ಬೆಂಗಳೂರು:ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರು ಕರ್ನಾಟಕ ಮಾಧ್ಯಮ ಅಕಾಡೆಮಿ ವತಿಯಿಂದ ಕೊಡ ಮಾಡುವ 2019ನೇ ಸಾಲಿನ ವಿಶೇಷ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕನ್ನಡದ ನಂ.1 ದಿನಪತ್ರಿಕೆ ‘ವಿಜಯವಾಣಿ’ಯ 13 ಮತ್ತು ದಿಗ್ವಿಜಯ 24*7 ನ್ಯೂಸ್ ಚಾನಲ್​ನ ಇಬ್ಬರು ಸೇರಿ 15 ಪತ್ರಕರ್ತರು ಅಕಾಡೆಮಿ ವತಿಯಿಂದ 2019ರಿಂದ 2022ರ ಸಾಲಿನ ವಿವಿಧ ಪ್ರಶಸ್ತಿಗಳಿಗೆ ಆಯ್ಕೆಯಾಗಿದ್ದಾರೆ.
ಮಾಧ್ಯಮ ಕ್ಷೇತ್ರದಲ್ಲಿನ ಸಾಧನೆ ಪರಿಗಣಿಸಿ ನಾಲ್ಕು ವರ್ಷಗಳ (2019, 2020, 2021, 2022) ಮಾಧ್ಯಮ ವಾರ್ಷಿಕ ಪ್ರಶಸ್ತಿ ಮತ್ತು ದತ್ತಿ ಪ್ರಶಸ್ತಿಗಳಿಗೆ ಅಕಾಡೆಮಿ ಅಧ್ಯಕ್ಷ ಕೆ.ಸದಾಶಿವ ಶೆಣೈ ಅಧ್ಯಕ್ಷತೆಯಲ್ಲಿ ನಡೆದ ಸರ್ವಸದಸ್ಯರ ಸಭೆಯಲ್ಲಿ ಅರ್ಹರನ್ನು ಆಯ್ಕೆ ಮಾಡಲಾಗಿದೆ.
ವಿಜಯವಾಣಿ ಡೆಪ್ಯೂಟಿ ಎಡಿಟರ್ ರಾಘವೇಂದ್ರ ಗಣಪತಿ, ಸಹಾಯಕ ಸಂಪಾದಕ ಪ್ರಭುದೇವ ಶಾಸ್ತ್ರಿಮಠ, ಶಿವಮೊಗ್ಗ ಬ್ಯೂರೋ ಮುಖ್ಯಸ್ಥ ಎನ್.ಡಿ. ಶಾಂತಕುಮಾರ್, ವರದಿಗಾರರಾದ ಕಲಬುರಗಿಯ ಬಾಬುರಾವ್ ಯಡ್ರಾಮಿ, ಶಿವಮೊಗ್ಗದ ಅರವಿಂದ ಅಕ್ಲಾಪುರ, ಕೆ.ಎಂ.ಪಂಕಜಾ, ಮೈಸೂರಿನ ಮುಳ್ಳೂರು ರಾಜು, ದಕ್ಷಿಣ ಕನ್ನಡದ ಪಿ.ಬಿ. ಹರಿಪ್ರಸಾದ್ ರೈ, ಹಾವೇರಿಯ ಆನಂದ ಮತ್ತಿಕಟ್ಟೆ ಸವಣೂರ, ದಿಗ್ವಿಜಯ ಚಾನಲ್​ನ ವಿಜಯ್ ಜೊನ್ನಹಳ್ಳಿ, ಧರಣೇಶ್ ಬೂಕನಕೆರೆ ಅವರಿಗೆ ಪ್ರಶಸ್ತಿ ಲಭಿಸಿದೆ.
ದತ್ತಿ ಪ್ರಶಸ್ತಿಗಳಲ್ಲಿ ಸಾಮಾಜಿಕ ಸಮಸ್ಯೆ ಲೇಖನಕ್ಕೆ ನೀಡುವ ಅಭಿಮಾನಿ ಪ್ರಶಸ್ತಿ ಬೆಂಗಳೂರಿನ ಹರೀಶ್ ಬೇಲೂರು, ಅತ್ಯುತ್ತಮ ಮಾನವೀಯ ವರದಿಗೆ ನೀಡುವ ಮೈಸೂರು ದಿಗಂತ ಪ್ರಶಸ್ತಿಗೆ ಹುಣಸೂರಿನ ಶಿವಕುಮಾರ್ ವಿ.ಆರ್. ಹಾಗೂ ಶಿವಮೊಗ್ಗದ ದೀಪಕ್ ಸಾಗರ್ ಪಾತ್ರರಾಗಿದ್ದಾರೆ
ಜೀವಮಾನ ಸಾಧನೆ ವಿಶೇಷ ಪ್ರಶಸ್ತಿಗೆ ತಲಾ 50 ಸಾವಿರ ರೂ., ವಾರ್ಷಿಕ ಪ್ರಶಸ್ತಿ ಪುರಸ್ಕೃತರಿಗೆ ತಲಾ 25 ಸಾವಿರ ರೂ. ನಗದು, ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಲಾಗುವುದು. ನಾಲ್ಕು ವರ್ಷಗಳು ಸೇರಿ 124 ಮಂದಿ ಪತ್ರಕರ್ತರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಹಾಗೆಯೇ ಒಟ್ಟು 21 ಪತ್ರಕರ್ತರನ್ನು ದತ್ತಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ನಾಲ್ಕು ವರ್ಷಗಳ ದತ್ತಿ ಪ್ರಶಸ್ತಿಗಳು
ಆಂದೋಲನ ಸಂಸ್ಥೆಯವರು ಸ್ಥಾಪನೆ ಮಾಡಿರುವ ಅತ್ಯುತ್ತಮ ಜಿಲ್ಲಾ ಪತ್ರಿಕೆಗೆ ನೀಡುವ ಆಂದೋಲನ ಪ್ರಶಸ್ತಿ, ಅಭಿಮಾನಿ ಸಂಸ್ಥೆಯವರು ಸ್ಥಾಪನೆ ಮಾಡಿರುವ ಅಭಿಮಾನಿ ಮತ್ತು ಅರಗಿಣಿ ಪ್ರಶಸ್ತಿಗಳು, ಮೈಸೂರು ದಿಗಂತ ಪತ್ರಿಕೆ ಸ್ಥಾಪಿಸಿರುವ ಮೈಸೂರು ದಿಗಂತ ಪ್ರಶಸ್ತಿ ಹಾಗೂ ಪತ್ರಕರ್ತ ಕೆ. ಶಿವಕುಮಾರ್ ಸ್ಥಾಪಿಸಿರುವ ಡಾ. ಬಿ.ಆರ್. ಅಂಬೇಡ್ಕರ್ ಮೂಕನಾಯಕ ಪ್ರಶಸ್ತಿಗೂ ಪುರಸ್ಕೃತರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಗಳು ತಲಾ 10 ಸಾವಿರ ನಗದು ಬಹುಮಾನ ಒಳಗೊಂಡಿದೆ.
2019ನೇ ಸಾಲುವಿಶೇಷ ಪ್ರಶಸ್ತಿ: ತಿಲಕ್ ಕುಮಾರ್, ಡೆಕ್ಕನ್ ಹೆರಾಲ್ಡ್
ವಾರ್ಷಿಕ ಪ್ರಶಸ್ತಿ ಪುರಸ್ಕೃತರು:-ಹರಿಪ್ರಕಾಶ್ ಕೋಣೆಮನೆ, ವಿಸ್ತಾರ ನ್ಯೂಸ್. ಪ್ರಶಾಂತ್ ನಾತು, ಸುವರ್ಣ ನ್ಯೂಸ್. ಸುದರ್ಶನ್ ಚನ್ನಂಗಿಹಳ್ಳಿ, ವಿಜಯ ಕರ್ನಾಟಕ. ಎಸ್. ರವಿಪ್ರಕಾಶ್ ಪ್ರಜಾವಾಣಿ, ದಿವಾಕರ್ ಸಿ.ಪಬ್ಲಿಕ್ ಟಿವಿ, ಅಹಿರಾಜ್, ದ ಹಿಂದು, ಪ್ರಕಾಶ್ ಜೋಶಿ, ಪತ್ರಕರ್ತರಾದ ಮನೋಜ್ ಆರ್., ಎಲ್. ಮಂಜುನಾಥ್, ನಾಗರಾಜ ಕುರವತ್ತೇರ್, ಬಿ. ಸುರೇಶ್, ಹೆಚ್. ವಿ. ಕಿರಣ್, ರಾಜಶೇಖರ್ ಎಸ್. ವಿನಾಯಕ್ ಭಟ್ ಮೂರೂರು, ಕೆಂಚೇಗೌಡ, ಅನಂತ ಶಯನ, ನಿಂಗಜ್ಜ, ಸೋಮಸುಂದರ ರೆಡ್ಡಿ ಸುಧಾಕರ್ ದರ್ಬೆ, ಮಾರುತಿ ಎಸ್.ಹೆಚ್., ಚನ್ನಪ್ಪ ಮಾದರ, ಜ್ಯೋತಿ ಇರ್ವತ್ತೂರು, ಸುಚೇಂದ್ರ ವೈ.ಲಂಬು, ಕೆ. ತಿಮ್ಮಪ್ಪ, ಆಲೂರು ಹನುಮಂತರಾಯ, ದೇವೆಂದ್ರಪ್ಪ ಕಲ್ಲಪ್ಪ ಹೆಳವಾರ್, ದೇೕವೇಂದ್ರ ಅವಂಟಿ, ತಿಪ್ಪೇಸ್ವಾಮಿ.
2020 ನೇ ಸಾಲುವಿಶೇಷ ಪ್ರಶಸ್ತಿ: ವಿಜಯ ಸಂಕೇಶ್ವರ, ಛೇರ್ಮನ್, ವಿಎಂಎಲ್
ವಾರ್ಷಿಕ ಪ್ರಶಸ್ತಿ ಪುರಸ್ಕೃತರು:-
ಡಿ.ಪಿ.ಸತೀಶ್, ಆನಂದ್ ಶೆಟ್ಟಿ, ಎ. ಎಂ. ಸುರೇಶ್, ರಾಕೇಶ್ ಪಿ., ಷಣ್ಮುಖ ಕೋಳಿವಾಡ, ಅಜಿತ್ ಹನುಮಕ್ಕನವರ್, ಪಿ. ವಿ. ವೆಂಕಟೇಶ್, ಆನಂದ್ ವಿ., ಆರ್. ರಾಮಕೃಷ್ಣ, ಮುಳ್ಳೂರು ರಾಜು, ಹನುಮಂತರಾವ್ ಬೈರಮಡಗಿ, ಬಿ. ಆರ್. ಉದಯ ಕುಮಾರ್, ದುನಿಯಾ ಮುನಿಯಪ್ಪ, ನಾಗೇಶ್ ಪಣತ್ತಲೆ, ಬಿ. ಎ. ಅರುಣ, ಹೊನ್ನಾಳಿ ಚಂದ್ರಶೇಖರ್, ಬಿ. ರವೀಂದ್ರ ಶೆಟ್ಟಿ, ಕೆ. ಚಂದ್ರಣ್ಣ, ಜಿ. ಪ್ರಕಾಶ್, ದಿನೇಶ್ ಪಟವರ್ಧನ್, ಅಸ್ಮಾ ನಜೀರ್, ಗೊನಾಳ ಜಿ.ಎಸ್., ಮಹೇಶ್ ನಾಚಯ್ಯ, ಡಿ.ಎಲ್.ಲಿಂಗರಾಜು, ಎಂ. ಚಂದ್ರಶೇಖರ್ , ಚಂದ್ರಹಾಸ ಹಿರೇಮಳಲಿ, ಬಾಳಪ್ಪ
2021 ನೇ ಸಾಲುವಿಶೇಷ ಪ್ರಶಸ್ತಿ: ಹೆಚ್. ಆರ್. ರಂಗನಾಥ್ ಮುಖ್ಯಸ್ಥರು, ಪಬ್ಲಿಕ್ ಟಿ.ವಿ.
ವಾರ್ಷಿಕ ಪ್ರಶಸ್ತಿ ಪುರಸ್ಕೃತರು:-ಶಶಿಧರ್ ನಂದಿಕಲ್, ಅ. ಮ. ಸುರೇಶ್, ಸಿ. ರುದ್ರಪ್ಪ, ಗೋವಿಂದೇಗೌಡ , ರಾಮಸ್ವಾಮಿ ಹುಲ್ಕೋಡು, ರಾಮನಾಥ ಶೆಣೈ, ವಿಜಯ್ ಜೊನ್ನಹಳ್ಳಿ, ವಿ.ಎಸ್.ಸುಬ್ರಮಣ್ಯ, ನಂಜನಗೂಡು ಮೋಹನ್ , ಗುರುವಪ್ಪ ಬಾಳೆಪುಣಿ, ಮುಳ್ಳೂರು ಶಿವಪ್ರಸಾದ್, ಬಂಡಿಗಡಿ ನಂಜುಂಡಪ್ಪ, ಎ. ಕಬೀರ್ ಕಾಂತಿಲ, ಕೆ. ಪಿ. ನಾಗರಾಜ್, ಕೆ. ಎನ್. ಚಂದ್ರಯ್ಯ, ವಿಕಾಸ್ ಎಂ.ಎಸ್., ಚಿದಾನಂದ, ಶಂಕರ ಬೆನ್ನೂರು, ಮಾರುತಿ ಬಾವಿದೊಡ್ಡಿ, ಗುರುರಾಜ ಹೂಗಾರ, ಆನಂದ ಸೌದಿ, ಶ್ರೀಕಾಂತ್ ಕೂಬಗಡ್ಡಿ, ಶ್ರೀನಿವಾಸ್ ನಾಯಕ್ ಇಂಡಾಜೆ, ಆರ್. ಶ್ರೀಧರ್, ಶಿವಕುಮಾರ್ ಹೊನ್ನೇಹಳ್ಳಿ, ಮಹೇಶ್ ಎನ್.,ವೀರಮಣಿ, ಮಿಂಚು ಶ್ರೀನಿವಾಸ್
2022 ನೇ ಸಾಲುವಿಶೇಷ ಪ್ರಶಸ್ತಿ: ಸುಶೀಲ ಸುಬ್ರಮಣ್ಯಂ, ಹಿರಿಯ ಆರ್ಥಿಕ ತಜ್ಞರು
ವಾರ್ಷಿಕ ಪ್ರಶಸ್ತಿ ಪುರಸ್ಕೃತರು:-ಸೂರ್ಯಪ್ರಕಾಶ್ ಪಂಡಿತ್, ಭಾಸ್ಕರ್ ಹೆಗಡೆ, ಪ್ರಭುಲಿಂಗ ಶಾಸ್ತ್ರಿ, ಯಾಸಿರ್ ಮುಸ್ತಾಕ್, ಬಿ. ವಿ. ಸುರೇಶ್ ಬೆಳಗಜೆ, ಶ್ರೀನಿವಾಸ್ , ಶಿವರಾಮ್ ಅಮರೇಗೌಡ ಗೋಣಾವರ, ಶಿವಣ್ಣ, ಹರಿಕಾಂತ್ ಟಿ. ವಿ., ಪ್ರಕಾಶ್ ಸಿ. ರಾಮಜೋಗಿಹಳ್ಳಿ, ಅನಂತ್ ಎಸ್. ಕಾರ್ಕಳ, ರವಿ ನಾಕಲಗೂಡು, ಸೋಮಶೇಖರ ಕೆರಗೋಡು, ಸಿದ್ದು ಬಿರಾದಾರ್, ರವಿಕುಮಾರ್ ಪಿ.ಎಸ್., ಕೆ. ಬಿ. ರಮೇಶ್ ನಾಯಕ್, ಆರ್. ಹೆಚ್. ಜಯಪ್ರಕಾಶ್, ಸುಕನ್ಯ, ದಿಲೀಪ್ ಕುರಂದವಾಡೆ, ಜಗದೀಶ ಕುಲಕರ್ಣಿ, ಜಿ. ಸಿ. ಲೋಕೇಶ್, ಅರವಿಂದ ಬಿರಾದಾರ್, ನಾಗರಾಜ್ ನೇರಿಗೆ, ಸತ್ಯಪ್ಪನವರ್, ಮು.ವೆಂಕಟೇಶಯ್ಯ, ಶರಣಯ್ಯ ಹಿರೇಮಠ್, ಸೋಮಶೇಖರ್ ಗಾಂಧಿ
ಡಾ.ಬಿ.ಆರ್. ಅಂಬೇಡ್ಕರ್ ‘ಮೂಕನಾಯಕ ಪ್ರಶಸ್ತಿ’ ತಳಸಮುದಾಯದ ಬಗೆಗಿನ ಬರಹಗಳ ಅಂಕಣಕಾರರಿಗೆ2019 ನೇ ಸಾಲಿನವಿ.ಟಿ.ರಾಜಶೇಖರ್, ಸಂಪಾದಕರು, ದಲಿತ ವಾಯ್ಸ್
2020 ನೇ ಸಾಲಿನಪೊ›|| ಇಂದಿರಾ ಆರ್.ಪ್ರಾಧ್ಯಾಪಕರು, ಮೈಸೂರು ವಿಶ್ವವಿದ್ಯಾಲಯ,
2021 ನೇ ಸಾಲಿನಪೊ›|| ಜಿ.ಎಸ್.ಜಯದೇವ್ಮುಖ್ಯಸ್ಥರು ದೀನಬಂಧು ಸ್ವಯಂ ಸೇವಾ ಸಂಸ್ಥೆ
2022 ನೇ ಸಾಲಿನಪೊ›|| ಮುಜಾಫರ್ ಅಸ್ಸಾದಿಪ್ರಾಧ್ಯಾಪಕರು, ಮೈಸೂರು ವಿಶ್ವವಿದ್ಯಾಲಯ,
ಅತ್ಯುತ್ತಮ ಜಿಲ್ಲಾ ಪತ್ರಿಕೆಗೆ ನೀಡುವಆಂದೋಲನ ಪ್ರಶಸ್ತಿ
2019 ನೇ ಸಾಲಿನನೃಪತುಂಗ, ದಿನಪತ್ರಿಕೆ ಕಲಬುರಗಿ
2020 ನೇ ಸಾಲಿನನಾವಿಕ ದಿನಪತ್ರಿಕೆ ಶಿವಮೊಗ್ಗ
2021 ನೇ ಸಾಲಿನಸಂಜೆ ದರ್ಪಣ ದಿನಪತ್ರಿಕೆ ಹುಬ್ಬಳ್ಳಿ
2022 ನೇ ಸಾಲಿನಜಯಕಿರಣ ದಿನಪತ್ರಿಕೆ ಮಂಗಳೂರು
ಅತ್ಯುತ್ತಮ ಸಿನಿಮಾ ಪತ್ರಕರ್ತರಿಗೆ ನೀಡುವಅರಗಿಣಿ ಪ್ರಶಸ್ತಿ
2019 ನೇ ಸಾಲಿನಗಿರೀಶ್ ರಾವ್ (ಜೋಗಿ)
2020 ನೇ ಸಾಲಿನಗಣೇಶ್ ಕಾಸರಗೊಡು
2021 ನೇ ಸಾಲಿನರಘುನಾಥ್ ಚ. ಹ.
2022 ನೇ ಸಾಲಿನಡಾ|| ಶರಣು ಹುಲ್ಲೂರು
ಸಾಮಾಜಿಕ ಸಮಸ್ಯೆ ಲೇಖನಕ್ಕೆ ನೀಡುವ ಅಭಿಮಾನಿ ಪ್ರಶಸ್ತಿ
2019 ನೇ ಸಾಲಿನಬಸವರಾಜ್ ಹವಾಲ್ದಾರ್ – ಪ್ರಜಾವಾಣಿ, ಹುಬ್ಬಳ್ಳಿ
2020 ನೇ ಸಾಲಿನಜೋಸೆಫ್ ಡಿಸೋಜ ಜ್ಞಾನದೀಪ ದಿನಪತ್ರಿಕೆ, ಹಾಸನ
2021 ನೇ ಸಾಲಿನಹರೀಶ್ ಬೇಲೂರು ವಿಜಯವಾಣಿ, ಬೆಂಗಳೂರು
2022 ನೇ ಸಾಲಿನಹಟ್ಟಿ ನಜೀರ್ ಮಿಯಾನ್ -ಸಂಜೆವಾಣಿ, ಕಲಬುರ್ಗಿ
ಮೈಸೂರು ದಿಗಂತ ಪ್ರಶಸ್ತಿಅತ್ಯುತ್ತಮ ಮಾನವೀಯ ಸಮಸ್ಯೆ ಲೇಖನಕ್ಕೆ
2019 ನೇ ಸಾಲಿನಚಂದ್ರಶೇಖರ ಮೊರೆ ಉದಯವಾಣಿ, ಬಾಗಲಕೋಟೆ
2020 ನೇ ಸಾಲಿನಪ್ರದೀಶ್ ಎಚ್. ಮರೋಡಿ-ಪ್ರಜಾವಾಣಿ, ಮಂಗಳೂರು
2021 ನೇ ಸಾಲಿನಪು ತಿ.ನಾ. ಪದ್ಮನಾಭ- ವಿಜಯ ಕರ್ನಾಟಕ, ರಾಮನಗರಶೀರ್ಷಿಕೆ : ಪುಸ್ತಕ ಹಿಡಿವ ಕೈಗೆ ಹಸುವಿನ ಹಗ್ಗ
2022 ನೇ ಸಾಲಿನಪ್ರಶಸ್ತಿಯನ್ನು ಇಬ್ಬರಿಗೆ ಸಮನಾಗಿ ಹಂಚಲಾಗಿದೆ.
ಶಿವಕುಮಾರ್ ವಿ.ಆರ್. ಹುಣಸೂರು- ವಿಜಯವಾಣಿ, ಮೈಸೂರುಶೀರ್ಷಿಕೆ : ಜೋಪಡಿಯಲ್ಲೇ ಜೀವನ ಬಂಡಿದೀಪಕ್ ಸಾಗರ್-ವಿಜಯವಾಣಿ, ಶಿವಮೊಗ್ಗಶೀರ್ಷಿಕೆ : ಕಗ್ಗಾಡಲ್ಲಿ ಮುಳುಗಿದ ಮೇಘಾನೆ ವನವಾಸಿಗಳು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + 5 =
Remember me
