ಮಣ್ಣಿನ ಫಲವತ್ತತೆಕಡಿಮೆಯಾಗಿರುವುದು ಗಂಭೀರವಾದ ಸಮಸ್ಯೆಗಳಿಗೆ ಕಾರಣವಾಗಿದೆ. ರಸಗೊಬ್ಬರ, ರಾಸಾಯನಿಕ, ಕೀಟನಾಶಕ, ಸಂಸ್ಕರಿತ ಬಿತ್ತನೆ ಬೀಜಗಳ ಅವಲಂಬನೆಯನ್ನು ತಪ್ಪಿಸಿ ಫಲವತ್ತತೆಯನ್ನು ಹೆಚ್ಚಿಸದಿದ್ದರೆ ಮುಂದಿನ ವರ್ಷಗಳಲ್ಲಿ ಕೃಷಿ ಉತ್ಪನ್ನಗಳ ಮೇಲೆ ಪರಿಣಾಮ ಬೀರಲಿದೆ.
ರಾಜ್ಯದ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಣ್ಣು ಎಷ್ಟರ ಮಟ್ಟಿಗೆ ಸತ್ವ ಕಳೆದುಕೊಂಡಿದೆ ಎಂದರೆ ಬರದಂತಹ ಸಂದರ್ಭದಲ್ಲಿ ಒಂದು ಬೆಳೆ ಬೆಳೆಯಬಹುದಾದ ಸಿರಿಧಾನ್ಯಗಳ ಉತ್ಪಾದನೆ ಸಹ ನಿರೀಕ್ಷಿತ ಪ್ರಮಾಣದಲ್ಲಿ ಆಗುತ್ತಿಲ್ಲ. ತಿಪ್ಪೆ ಗೊಬ್ಬರ ಬಳಕೆ ಕಡಿಮೆಯಾಗಿರುವುದು, ಹಸಿರೆಳೆ ಗೊಬ್ಬರ ಬಳಕೆ ಆಗದಿರುವುದು, ಬಹುಬೆಳೆ ಪದ್ಧತಿ ಇಲ್ಲದೇ ಏಕ ಬೆಳೆ ಪದ್ಧತಿ ಹೆಚ್ಚುತ್ತಿರುವುದು ಭೂಮಿಯ ಫಲವತ್ತತೆ ಕುಸಿಯಲು ಕಾರಣವಾಗಿದೆ. ಹೀಗಾಗಿ ಸಮಗ್ರ ಕೃಷಿಗೆ ಒತ್ತು ನೀಡದೆ ಮಣ್ಣನ್ನು ಸಾವಯವ ಮಾಡಲು ಸಾಧ್ಯವೇ ಆಗುವುದಿಲ್ಲ. ಕೃಷಿ ಭೂಮಿಯ ಮಣ್ಣಿನಲ್ಲಿ ಸಾವಯವ ಇಂಗಾಲದ ಪ್ರಮಾಣ ಕಡಿಮೆಯಾಗಿದೆ. ಇದರ ಪರಿಣಾಮವಾಗಿ ಮಣ್ಣಿನಲ್ಲಿ ನೀರು, ಗಾಳಿ, ಖನಿಜ, ಸಾವಯವ ಪದಾರ್ಥಗಳ ಪ್ರಮಾಣ ದಿನೇದಿನೆ ಇಳಿಮುಖವಾಗುತ್ತಿದೆ.
ಆದ್ದರಿಂದಲೇ ಕೃಷಿ ಉತ್ಪನ್ನಗಳ ಉತ್ಪಾದನೆ ಹೆಚ್ಚಾಗುತ್ತಿಲ್ಲ. ಇದನ್ನು ಮನಗಂಡು ಸರ್ಕಾರ ಸಾವಯವ ಇಂಗಾಲ ವೃದ್ದಿಸುವ ಕಡೆ ಪ್ರಯತ್ನ ನಡೆಸಲಿದೆ. ರಾಜ್ಯದಲ್ಲಿ ಕೃಷಿ ಅವಲಂಬಿತ ಭೂಮಿಯ ಪ್ರಮಾಣ 80 ಲಕ್ಷ ಹೆಕ್ಟೇರ್​ನಷ್ಟು ಇದ್ದರೆ, ಅದರಲ್ಲಿ 4 ರಿಂದ 5 ಲಕ್ಷ ಹೆಕ್ಟೇರ್ ಸವಳು-ಜವಳು ಆಗಿದೆ.
ಸರ್ಕಾರ ಏನು ಮಾಡಲಿದೆ?:ಭೂಮಿಯ ಫಲವತ್ತತೆ ಹೆಚ್ಚಿಸಲು 8 ರಿಂದ 10 ವರ್ಷಗಳು ಬೇಕಾಗುತ್ತದೆ. ಸಮಗ್ರ ಕೃಷಿಗೆ ಒತ್ತು ನೀಡಿದಾಗ ಆದಾಯದ ಕೊರತೆಯ ಅಂತರವನ್ನು ಸರ್ಕಾರದಿಂದಲೇ ತುಂಬಿ ಕೊಡಬೇಕಾಗುತ್ತದೆ. ಈಗ ರಾಜ್ಯದಲ್ಲಿ ಅಂದಾಜು 80 ಸಾವಿರ ಎಕರೆಯಲ್ಲಿ ಸಿರಿಧಾನ್ಯಗಳ ಉತ್ಪಾದನೆ ಇದೆ. ಎಕರೆಗೆ 10 ಸಾವಿರ ರೂ. ಪ್ರೋತ್ಸಾಹ ಧನವನ್ನು ಸರ್ಕಾರ ನೀಡುತ್ತಿದೆ. ಸಿರಿಧಾನ್ಯ ಬೆಳೆದಾಗ ಅದರ ಹಸಿರೆಲೆ ಉದುರಿ ಹಾಗೂ ರಾಸಾಯನಿಕ ಇಲ್ಲದ ಕಾರಣ ಮಣ್ಣು ಫಲವತ್ತಾಗುತ್ತದೆ. ಆ ರೀತಿಯ ಪ್ರೋತ್ಸಾಹವನ್ನು ವರ್ಷಕ್ಕೆ 50 ಸಾವಿರ ಹೆಕ್ಟೇರ್​ಗೆ ಹೆಚ್ಚಿಸುವುದು ಸರ್ಕಾರದ ಗುರಿ. ಆ ಮೂಲಕ ಹತ್ತು ವರ್ಷಗಳಲ್ಲಿ ಮಣ್ಣಿನ ಫಲವತ್ತತೆ ವೃದ್ಧಿಸುವ ಬಹುದೊಡ್ಡ ಆಶಯವನ್ನು ಸರ್ಕಾರ ಹೊಂದಿದೆ.
ಮಣ್ಣಿನಲ್ಲಿ ಏನಿರಬೇಕು?
* ಶೇ.25ರಷ್ಟು ನೀರು ? ಶೇ.25 ಗಾಳಿ
* ಶೇ. 45 ಖನಿಜ
* ಶೇ. 5ರಷ್ಟು ಸಾವಯವ ಪದಾರ್ಥ
* ಸಾವಯವ ಪದಾರ್ಥದಲ್ಲಿ ಶೇ. 1ರಷ್ಟು ಸೂಕ್ಷ್ಮ ಜೀವಾಣು
ಸಾವಯವ ಇಂಗಾಲ ಕುಸಿತಒಂದೂವರೆ ದಶಕದ ಹಿಂದೆ ಮಣ್ಣಿನಲ್ಲಿ ಸಾವಯವ ಇಂಗಾಲದ ಪ್ರಮಾಣ ಶೇ.1 ರಿಂದ 1.5 ರಷ್ಟು ಇತ್ತು. ಆದರೆ ಈಗ ಅದು 0.5ಕ್ಕೆ ಇಳಿದಿರುವ ಆತಂಕದ ಸ್ಥಿತಿ ಇದೆ. ಇದೇ ಪರಿಸ್ಥಿತಿ ಮುಂದುವರಿದರೆ ಕೃಷಿ ಉತ್ಪನ್ನಗಳಿಗೆ ಪರಾವಲಂಬಿ ಯಾಗಬೇಕಾಗುತ್ತದೆ. ಮಣ್ಣಿನ ಫಲವತ್ತತೆ ಕಡಿಮೆ ಇರುವ ಜಿಲ್ಲೆಗಳಲ್ಲಿ ಮಣ್ಣಿನ ಮಾದರಿಗಳನ್ನು ಪರೀಕ್ಷೆ ಮಾಡಿದಾಗ ಶೇ.0.5ಕ್ಕಿಂತ ಕಡಿಮೆ ಸಾವಯವ ಇಂಗಾಲ, ಶೇ.80 ಕ್ಕಿಂತ ಕಡಿಮೆ ಸತುಗಳು, ಶೇ.60 ಕ್ಕಿಂತ ಕಡಿಮೆ ಕಬ್ಬಿಣ ಅಂಶ ಕಂಡು ಬಂದಿದೆ. ರಸಸಾರ, ಲವಣಾಂಶ ಹೆಚ್ಚಾಗಿ ಪೋಷಕಾಂಶ ಕಡಿಮೆಯಾಗಿದೆ.
ಕುಂದಾಪುರದಲ್ಲಿ ಬಸ್​ ಚಕ್ರದಡಿಗೆ ಸಿಲುಕಬೇಕಿದ್ದ ಸೈಕಲ್​​ ಸವಾರ ಪವಾಡ ರೀತಿ ಪಾರು! ವಿಡಿಯೋ ವೈರಲ್​

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three + 15 =
Remember me
