|ರಮೇಶ್ ಮೈಸೂರುಬೆಂಗಳೂರು
ವೈದ್ಯಕೀಯ ಕೋರ್ಸ್​ಗಳ ದಾಖಲಾತಿಗಾಗಿ ನಡೆಸಲಾಗುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ರಾಜ್ಯದ ವಿದ್ಯಾರ್ಥಿಗಳು ಹೆಚ್ಚು ಒಲವು ತೋರುತ್ತಿರುವುದು ಕಂಡುಬಂದಿದೆ. ಕಳೆದ ಬಾರಿ 1,18,978 ಈ ಸಲ 1,33,255 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಆಕಾಂಕ್ಷಿಗಳ ಸಂಖ್ಯೆಗೆ ಹೋಲಿಸಿದಲ್ಲಿ ದೇಶದಲ್ಲೇ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ. ಮಹಾರಾಷ್ಟ್ರದಲ್ಲಿ ಈ ಬಾರಿ 2.56, ಉತ್ತರಪ್ರದೇಶದಲ್ಲಿ 2.19 ಲಕ್ಷ ಆಕಾಂಕ್ಷಿಗಳಿದ್ದು, ಮೊದಲೆರಡು ಹಾಗೂ ತಮಿಳುನಾಡು ಮೂರನೇ ಸ್ಥಾನದಲ್ಲಿದೆ. ಆದರೆ, ರಾಜ್ಯದಲ್ಲಿರುವ ಕಾಲೇಜುಗಳು, ಲಭ್ಯವಿರುವ ಸೀಟುಗಳ ಸಂಖ್ಯೆ ಹಾಗೂ ಆಕಾಂಕ್ಷಿಗಳ ಪ್ರಮಾಣದ ಅನುಪಾತ ಗಮನಿಸಿದಲ್ಲಿ ರಾಜ್ಯವೇ ಮುಂಚೂಣಿಯಲ್ಲಿದೆ ಎನ್ನಬಹುದು.
ಬಿಎಂಸಿಯೇ ಬೆಸ್ಟ್:ಬಿಎಂಸಿ ಎಂದೇ ಖ್ಯಾತವಾಗಿರುವ ಬೆಂಗಳೂರು ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆಯು ನೀಟ್ ಟಾಪರ್​ಗಳ ಫೇವರಿಟ್ ಆಗಿದೆ. ಅಖಿಲ ಭಾರತ ಕೋಟಾದಡಿ ಏಮ್್ಸ ನಂತಹ ಸಂಸ್ಥೆಗಳಲ್ಲಿ ಸೀಟು ಪಡೆಯುವ ಅವಕಾಶವಿದ್ದರೂ ರಾಜ್ಯದ ಅಭ್ಯರ್ಥಿಗಳು ಬಿಎಂಸಿಗೆ ಮೊರೆ ಹೋಗುತ್ತಾರೆ ಎನ್ನುತ್ತಾರೆ ನೀಟ್ ಸಮಾಲೋಚಕರು.
ಏಮ್್ಸ ಕೊರತೆ:ರಾಜ್ಯದಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್್ಸ) ಸ್ಥಾಪನೆಯಾಗಬೇಕೆಂಬ ಕೂಗು ಇದ್ದರೂ ಈವರೆಗೂ ಈ ಬೇಡಿಕೆ ಈಡೇರಿಲ್ಲ. ಹೀಗಾದಲ್ಲಿ ಆಲ್ ಇಂಡಿಯಾ ಕೋಟಾದಡಿ ಬೇರೆಯವರ ಪಾಲಾಗುವ ಸೀಟುಗಳ ಕೊರತೆ ನೀಗಿ ಈ ಮೂಲಕ ರಾಜ್ಯದವರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದೇ ಹೇಳಲಾಗುತ್ತಿದೆ. ನೀಟ್​ನಲ್ಲಿ ಅರ್ಹತೆ ಪಡೆದರೂ ದುಬಾರಿ ಶುಲ್ಕ ನೀಡಿ ಕಲಿಯುವುದು ಎಲ್ಲರಿಗೂ ಸಾಧ್ಯವಾಗದ ಸಂಗತಿ.
ಬಾಲಕಿಯರೇ ಹೆಚ್ಚು:ನೋಂದಾಯಿತರಲ್ಲಿ ಬಾಲಕಿಯರ ಸಂಖ್ಯೆಯೇ ಹೆಚ್ಚಾಗಿದೆ. 10,64,794 ಬಾಲಕಿಯರು ಪರೀಕ್ಷೆ ಬರೆದಿದ್ದರೆ, ಬಾಲಕರ ಸಂಖ್ಯೆ 8,07,538. ದುಬೈ, ಕುವೈತ್ ಸೇರಿ ಈ ಬಾರಿ 202 ನಗರಗಳ 3858 ಕೇಂದ್ರಗಳಲ್ಲಿ ಒಟ್ಟು 13 ಭಾಷೆಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಇದಕ್ಕಾಗಿ 30 ಸಾವಿರಕ್ಕೂ ಅಧಿಕ ಸಿಬ್ಬಂದಿ ನಿಯೋಜಿಸಲಾಗಿತ್ತು.
ಲಾಂಗ್ ಟರ್ಮ್​ ಕೋರ್ಸ್:ವೈದ್ಯ ಸೀಟು ಗಿಟ್ಟಿಸಬೇಕೆಂಬ ಛಲದಿಂದ ಒಂದು ವರ್ಷವನ್ನು ಇದಕ್ಕಾಗಿಯೇ ಮೀಸಲಿಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ದ್ವಿತೀಯ ಪಿಯು ಬಳಿಕ ಒಂದು ವರ್ಷದ ಸುದೀರ್ಘ ಸಮಯವನ್ನು ವಸತಿಸಹಿತ ತರಬೇತಿಗಾಗಿ ವ್ಯಯಿಸುತ್ತಿದ್ದಾರೆ. ಕಳೆದ ವರ್ಷ ತರಬೇತಿ ನೀಡಿದ 240 ಜನರಲ್ಲಿ 220 ವಿದ್ಯಾರ್ಥಿಗಳಿಗೆ ಸೀಟು ಸಿಕ್ಕಿತ್ತು. ಈ ಬಾರಿ 700 ಜನ ನೋಂದಣಿಯಾಗಿದ್ದು, ಇವರಲ್ಲಿ 600ಕ್ಕೂ ಅಧಿಕ ಜನರಿಗೆ ಸೀಟು ದೊರೆತಿದೆ ನೀಟ್ ಪರಿಶ್ರಮ ಅಕಾಡೆಮಿಯ ಈಶ್ವರ್ ಪ್ರದೀಪ್. ಒಂದು ವರ್ಷದ ಲಾಂಗ್ ಟಮ್ರ್ ಕೋರ್ಸ್​ಗೆ ನೋಂದಣಿ ಮಾಡಿಕೊಂಡವರಲ್ಲಿಯೇ ಹೆಚ್ಚಿನ ಫಲಿತಾಂಶ ಕಂಡುಬರುತ್ತದೆ ಎಂದು ಹೇಳುತ್ತಾರೆ.
ಬೆಳಗಾವಿಯ ರುಚಾ 4ನೇ ರ‌್ಯಾಂಕ್:ನೀಟ್​ನಲ್ಲಿ ಬೆಳಗಾವಿ ತಾಲೂಕಿನ ಉಚಗಾವಿಯ ರುಚಾ ಪಾವಶೆ ದೇಶಕ್ಕೆ 4ನೇ ಮತ್ತು ರಾಜ್ಯಕ್ಕೆ 2ನೇ ರ್ಯಾಂಕ್​ಗಳಿಸಿದ್ದಾರೆ. ನೀಟ್ ತಯಾರಿಗಾಗಿ ಒಂದು ವರ್ಷ ಮುಂದಿನ ಶಿಕ್ಷಣ ಮೊಟಕುಗಳಿಸಿದ್ದರು. ಕಳೆದ ಬಾರಿ ಅವರಿಗೆ ನೀಟ್​ನಲ್ಲಿ 500ನೇ ರ್ಯಾಂಕ್ ಬಂದಿತ್ತು. ಇದರಿಂದ ತೃಪ್ತಿಗೊಳ್ಳದ ವಿದ್ಯಾರ್ಥಿನಿ ಮತ್ತೊಂದು ಅವಕಾಶ ಬಳಸಿಕೊಂಡರು. ಈ ಪರೀಕ್ಷೆಗಾಗಿ ಎನ್​ಸಿಇಆರ್​ಟಿ ಪುಸ್ತಕಗಳು, ಹಳೇ ಪ್ರಶ್ನೆಪತ್ರಿಕೆಗಳನ್ನು ಅಭ್ಯಸಿಸಿ ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಎಲ್ಲಿಯೂ ಕೋಚಿಂಗ್ ಪಡೆದಿಲ್ಲ ಎನ್ನುವುದು ವಿಶೇಷ.
ನೀಟ್ ಪರೀಕ್ಷೆಯಲ್ಲಿ 10ನೇ ರ‌್ಯಾಂಕ್ ಗಳಿಸಿರುವ ಸಾತ್ವಿಕ್ ಹಾಗೂ 434ನೇ ರ‌್ಯಾಂಕ್ ಗಳಿಸಿರುವ ಸಂಜನಾಗೆ ಪರಿಶ್ರಮ ನೀಟ್ ಅಕಾಡೆಮಿಯಲ್ಲಿ ಸನ್ಮಾನಿಲಾಯಿತು. ಅಕಾಡೆಮಿ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಈಶ್ವರ್ ಮಾತನಾಡಿ, ಸಾತ್ವಿಕ್​ಗೆ ದೆಹಲಿಯ ಏಮ್್ಸ ಮೆಡಿಕಲ್ ಕಾಲೇಜಿನಲ್ಲಿ ಸೀಟು ಸಿಗುವುದು ಖಚಿತವಾಗಿದ್ದು, ಸಂಜನಾಗೆ ಜಮ್ೆಡ್​ಪುರದ ಮೆಡಿಕಲ್ ಕಾಲೇಜಿನಲ್ಲಿ ಸೀಟು ಸಿಗಲಿದೆ ಎಂದು ಹೇಳಲಾಗುತ್ತಿದೆ. ಅಕಾಡೆಮಿಯ 700 ವಿದ್ಯಾರ್ಥಿಗಳಲ್ಲಿ 600 ವಿದ್ಯಾರ್ಥಿಗಳಿಗೆ ಸೀಟು ಸಿಕ್ಕಿದೆ. ಇದು ಅಕಾಡೆಮಿ ಗೌರವ ಹೆಚ್ಚಿಸಲಿದೆ ಎಂದರು. ದಕ್ಷಿಣ ಭಾರತದಲ್ಲಿಯೇ ಅತಿ ಹೆಚ್ಚು ವಿದ್ಯಾರ್ಥಿಗಳಿಗೆ ಮೆಡಿಕಲ್ ಸೀಟು ಸಿಗುವುದಕ್ಕೆ ತಯಾರಿ ನಡೆಸಿದ ಮೊದಲ ಆಕಾಡೆಮಿ ಎಂದು ಹೇಳಿಕೊಳ್ಳುವುದಕ್ಕೆ ಖುಷಿ ಆಗುತ್ತದೆ ಎಂದರು.
ಸಾತ್ವಿಕ್ 720ಕ್ಕೆ 700 ಅಂಕ ಗಳಿಸಿದ್ದು, ಏಮ್ಸ್​ನಲ್ಲಿ ಓದುವ ಕನಸು ನೆನಸಾದ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ತಂದೆ ಫಾರ್ವಸಿಸ್ಟ್ ಆಗಿದ್ದು, ತಾಯಿ ಗೃಹಿಣಿಯಾಗಿದ್ದಾರೆ. ಕಳೆದ 7ರಿಂದ 8 ತಿಂಗಳ ಸತತ ಪರಿಶ್ರಮದಿಂದ ಈ ರೀತಿಯ ಫಲಿತಾಂಶ ಗಳಿಸುವುದಕ್ಕೆ ಸಾಧ್ಯವಾಯಿತು ಎಂದು ಸಾತ್ವಿಕ್ ತಿಳಿಸಿದರು. ಸಂಜನಾ ಜಮ್ೆಡ್​ಪುರದಲ್ಲಿ ಮೆಡಿಕಲ್ ಸೀಟು ಪಡೆಯುವುದು ಖಚಿತವಾಗಿದೆ. ಈಕೆಯ ತಂದೆ ರೈತರಾಗಿದ್ದು, ತಾಯಿ ಗೃಹಿಣಿ. ತಮ್ಮ ಸಾಧನೆಗೆ ಸಹಕರಿಸಿದ ಪರಿಶ್ರಮ ನೀಟ್ ಅಕಾಡೆಮಿಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇನ್ನುಳಿದಂತೆ 76ನೇ ರ್ಯಾಂಕ್​ನ್ನು ಸಮಸ್ತ್ ಪಡೆದರೆ, ಪ್ರಜ್ವಲ್ 141ನೇ ರ್ಯಾಂಕ್​ನ್ನು ಪಡೆದಿದ್ದಾರೆ.
ಬೆಳಿಗ್ಗೆ 5ರಿಂದ ರಾತ್ರಿ 12ರವರೆಗೆ ಓದುತ್ತಿದ್ದೆ. 7-8 ತಿಂಗಳು ಅಭ್ಯಾಸ ಮಾಡಿದ್ದರಿಂದ ಈ ರೀತಿಯ ಫಲಿತಾಂಶ ಬರುವುದಕ್ಕೆ ಸಾಧ್ಯವಾಯಿತು. ಕಳೆದ ಬಾರಿ ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದರಿಂದ, ಪರಿಶ್ರಮ ನೀಟ್ ಅಕಾಡೆಮಿಗೆ ಸೇರಬೇಕಾಯಿತು. ಇಲ್ಲಿನ ಶಿಕ್ಷಕರು ವಿಧ್ಯಾಭ್ಯಾಸಕ್ಕೆ ಸಂಪೂರ್ಣ ಸಹಕಾರ ನೀಡಿದರು.
|ಸಾತ್ವಿಕ್10ನೇ ರ‌್ಯಾಂಕ್ ವಿದ್ಯಾರ್ಥಿ
ಅಂದಂದಿನ ಪಾಠಗಳನ್ನು ಅದೇ ದಿನ ಅಭ್ಯಾಸ ಮಾಡಿದ್ದರಿಂದ ಹೆಚ್ಚು ಅಂಕ ಗಳಿಸುವುದಕ್ಕೆ ಸಾಧ್ಯವಾಯಿತು. ಪ್ರತಿಯೊಬ್ಬರಲ್ಲೂ ಆತ್ಮವಿಶ್ವಾಸವಿದ್ದರೆ ಯಾವ ಸಾಧನೆಯು ಕಷ್ಟವಲ್ಲ. ಜಮ್ೆಡ್​ಪುರದಲ್ಲಿ ಮೆಡಿಕಲ್ ಸೀಟು ಸಿಗುವ ಸಾಧ್ಯತೆಯಿರುವುದರಿಂದ ಅತಿಯಾದ ಖುಷಿಯಾಗಿದೆ.
|ಸಂಜನಾ434ನೇ ರ‌್ಯಾಂಕ್ ವಿದ್ಯಾರ್ಥಿನಿ
ಮೂಡುಬಿದಿರೆ:ನೀಟ್​ನಲ್ಲಿ ಆಳ್ವಾಸ್ ಪಿಯು ಕಾಲೇಜಿನ ಮನೋಜ್ ಎನ್. 690 ಅಂಕ ಪಡೆಯುವ ಮೂಲಕ ಕೆಟಗರಿ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ 54ನೇ ರ್ಯಾಂಕ್ ಗಳಿಸಿದ್ದಾರೆ. ರಾಹುಲ್ ಜಿ. ಪಾಟೀಲ್ 39ನೇ ರ್ಯಾಂಕ್ ಹಾಗೂ ನರಸೇಗೌಡ ಬಿ.ಎಂ. 85ನೇ ರ್ಯಾಂಕ್ ಗಳಿಸಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಲ್ಲಿ 600ಕ್ಕಿಂತ ಅಧಿಕ ಅಂಕಗಳನ್ನ 31 ವಿದ್ಯಾರ್ಥಿಗಳು 500ಕ್ಕಿಂತ ಅಧಿಕ ಅಂಕಗಳನ್ನ 237 ವಿದ್ಯಾರ್ಥಿಗಳು 4ಕ್ಕಿಂತ ಅಧಿಕ ಅಂಕಗಳನ್ನು 576 ವಿದ್ಯಾರ್ಥಿಗಳು 300ಕ್ಕಿಂತ ಅಧಿಕ ಅಂಕಗಳನ್ನು 1002 ವಿದ್ಯಾರ್ಥಿಗಳು ಪಡೆದಿದ್ದಾರೆ ಎಂದು ತಿಳಿಸಿದರು. ವಿದ್ಯಾರ್ಥಿಗಳ ಸಾಧನೆಯನ್ನು ಪ್ರಾಂಶುಪಾಲ ಪೊ›.ಎಂ.ಸದಾಕತ್ ಹಾಗೂ ಆಡಳಿತಾಧಿಕಾರಿ ಪ್ರದೀಪ್ ಕುಮಾರ್ ಶ್ಲಾಘಿಸಿದ್ದಾರೆ.

500ಕ್ಕಿಂತ ಅಧಿಕ ಅಂಕ ಗಳಿಸಿದ 237 ವಿದ್ಯಾರ್ಥಿಗಳಲ್ಲಿ 132 ವಿದ್ಯಾರ್ಥಿಗಳು ಸಂಸ್ಥೆಯ ದತ್ತು ಸ್ವೀಕಾರದಡಿ ವಿದ್ಯಾಭ್ಯಾಸ ಪೂರೈಸಿದ್ದು, ಎರಡು ಕೋಟಿ ರೂಪಾಯಿಗೂ ಅಧಿಕ ವೆಚ್ಚವನ್ನು ಈ ವಿದ್ಯಾರ್ಥಿಗಳಿಗೆ ಸಂಸ್ಥೆಯ ವತಿಯಿಂದ ವ್ಯಯಿಸಲಾಗಿದೆ. ಈ ಬಾರಿ 450ಕ್ಕಿಂತ ಅಧಿಕ ವಿದ್ಯಾರ್ಥಿಗಳು ಸರ್ಕಾರಿ ಕೋಟಾದಡಿ ವೈದ್ಯಕೀಯ ಎಂಬಿಬಿಎಸ್ ಸೀಟು ಪಡೆಯುವ ಸಾಧ್ಯತೆ ಇದೆ.
|ಡಾ.ಎಂ.ಮೋಹನ ಆಳ್ವಅಧ್ಯಕ್ಷರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ
ಮಂಗಳೂರು:ನೀಟ್​ನಲ್ಲಿ ಮಂಗಳೂರಿನ ಎಕ್ಸ್​ಪರ್ಟ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಆದಿತ್ಯ ಕಾಮತ್ ಅಮ್ಮೆಂಬಳ 28ನೇ ರ್ಯಾಂಕ್ (705 ಅಂಕ) ಪಡೆಯುವ ಮೂಲಕ ಅಭೂತಪೂರ್ವ ಸಾಧನೆ ಮಾಡಿದ್ದಾರೆ. ಕಾಲೇಜಿನ ಒಟ್ಟು 1,168 ವಿದ್ಯಾರ್ಥಿಗಳಲ್ಲಿ 1,094 ಅಂದರೆ ಶೇ.93.66 ವಿದ್ಯಾರ್ಥಿಗಳು ವೈದ್ಯಕೀಯ ಪ್ರವೇಶಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ.
ಜನರಲ್ ಮೆರಿಟ್​ನಲ್ಲಿ ಮೊದಲ ಒಂದು ಸಾವಿರ ರ್ಯಾಂಕ್​ಗಳಲ್ಲಿ 5 ರ್ಯಾಂಕ್ ಕಾಲೇಜಿನ ವಿದ್ಯಾರ್ಥಿಗಳಿಗೆ ದೊರೆತಿದೆ. ಎಂಟು ವಿದ್ಯಾರ್ಥಿಗಳು 675 ಅಂಕಕ್ಕಿಂತ ಅಧಿಕ ಪಡೆದರೆ, 20 ವಿದ್ಯಾರ್ಥಿಗಳು 650 ಅಂಕಕ್ಕಿಂತ ಅಧಿಕ, 43 ವಿದ್ಯಾರ್ಥಿಗಳು 625ಕ್ಕಿಂತ ಅಧಿಕ, 73 ವಿದ್ಯಾರ್ಥಿಗಳು 600ಕ್ಕಿಂತ ಅಧಿಕ, 146 ವಿದ್ಯಾರ್ಥಿಗಳು 550ಕ್ಕಿಂತ ಅಧಿಕ, 225 ವಿದ್ಯಾರ್ಥಿಗಳು 500ಕ್ಕಿಂತ ಅಧಿಕ ಅಂಕ ಪಡೆದಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಪೊ›. ನರೇಂದ್ರ ಎಲ್. ನಾಯಕ್ ತಿಳಿಸಿದರು. ಸಂಸ್ಥೆಯ ಉಪಾಧ್ಯಕ್ಷೆ ಡಾ.ಉಷಾಪ್ರಭಾ ಎನ್.ನಾಯಕ್, ಪ್ರಾಂಶುಪಾಲ ಪ್ರೊ.ರಾಮಚಂದ್ರ ಭಟ್ ಉಪಸ್ಥಿತರಿದ್ದರು.
ನೀಟ್​ನಲ್ಲಿ 28ನೇ ರ‌್ಯಾಂಕ್ ಪಡೆದಿರುವುದು ಅನಿರೀಕ್ಷಿತ. ನೀಟ್​ಗೆ ಪೂರ್ವಭಾವಿಯಾಗಿ 120ಕ್ಕೂ ಅಧಿಕ ಪರೀಕ್ಷೆ ಎದುರಿಸಿದ್ದೇನೆ. ಮುಂದಿನ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿನಲ್ಲಿ ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಸೈನ್ಸ್​ಗೆ ಸೇರ್ಪಡೆಗೊಂಡಿದ್ದೇನೆ.
|ಆದಿತ್ಯ ಕಾಮತ್28ನೇ ರ‌್ಯಾಂಕ್ ವಿದ್ಯಾರ್ಥಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:19 + 16 =
Remember me
