ಬಾಗಲಕೋಟೆ:ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಲಾಕ್​ಡೌನ್​ ಆಗಿದೆ. ಇದೊಂತರ ಕರ್ಫ್ಯೂ ತರಹವೇ ಆಗಿದ್ದು, ಜನರು ರಸ್ತೆಗಳಿಯದಂತೆ, ಕಾನೂನು ಉಲ್ಲಂಘನೆಯಾಗದಂತೆ ತಡೆಯಲು ಪೊಲೀಸರು ಬಿಸಿಲಲ್ಲಿ ನಿಂತು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ತಮ್ಮ ಊಟ, ತಿಂಡಿ, ಆರೋಗ್ಯವನ್ನೂ ಲೆಕ್ಕಿಸದೆ ಬಿಸಿಲಿನಲ್ಲಿ ಡ್ಯೂಟಿ ಮಾಡುತ್ತಿರುವ ಪೊಲೀಸರಿಗೆ ಕೂಲಿಕಾರ್ಮಿಕರ ಗುಂಪೊಂದು ಅನ್ನ, ನೀರು, ಹಣ್ಣು ವಿತರಣೆ ಮಾಡಿದೆ.
ಬಾಗಲಕೋಟೆಯಲ್ಲಿ ಕರ್ತವ್ಯ ನಿರತ ಪೊಲೀಸರಿಗೆ ಒಂದಷ್ಟು ಜನರು ಸೇರಿಕೊಂಡು ಅನ್ನ, ನೀರು ಕೊಟ್ಟಿದ್ದಾರೆ. ಅವರೆಲ್ಲ ಇದ್ದಲ್ಲೆ ಗಾಡಿ ಮೇಲೆ ತೆಗೆದುಕೊಂಡು ಹೋಗಿ ವಿತರಣೆ ಮಾಡಿದ್ದಾರೆ.
ಲಾಕ್​ಡೌನ್​ ಆಗಿರುವ ಕಾರಣಕ್ಕೆ ಯಾವುದೇ ಹೋಟೆಲ್​, ರಸ್ತೆ ಬದಿಯ ಅಂಗಡಿಗಳೂ ಬಾಗಿಲು ತೆಗೆದುಕೊಂಡಿಲ್ಲ. ಪೊಲೀಸರು ಕೂಡ ಸರಿಯಾದ ಸಮಯಕ್ಕೆ ಊಟ-ತಿಂಡಿ ಮಾಡಲು ಸಾಧ್ಯವಾಗದೆ ಸಂಕಟಪಡುತ್ತಿದ್ದಾರೆ. ಹೀಗಿರುವಾಗ ಗೆಳೆಯರ ಬಳಗವೊಂದು ಅವರಿಗೆ ಊಟ ನೀಡುತ್ತಿರುವ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. (ದಿಗ್ವಿಜಯ ನ್ಯೂಸ್​)
https://www.instagram.com/p/B-MTQ-bHktJ/
ಮೈಸೂರಲ್ಲಿ ಇನ್ನೋರ್ವ ವ್ಯಕ್ತಿಗೆ ಕರೊನಾ ವೈರಸ್​; ರಾಜ್ಯದಲ್ಲಿ 55ಕ್ಕೆ ಏರಿತು ಸೋಂಕಿತರ ಸಂಖ್ಯೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + fifteen =
Remember me
