ಹುಬ್ಬಳ್ಳಿ:ಭಾರತೀಯ ಜೀವನ ಪದ್ಧತಿಯಲ್ಲಿ ಯಾವುದಕ್ಕೂ ಕಡಿಮೆಯಿಲ್ಲ. ಯೋಗದಂಥ ದೇಸಿ ಪದ್ಧತಿ ಮೂಲಕ ಬಲಿಷ್ಠ ರಾಷ್ಟ್ರ ಕಟ್ಟಬೇಕು. ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಸೆಡ್ಡು ಹೊಡೆದು, ಆ ಸಂಸ್ಕೃತಿ ದೂರ ಸರಿಸಬೇಕು. ನಿತ್ಯ ಜೀವನದಲ್ಲಿ ಯೋಗ, ಪ್ರಾಣಾಯಾಮ, ನಿಸರ್ಗ ಚಿಕಿತ್ಸೆ, ಆಯುರ್ವೆದ ಮತ್ತು ಉತ್ತಮ ನಡವಳಿಕೆ ಅಳವಡಿಸಿಕೊಳ್ಳಬೇಕು ಎಂದು ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಸಲಹೆ ನೀಡಿದರು.
ಹರಿದ್ವಾರದ ಪತಂಜಲಿ ಯೋಗ ಪೀಠದ ವತಿಯಿಂದ 1 ಸಾವಿರ ಯೋಗ ಶಿಕ್ಷಕರಿಗಾಗಿ ಆಯೋಜಿಸಿರುವ 1 ತಿಂಗಳ ಆನ್​ಲೈನ್ ಯೋಗ ತರಬೇತಿ ಶಿಬಿರಕ್ಕೆ ಇಲ್ಲಿನ ಕೇಶ್ವಾಪುರ ಯೋಗ ಕಾರ್ಯಾಲಯದಲ್ಲಿ ಮಂಗಳವಾರ ಚಾಲನೆ ನೀಡಿ ಮಾತನಾಡಿದರು. ಅಮೆರಿಕ, ರಷ್ಯಾದಲ್ಲಿ ಸಂಶೋಧನೆಯಾದ ಕರೊನಾ ಲಸಿಕೆ ಬಂದರೆ ಬಳಸಲು ಸಿದ್ಧರಿದ್ದೇವೆ. ಆದರೆ, ನಮ್ಮ ದೇಶದಲ್ಲಿ ನ್ಯಾಚುರೋಪಥಿ ಮತ್ತು ಆಯುರ್ವೆದದಲ್ಲಿ ಸರಳ ಔಷಧಗಳಿದ್ದರೂ ತೆಗೆದುಕೊಳ್ಳಲು ಹಿಂದೇಟು ಹಾಕುತ್ತೇವೆ ಎಂದು ಬೇಸರಿಸಿದರು.
ಕರೊನಾಗೆ ಏಲಕ್ಕಿ ರಾಮಬಾಣ: ಪುಣೆಯ ಡಾ. ನಾಯಕ ಎಂಬ ಮಿತ್ರರೊಬ್ಬರು ಯಾಲಕ್ಕಿಯಿಂದ ಕರೊನಾ ಗುಣಪಡಿಸಿದ್ದಾರೆ. 8 ಏಲಕ್ಕಿಯನ್ನು ಬೀಜ ತೆಗೆದು ಕುಟ್ಟಿ ಪುಡಿ ಮಾಡಿ 1 ಗ್ಲಾಸ್ ನೀರಿನಲ್ಲಿ ಬೆರೆಸಿ ಅರ್ಧ ಲೋಟಕ್ಕೆ ಬರುವವರೆಗೆ ಕುದಿಸಬೇಕು. ದಿನಕ್ಕೆ 4 ಬಾರಿ ಏಲಕ್ಕಿ ಕಷಾಯ ಕುಡಿಯಬೇಕು. ನಾನೂ ಇದನ್ನು ಪರೀಕ್ಷಿಸಿದ್ದು, ಉತ್ತಮ ಫಲಿತಾಂಶ ಬಂದಿದೆ ಎಂದು ಡಾ. ವಿಜಯ ಸಂಕೇಶ್ವರ ತಿಳಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + 12 =
Remember me
