ವಿಜಯವಾಣಿ ಸುದ್ದಿಜಾಲ ವಿಜಯಪುರ:ರಾಜ್ಯದ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ವಿಪಕ್ಷ ನಾಯಕನಿಲ್ಲದೇ ಬಜೆಟ್ ಮಂಡನೆಯಾಗಿದ್ದು, ಖಾಲಿ ಇರುವ ವಿಪಕ್ಷ ನಾಯಕ ಸ್ಥಾನಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಚಿವ ಎಂ.ಬಿ. ಪಾಟೀಲ ಆ ಸ್ಥಾನವನ್ನೂ ಹಣಕ್ಕೆ ಫಿಕ್ಸ್ ಮಾಡಿದ್ದಾರೋ ಯಾರಿಗೆ ಗೊತ್ತು? ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಮುಖ್ಯಮಂತ್ರಿ ಪಟ್ಟಕ್ಕೆ 2500 ಕೋಟಿ ಕೊಡಬೇಕೆಂದಿದ್ದರು. ಹೀಗಾಗಿ ವಿಪಕ್ಷ ನಾಯಕ ಸ್ಥಾನಕ್ಕೂ ನೂರಾರು ಕೋಟಿ ರೂಪಾಯಿ ಫಿಕ್ಸ್ ಮಾಡಿದ್ದಾರೋ ಯಾರಿಗೆ ಗೊತ್ತು ? ಎಂದು ಶನಿವಾರ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯೆ ನೀಡಿದರು.
ಬಜೆಟ್ ಮಂಡನೆಗೂ ಮುನ್ನವೇ ಸದನದಲ್ಲಿ ಈ ಬಗ್ಗೆ ತೀವ್ರ ಜಟಾಪಟಿ ಉಂಟಾಗಿತ್ತು. ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಸಚಿವ ಎಂ.ಬಿ. ಪಾಟೀಲರ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಇದೀಗ ಮುಂದುವರಿದ ಭಾಗವಾಗಿ ಸಚಿವ ಎಂ.ಬಿ. ಪಾಟೀಲ ವಿಪಕ್ಷ ನಾಯಕ ಸ್ಥಾನಕ್ಕೆ ಹಣ ನಿಗದಿ ಪಡಿಸಿರುವ ಬಗ್ಗೆ ಸಂಶಯ ವ್ಯಕ್ತಪಡಿಸುವ ಮೂಲಕ ಯತ್ನಾಳ್​ಗೆ ಪರೋಕ್ಷವಾಗಿ ಟಾಂಗ್ ನೀಡಿದರು.
ಇನ್ನು ಬಜೆಟ್ ಬಗ್ಗೆ ಪ್ರಲ್ಹಾದ್ ಜೋಷಿ ಟೀಕೆ ಕುರಿತು ಮಾತನಾಡುತ್ತಾ, ಪ್ರಲ್ಹಾದ ಜೋಷಿ ಅವರಿಗೆ ಬಡವರ ಬಗ್ಗೆ ಏನು ಗೊತ್ತಿದೆ? ಹೊಟ್ಟೆಯುರಿಯಿಂದ ಮಾತನಾಡಬಾರದು. ಅವರೊಬ್ಬ ಅನುಭವಿ ರಾಜಕಾರಣಿ. ಹೀಗಾಗಿ ಸುಮ್ಮನೆ ಏನೇನೋ ಮಾತನಾಡುವುದಲ್ಲ. ಅನ್ನಭಾಗ್ಯ, ಉಚಿತ ವಿದ್ಯುತ್, ಬಸ್ ಉಚಿತ ಸೌಲಭ್ಯ, ಯುವ ನಿಧಿ, ಗೃಹ ಲಕ್ಷ್ಮಿ ಇವುಗಳೆಲ್ಲವೂ ಬಡವರಿಗಾಗಿಯೇ ಮಾಡಿತ್ತು. ಹೀಗಾಗಿ ಬಜೆಟ್‌ನಲ್ಲಿ ಬಡವರನ್ನು ಕಡೆಗಣಿಸಿಲ್ಲ ಎಂದರು.
ರಾಜ್ಯದಲ್ಲಿ ಸದ್ಯಕ್ಕೆ ಪಠ್ಯ ಪರಿಷ್ಕಣೆ ಕಾರ್ಯ ನಡೆಯುತ್ತಿಲ್ಲ. ಮುಂಬರುವ ದಿನಗಳಲ್ಲಿ ಪಠ್ಯ ಪರಿಷ್ಕರಣೆ ವೇಳೆ ಬಸವಾದಿ ಶರಣರು, ಡಾ.ಬಾಬಾಸಾಹೇಬ ಅಂಬೇಡ್ಕರ್, ನಾರಾಯಣಗುರು, ಕುವೆಂಪು, ಸಿದ್ಧೇಶ್ವರ ಶ್ರೀಗಳು, ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧಿ, ಬಗತ್ ಸಿಂಗ್, ನೇತಾಜಿ ಸುಭಾಷಚಂದ್ರಬೋಸ್, ಸಿದ್ದಗಂಗಾ ಶ್ರೀ, ಆದಿಚುಂಚನಗಿರಿ ಸ್ವಾಮೀಜಿ ಹೀಗೆ ಅನೇಕ ಮಹಾತ್ಮರ ವಿಷಯಗಳನ್ನು ಪಠ್ಯದಲ್ಲಿ ಅಳವಡಿಸುವುದಾಗಿ ತಿಳಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five − 3 =
Remember me
