳಲಾಗಿದೆ. ಇದನ್ನು ಭೂವೈಜ್ಞಾನಿಕ ಸ್ಮಾರಕ ಎಂದು ಘೊಷಿಸಿ ರಕ್ಷಿಸಲಾಗುವುದು. ಸೇತುವೆಯ ಮೇಲೆ ಸಂಚಾರ ನಿರ್ಬಂಧಿಸಿ ದೂರದಿಂದಲೇ ಅದನ್ನು ನೋಡಲು ತೂಗು ಸೇತುವೆ, ಸುತ್ತಲೂ ಇರುವ ಕಂದಾಯ ಮತ್ತು ಅರಣ್ಯ ಭೂಮಿಯಲ್ಲಿ ಸಾರ್ವಜನಿಕ ಉದ್ಯಾನ ನಿರ್ವಿುಸುತ್ತೇವೆ ಎಂದು ಸಂಸದ ಅನಂತಕುಮಾರ ಹೆಗಡೆ 2008ರಲ್ಲಿ ಹೇಳಿದ್ದರು. ಕಳೆದ ಲೋಕಸಭೆ ಚುನಾವಣೆ ಸಮಯದಲ್ಲಿ ಕ್ಷೇತ್ರದಲ್ಲಿ ನಡೆಸಿದ ಅಭಿವೃದ್ಧಿ ಕಾಮಗಾರಿ ಯಾದಿಯಲ್ಲಿಯೂ ಕಲ್ಲು ಸಂಕದ ಅಭಿವೃದ್ಧಿಗೆ 30 ಲಕ್ಷ ರೂ. ನೀಡಿರುವುದಾಗಿ ತಿಳಿಸಿದ್ದರು. ಅದೂ ಕಾರ್ಯಗತವಾಗಿಲ್ಲ ಎಂದು ಸ್ಥಳೀಯರಾದ ಲಕ್ಷ್ಮೀನಾರಾಯಣ ಹೆಗಡೆ ಕಲಗಾರ, ರಾಜಾರಾಮ ಹೆಗಡೆ ಮಲವಳ್ಳಿ ಹಾಗೂ ಊರವರು ಹೇಳುತ್ತಾರೆ.
ನಿಸರ್ಗ ನಿರ್ವಿುತ ಶಿಲಾ ಸೇತುವೆಯನ್ನು ರಕ್ಷಣೆ ಮಾಡಿಕೊಳ್ಳುವುದು ನಮ್ಮ ಕರ್ತವ್ಯ. ಸರ್ಕಾರದ ಯಾವುದಾದರೂ ಯೋಜನೆಯಲ್ಲಿ ಸೇತುವೆ ಸಂರಕ್ಷಣೆ ಮಾಡಲಾಗುವುದು. ಸೇತುವೆಯ ಸುತ್ತ್ತನ ಜನತೆಗೆ ಅನುಕೂಲ ಆಗುವಂತೆ ಹಾಗೂ ಪ್ರವಾಸಿ ಕೇಂದ್ರವನ್ನಾಗಿ ಮಾಡುವುದಕ್ಕೆ ಪ್ರಯತ್ನಿಸಲಾಗುವುದು.
| ವಿಶ್ವೇಶ್ವರ ಹೆಗಡೆ ಕಾಗೇರಿ ವಿಧಾನಸಭಾಧ್ಯಕ್ಷರು
ರಮೇಶ ಹಾರ್ಸಿಮನೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × two =
Remember me
